ಭಾರತ ಚಿತ್ರೋದ್ಯಮದ 'ವಿಶ್ವರೂಪ'

ನೋಡಲೇಬೇಕೆನಿಸಿದ ತುರ್ತು... ವಿಶ್ವರೂಪಂ ವಿವಾದ ಇತ್ಯರ್ಥವಾಗಿದೆ. ಹೀಗಾಗಿ ಚಿತ್ರಕ್ಕೆದುರಾಗಿದ್ದ ವಿಘ್ನ ನಿವಾರಣೆಯಾಗಿದೆ. ಆದರೆ, ಚಿತ್ರದ ಮೇಲೆ ಎದ್ದ 'ವಿವಾದ' ಹುಟ್ಟುಹಾಕಿದ ಪ್ರಶ್ನೆಗಳಿಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಇಷ್ಟೊಂದು ವಿವಾದ ಭುಗಿಲೇಳುವಂಥ ಅಂಶ ಏನಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೆಂದೇ ನಾನು ವಿಶ್ವರೂಪಂ ನೋಡಲು ಹೋದೆ. ಜೊತೆಗೆ ಕಮಲ್ ಹಾಸನ್ ನಟನೆ ಯಾವಾಗಲೂ ನೀಡುವ ಭರವಸೆ ನನ್ನನ್ನು ಥಿಯೇಟರ್‌ಗೆ ನುಗ್ಗುವಂತೆ ಮಾಡಿತು. ಯಾವುದರ ವಿಶ್ವರೂಪ? ವಿಶ್ವರೂಪಂ, ಭಯೋತ್ಪಾದನೆಯನ್ನು ಆಧರಿಸಿದ ಚಿತ್ರ. ಉಗ್ರರು ಆಫ್ಘಾನಿಸ್ತಾನದಲ್ಲಿ ತರಬೇತಿ ಪಡೆದು ಅಮೆರಿಕದ ಮರ್ಮಾಂಗಕ್ಕೆ ಹೊಡೆಯಲು ನ್ಯೂಯಾರ್ಕ್‌ನಲ್ಲಿ ಪರಮಾಣು ಬಾಂಬ್ ಇಡುವುದು. ಅದನ್ನು ಕಮಲ್ ಹಾಸನ್ ಮತ್ತು ಆತನ ತಂಡ ವಿಫಲಗೊಳಿಸುವುದೇ ಚಿತ್ರದ ಸ್ಟೋರಿ.