Posts

Showing posts from July, 2020

ಎಲ್ಲರ ಕಣ್ಣಿಗೆ ಮಾಯಾಗನ್ನಡಿ

Image
ಡಾ. ರಮೇಶ್‌ ನಿಂಬೆಮರದಹಳ್ಳಿ ಜಗತ್ತಿಗೆ ಹಲವು ಸಂಕಷ್ಟಗಳನ್ನು ತಂದೊಡ್ಡಿರುವ ಕೋವಿಡ್‌-19 ಹೊಸ ಸತ್ಯಗಳನ್ನೂ ನಮ್ಮೆದುರು ತೆರೆದಿಟ್ಟಿದೆ. ಓದು ಬರಹ ಕಲಿಯಲು ಶಾಲೆಯೊಂದೇ ತಾಣವಲ್ಲ ಎನ್ನುವುದೀಗ ಮನವರಿಕೆಯಾಗುತ್ತಿದೆ; ಕೆಲಸ ಮಾಡಲು ಕಚೇರಿಯೇನೂ ಅನಿವಾರ್ಯವಲ್ಲ ಎನ್ನುವುದೂ ಸಾಬೀತಾಗುತ್ತಿದೆ; ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನ, ಮಸೀದಿ, ಚರ್ಚುಗಳಿಗೇ ಹೋಗಬೇಕಿಲ್ಲ ಎನ್ನುವುದೂ ಜನರಿಗೆ ಅರಿವಾಗುತ್ತಿದೆ; ಅಷ್ಟೇ ಏಕೆ, ಸಭೆ-ಸಮಾರಂಭ, ದೊಡ್ಡಮಟ್ಟದ ರ‍್ಯಾಲಿಗಳನ್ನು ನಡೆಸಲು ಕೂಡ ಸಾವಿರಾರು ಇಲ್ಲವೇ ಲಕ್ಷಾಂತರ ಜನರನ್ನು ಒಂದೆಡೆ ಕಲೆಹಾಕಬೇಕಿಲ್ಲ ಎನ್ನವುದೂ ನಮಗೆ ಗೊತ್ತಾಗುತ್ತಿದೆ. ಇಂಥ ನೂರಾರು ಹೊಸ ಸಾಧ್ಯತೆ, ಸತ್ಯಗಳನ್ನು ಮನವರಿಕೆ ಮಾಡಿಕೊಟ್ಟಿದು ಕೊರೊನಾ ವೈರಸ್‌. ಆದರೆ, ಈ ಸಾಧ್ಯತೆಗಳನ್ನು ಆಗು ಮಾಡಿದ್ದು ತಂತ್ರಜ್ಞಾನ. ಇದೀಗ ಇದೇ ತಂತ್ರಜ್ಞಾನ ಈ ಎಲ್ಲ ಸಾಧ್ಯತೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಅಣಿಯಾಗಿದೆ. ಎರಡು ಆಯಾಮಗಳಲ್ಲಿರುವ ಬದುಕನ್ನು ಮೂರು ಆಯಾಮದಲ್ಲಿ ಕಣ್ಣ ಮುಂದೆ ತಂದು ನಿಲ್ಲಿಸಲಿದೆ. ಇಂಥ ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ನುಡಿ ಬರೆದಿರುವುದು ಎಂ ಆರ್‌ ಅಥವಾ 'ಮಿಕ್ಸ್‌ಡ್ ರಿಯಾಲಿಟಿ' (ಮಿಶ್ರಿತ ವಾಸ್ತವ). ಈ ತಂತ್ರಜ್ಞಾನವನ್ನು ಮೂರ್ತೀಕರಿಸಿ ರಿಲಯನ್ಸ್‌ ಜಿಯೊ ಇದೀಗ ಸ್ಮಾರ್ಟ್‌ ಗ್ಲಾಸ್‌ ಬಿಡುಗಡೆ ಮಾಡಿದೆ. ಮಿಕ್ಸ್‌ಡ್ ರಿಯಾಲಿಟಿ ತಂತ್ರಜ್ಞಾನದ ಸಾಧ್ಯತೆಗಳು ಅನಂತವಾ...