Posts

Showing posts from April, 2012

ಬದಲಾದ ಮನಸು; ಬದಲಾದ ಯುಗಾದಿ

Image
*  ಈ . ರಮೇಶ್   ನಿಂಬೇಮರದಹಳ್ಳಿ ಮಾರ್ಚ್ ‌ 22, 2009ರಂದು  ' ವಿಜಯ   ಕರ್ನಾಟಕ ' ದ  ' ಲವಲವಿಕೆ '  ವಿಭಾಗದಲ್ಲಿ   ಪ್ರಕಟವಾದ   ಲೇಖನ  . http://vijaykarnataka.indiatimes.com ಯುಗಾದಿ ಹಿಂದೂಗಳ ಪಾಲಿಗೆ ಬಹುದೊಡ್ಡ ಹಬ್ಬ. ಇದು ಬರೀ ಹಬ್ಬ ಮಾತ್ರವಲ್ಲ. ಇಲ್ಲಿ ಹಬ್ಬಕ್ಕೂ ಮೀರಿದ ಸಂಭ್ರಮವಿದೆ. ವಿಶೇಷ ಅಡುಗೆ, ಸಿಹಿ ತಿಂಡಿ, ಹೊಸ ಬಟ್ಟೆ, ಬಹುತೇಕ ಹಬ್ಬಗಳ ಸಾಮಾನ್ಯ ಲಕ್ಷಣ. ಆದರೆ ಯುಗಾದಿ ಎಂದರೆ ಇವಿಷ್ಟು ಮಾತ್ರವಲ್ಲ. ಇಲ್ಲಿ ಘಮಘಮಿಸೋ ಹೋಳಿಗೆಯ ಸವಿರುಚಿ ಇದೆ. ಸಾಲ ಮಾಡಿಯಾದರೂ ಹೊಸ ಬಟ್ಟೆ ತೊಡಲೇಬೇಕೆಂಬ ತುಡಿತ ಇದೆ. ಹಬ್ಬಕ್ಕೂ ಮೊದಲು ವಾರಗಟ್ಟಲೆ ಸಿದ್ಧತೆ ಇದ್ದರೆ, ಹಬ್ಬದ ನಂತರ ಮತ್ತಷ್ಟು ದಿನ ಅದನ್ನು ಮೆಲುಕು ಹಾಕುವ ಗುಣವಿದೆ. ಎಲ್ಲ ಹಬ್ಬಗಳನ್ನು ಮನಷ್ಯರಷ್ಟೇ ಆಚರಿಸಿದರೆ, ಯುಗಾದಿಯನ್ನು ಪ್ರಕೃತಿಯೂ ಆಚರಿಸುತ್ತದೆ. ಹೊಸ ತಳಿರಿನ ತೋರಣದಿಂದ, ಘಮಘಮಿಸೋ ಹೂಗಳಿಂದ ಅಲಂಕಾರಗೊಂಡು, ಹಸಿರು ಸಂಭ್ರಮದ ನಡುವೆ ಹಬ್ಬ ಆಚರಿಸುತ್ತೆ. ಪ್ರಕೃತಿ, ಅತ್ಯುನ್ನತ ಸೊಬಗಿನಲ್ಲಿ ಕಾಣುವ ಅಮೋಘ ಕಾಲ ಯುಗಾದಿ. ಹಳತೆಲ್ಲ ಹೊಸತಾಗಿ ಯುಗಾದಿಯ ಆಚರಣೆ ಹಳ್ಳಿಗಳಲ್ಲಿ ವಿಶಿಷ್ಟವಾಗಿರುತ್ತದೆ. ಯುಗಾದಿ ಎಂದರೆ ಊರಿಗೆ ಊರೇ ಮೈಕೊಡವಿ ನಿಲ್ಲುತ್ತದೆ. ವಾರ್ಷಿಕ ಸ್ವಚ್ಛತಾ ಕಾರ್ಯಾಚರಣೆ ಆರಂಭವಾಗುತ್ತದೆ. ಒಣಗಿದ ಗರಿಗಳನ್ನು ಒದ್ದು ಮಲಗಿದ್ದ ಗುಡಿಸಲುಗಳು ಇದ್...