Posts

Showing posts from December, 2012

ಎಲ್ಲಾದರೂ ನೀ ನಲಿವಿಂದಿರು

ಅಲ್ಲಾದರೂ ಇರು ಇಲ್ಲಾದರೂ ಇರು ಎಲ್ಲಾದರೂ … ನೀ ನಲಿವಿಂದಿರು ಏನಾದರೂ ಸರಿ ಎಂತಾದರೂ ಸರಿ ನನ್ನೆದೆಯಲಿ ನೀ ಸದಾ ಹಸಿರು ನಾ ನೊಂದರೂ ಸರಿ ನಾ ಬೆಂದರೂ ಸರಿ ನಿನ್ನ ನೆನಪಲೆ ನಾ ಉಳಿವೆ ಸವಿಗನಸಲಿ ನಿನ್ನ ನೆನೆಯುತ ಆ ನೆನಪೊಡನೆಯೇ ನಾ ಬೆಳೆವೆ ನಿನ್ನ ನಲಿವಿಗೆ ನನ್ನೊಲವಿಗೆ ಈ ನೆಮ್ಮದಿಯನೆ ಬಲಿ ಕೊಡುವೆ ನಿನ್ನ ಬಾಳಿಗೆ ನಾ ತೊಡಕಾದರೆ ಈ ದೇಹವನೆ ಮಣ್ಣಿಗಿಡುವೆ

ಒಂದು ಪುಟ್ಟ ಗ್ರಾಮದ ಹೂವಿನಂಥ ಕಥೆ

Image
* ಈ.ರಮೇಶ್‌  ನಿಂಬೆಮರದಹಳ್ಳಿ (ಡಿಸೆಂಬರ್‌ 26, 2012ರಂದು ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ) http://vijaykarnataka.indiatimes.com ಆ ಊರಿನಲ್ಲಿ ಹೊತ್ತು ಮೇಲೇರುವ ಮೊದಲೇ ಜನ ವಿರಳವಾಗುತ್ತಾರೆ. ಸದಾ ಪಿಸುಗುಟ್ಟುವ ಜಗಲಿ ಮೌನವಾಗುತ್ತದೆ. ಗಿಜಿಗುಟ್ಟುವ ಊರ ಮುಂದಿನ ಹೈಕಳ ಅಡ್ಡೆ ಖಾಲಿ ಹೊಡೆಯುತ್ತದೆ.  ಇನ್ನು ದನ ಕರುಗಳು ಕೊಟ್ಟಿಗೆ ಸೇರುವ ಗೋಧೂಳಿ ಹೊತ್ತಲ್ಲಿ ಒಂದಷ್ಟು ಧೂಳು, ಧೂಮ, ಸದ್ದು. ಆಮೇಲೆ ಮತ್ತೆ ರಸ್ತೆಗಳು ನಿರ್ಜನ.ಯಾವ ಮನೆಗೆ ಇಣುಕಿದರೂ ಹೂವಿನ ಘಮಲು. ಹರಡಿಕೊಂಡ ಹೂ ರಾಶಿ ನಡುವೆ ಯಂತ್ರದಂತೆ ಸರಸರನೆ ಹೂವು ಕಟ್ಟುವ ಕೈಗಳು. ಇದು ಶಿರಾ ತಾಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಬೆಳಗು ಮತ್ತು ಬೈಗಿನ ಸಮಯದಲ್ಲಿ ಕಂಡುಬರುವ ದೃಶ್ಯ. ಈಗ ಆ ಊರಿನ ತುಂಬೆಲ್ಲ ಹೂವಿನ ಪರಿಮಳ. ಎಲ್ಲರ ಬಾಯಲ್ಲೂ ಹೂವಿನ ಮಾತು. ಊರಿಗೆ ಊರೇ ಈಗ ಸೇವಂತಿಗೆಯಲ್ಲಿ ಮುಳುಗಿ ಹೋಗಿದೆ. ಎಲ್ಲಿ ನೋಡಿದರೂ ಹಳದಿ ಚೆಲ್ಲಿದ ಹಾಗೆ ಕಾಣುವ ಸೇವಿಂತಿಗೆ ಹೂವಿನ ತೋಟಗಳು. ಸೇವಂತಿಗೆಯಲ್ಲಿ ಚಾಂದಿನಿ, ಬಿಳಿಹೂವು, ಬೆಳ್ಳಟ್ಟಿ, ಕರ್ನಲ್‌, ಪಚ್ಚೆ ಮುಂತಾದ ತಳಿಗಳಿವೆ. ಇವುಗಳಲ್ಲಿ ಕೆಲವು ಮಳೆಗಾಲಕ್ಕೆ ಸೂಕ್ತವಾದರೆ ಇನ್ನು ಕೆಲವು ಬೇಸಿಗೆಯ ಒಣ ಹವೆಗೆ ಸೂಕ್ತ, ಕೆಲವು 3 ತಿಂಗಳ ಬೆಳೆ ಮತ್ತೆ ಕೆಲವು 6 ತಿಂಗಳ ಬೆಳೆ. 3 ತಿಂಗಳ ಬೆಳೆಯಾದರೆ ನಾಟಿ ಮಾಡಿದ ಒಂದೂವರೆ ತಿಂಗಳಿಗೆಲ್ಲ ಆದಾಯ ಶುರು. ಮುಂದಿನ ಎರಡು ತಿಂಗಳು ನಿರಂತರ ದುಡಿಮೆ,...

