ಏಷಿಯಾದ ಆರ್ಥಿಕ ಬಲಾಢ್ಯನಾಗುವುದು ಹೇಗೆ?

ಅರವಿಂದ್ ಪನಗಾರಿಯಾ ಕನ್ನಡಕ್ಕೆ: ರಮೇಶ್ ನಿಂಬೆಮರದಹಳ್ಳಿ ಸೆಪ್ಟೆಂಬರ್ 27, 2014ರಂದು ವಿಜಯಕರ್ನಾಟಕದ ಸಂಪಾದಕೀಯ ಪುಟದಲ್ಲಿ ಪ್ರಕಟವಾದ ಅನುವಾದಿತ ಲೇಖನ http://goo.gl/4ub78J ಬಿಜೆಪಿ ಸರಕಾರದ ಮಹತ್ವಾಕಾಂಕ್ಷಿ ಮತ್ತು ಅದ್ಧೂರಿ 'ಮೇಕ್ ಇನ್ ಇಂಡಿಯಾ' ಅಭಿಯಾನ ಸೆಪ್ಟೆಂಬರ್ 25, 2014ರಂದು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ 1960 ಮತ್ತು 1970ರ ದಶಕದಲ್ಲಿ ಪೂರ್ವ ಏಷಿಯಾ ರಾಷ್ಟಗಳಾದ ದಕ್ಷಿಣ ಕೊರಿಯಾ, ತೈವಾನ್, ಸಿಂಗಾಪುರ ಹಾಗೂ ಇತ್ತೀಚಿನ ಚೀನಾದ ಅಭಿವದ್ಧಿಯ ಅನುಭವಗಳ ಕುರಿತು ಚಿಂತಿಸಲು ಇದು ಸೂಕ್ತ ಸಮಯ. ಪೂರ್ವ ಏಷಿಯಾದ ರಾಷ್ಟ್ರಗಳು ಪ್ರಧಾನವಾಗಿ ಕಾರ್ಮಿಕ ಕೇಂದ್ರಿತ ಕೈಗಾರಿಕೆಯ ಬೆಳವಣಿಗೆಯನ್ನು ಅವಲಂಬಿಸಿವೆ. ಅಲ್ಲದೆ ಏರುತ್ತಲೇ ಇರುವ ವೇತನದಲ್ಲೂ , ಉದ್ಯೋಗ ಸೃಷ್ಟಿಯನ್ನೇ ದೇಶದ ತಳಮಟ್ಟದ ಅರ್ಧದಷ್ಟು ಜನಸಂಖ್ಯೆಯ ಅಭ್ಯುದಯದ ಮಾರ್ಗವನ್ನಾಗಿ ಪರಿಭಾವಿಸಿವೆ. ಭಾರತ ನೇರವಾಗಿ ಕಾಯಿದೆ-ಕಾನೂನು, ಉತ್ತಮ ಉದ್ಯೋಗ ಸೃಷ್ಟಿಯ ಮೂಲಕ ಮತ್ತು ಬಹುಮಟ್ಟಿಗೆ ಅಭಿವೃದ್ಧಿಯ ಮೂಲಕ ಕಾರ್ಮಿಕರ ಸಾಮಾಜಿಕ ರಕ್ಷಣೆಯತ್ತ ಗಮನ ಕೇಂದ್ರೀಕರಿಸಿತು. ಪೂರ್ವ ಏಷಿಯಾದ ಆರ್ಥಿಕತೆಗಳಲ್ಲಿ ಕಾರ್ಮಿಕ ಕೇಂದ್ರಿತ ಉತ್ಪಾದನಾ ವಲಯದ ಸುಸ್ಥಿರವಾದ ಕ್ಷಿಪ್ರಬೆಳವಣಿಗೆಯು ಅರೆ ಕೌಶಲ್ಯದ ಕಾರ್ಮಿಕರಿಗೆ ಹೆಚ್ಚು ಸಂಬಳದ ಉದ್ಯೋಗಳನ್ನು ಸೃಷ್ಟಿಸಿತು. ಇದು ಕೃಷಿ ವಲಯದ ಕಾರ್ಮಿಕರು ಬಹತ್ ಪ್ರಮಾಣದಲ್ಲಿ ಉತ್ಪಾದನಾ ವಲಯಕ್ಕೆ ವಲಸೆ ಬ...