ಹೃದಯದಲ್ಲಿ ಮೋದಿ ಇನ್ನೂ ’ಪ್ರಚಾರಕ’

Image
* ಶಿವ ವಿಶ್ವನಾಥನ್ * ಕನ್ನಡಕ್ಕೆ: ಈ.ರಮೇಶ್‌ ನಿಂಬೆಮರದಹಳ್ಳಿ  (ವಿಜಯಕರ್ನಾಟಕದ ಸಂಪಾದಕೀಯ ಪುಟದಲ್ಲಿ ಡಿಸೆಂಬರ್‌ 17, 2012ರಂದು ಪ್ರಕಟವಾದ ಅನುವಾದಿತ ಲೇಖನ) http://vijaykarnataka.indiatimes.com/ ಇಪ್ಪತ್ತು ವರ್ಷಗಳ ಹಿಂದೆ ಬಾಬ್ರಿ ಮಸೀದಿ ಧ್ವಂಸಗೊಂಡ ಸಂದರ್ಭದಲ್ಲಿ ಮನಶಾಸ್ತ್ರಜ್ಞ ಆಶಿಸ್ ನಂದಿ, ಅಯೋಧ್ಯೆಯ ಗ್ರಹಿಕೆ ಮತ್ತು ಸಮಸ್ಯೆಗಳ ಕುರಿತು ಅಧ್ಯಯನ ಮಾಡಲು ನಿರ್ಧರಿಸಿದರು. ನಂದಿಯವರ ಕುತೂಹಲ ಅವರನ್ನು ಮಸೀದಿ ಧ್ವಂಸದ ವಾಸ್ತವಾಂಶಗಳಾಚೆ ಕೊಂಡೊಯ್ಯಿತು. ಕೊನೆಗೆ ಅವರೇ ಹೇಳುವಂತೆ ಒಂದು ಫ್ಯಾಸಿಸ್ಟ್ ವ್ಯಕ್ತಿತ್ವವನ್ನೂ ಪರಿಚಯ ಮಾಡಿಕೊಟ್ಟಿತು. ಅವರು ಕೇವಲ ಆರ್‌ಎಸ್‌ಎಸ್‌ನ ಒಬ್ಬ ಸಾಮಾನ್ಯ 'ಪ್ರಚಾರಕ'ರಾಗಿದ್ದರು. ಆದರೂ ಅವರ ಪ್ರಜ್ಞೆ, ಅಸಮಾನತೆ ಕುರಿತಾದ ಅವರ ಗ್ರಹಿಕೆ ಮತೀಯರಿಗೆ ರೋಮಾಂಚನವನ್ನುಂಟು ಮಾಡಿತ್ತು. ಅಪ್ಪಟ ನಿರಂಕುಶಾಧಿಕಾರಿ ವ್ಯಕ್ತಿತ್ವದ ಮಾದರಿಯ ಒಬ್ಬ ವ್ಯಕ್ತಿ ದೊರೆತಿದ್ದಕ್ಕೆ ಆಶಿಸ್ ನಂದಿಗೆ ಬಹಳ ಸಂತೋಷವಾಯಿತು. ಕಟ್ಟಾ ಬಲಪಂಥೀಯರಾಗಿದ್ದ ಆ 'ಪ್ರಚಾರಕ' ಆಗಿನ್ನೂ ಅಷ್ಟು ಜನಪ್ರಿಯರಾಗಿರಲಿಲ್ಲ. ಅವರ ಹೆಸರೇ ನರೇಂದ್ರ ಮೋದಿ. ಮುಂದಿನ 10 ವರ್ಷಗಳ ಕಾಲ ಅವರ ವ್ಯಕ್ತಿತ್ವ ವಿಕಸನಗೊಳ್ಳುತ್ತಾ ಹೋಯಿತು.