Posts

Showing posts from December, 2009

'ವಿಸ್ಮಯ’ಗಳ ಜಾಡಿನಲ್ಲಿ...

ಇದು ವೈಜ್ಞಾನಿಕ ಯುಗ. ಎಲ್ಲಿ ನೋಡಿದರೂ ವಿಜ್ಞಾನ-ತಂತ್ರಜ್ಞಾನದ ಚಮತ್ಕಾರಗಳು, ತಾಂತ್ರಿಕ ಉಪಕರಣಗಳು, ಎಲ್ಲದ್ದಕ್ಕೂ ತಂತ್ರಜ್ಞಾನದ ಸ್ಪರ್ಶ. ಜಗತ್ತೇ ಒಂದು ಹಳ್ಳಿಯೆಂಬ ಕಲ್ಪನೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ವಿಜ್ಞಾನ-ತಂತ್ರಜ್ಞಾನಗಳು ಇಂದು ಸಾವಿನ ರಹಸ್ಯವನ್ನೂ ಬೇಧಿಸುವಲ್ಲಿ ದಾಪುಗಾಲಿಟ್ಟಿವೆ. ಅಷ್ಟರಮಟ್ಟಿಗೆ ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಬದುಕನ್ನು ಆವರಿಸಿವೆ ಆದರೆ...??? ಆದರೆ ಇದಕ್ಕೆ ಸಮನಾಗಿ ಜನರ ಮನಸ್ಸುಗಳು ಬದಲಾಗಿವೆಯೇ? ವೈಜ್ಞಾನಿಕ ದೃಷ್ಟಿಕೋನ ಅವರ ಕಣ್ಣುಗಳಲ್ಲಿ ಮಿಂಚುತ್ತಿದೆಯೇ?, ಕಣ್ಣಿಗೆ ಕಂಡ ಸತ್ಯವನ್ನು ತಾರ್ಕಿಕವಾಗಿ ಚಿಂತಿಸುವ ಮನೋಭಾವ ರೂಡಿಯಾಗಿದೆಯೇ? ಇದಕ್ಕೆ ಉತ್ತರ ಮೌನ. ನಿಜಕ್ಕೂ ಇದು ಅಚ್ಚರಿಯ ಸಂಗತಿ. ಜಗತ್ತು ಈ ಪ್ರಮಾಣದಲ್ಲಿ ಬದಲಾವಣೆ ಕಾಣುತ್ತಿದ್ದರೂ, ಅದೇಕೆ ಭಾರತೀಯರು ಮಾತ್ರ ತಮ್ಮ ಮನಸ್ಸುಗಳನ್ನು ಬದಲಾವಣೆಯಗೆ ತೆರೆಯುತ್ತಿಲ್ಲ, ಇದಕ್ಕೆ ನಾನಾ ಕಾರಣಗಳಿವೆ. ಜನರಲ್ಲಿ ಇಂದಿಗೂ ಮೌಢ್ಯ ತಂಬಿ ತುಳುಕುತ್ತಿದೆ, ಧರ್ಮ-ಶಾಸ್ತ್ರಗಳೇ ಇವರ ಬದುಕಿನ ನಿಯಂತ್ರಕ ಶಕ್ತಿಯಾಗಿ ವಿಜೃಂಭಿಸುತ್ತಿವೆ. ಮಾನವೀಯತೆಗಿಂತ ಜಾತಿ, ಕಂದಾಚಾರಗಳೇ ಮೇಲುಗೈ ಸಾಧಿಸಿವೆ. ದುರಾದೃಷ್ಟದ ಸಂಗತಿಯೆಂದರೆ ಸಮಾಜದ ಓರೆಕೋರೆಗಳನ್ನು ನೇರ ಮಾಡಬೇಕಾದ, ಸಮಾಜದ ಮುನ್ನಡೆಗೆ ಮಾರ್ಗದರ್ಶಿಯಾಗಬೇಕಾದ, ಜನರ ಹೃದಯಗಳಲ್ಲಿ ಬದಲಾವಣೆಯ ಹರಿಕಾರನಾಗಬೇಕಾದ ಮಾಧ್ಯಮಗಳೂ ಕೂಡ ಸಮಾಜದ ಯಥಾವತ್‌ ಪ್ರತಿಬಿಂಬಗಳಂತೆ ವರ್ತಿಸುತ್ತ...

ಕನ್ನಡಕ್ಕಿದೆಂಥಾ ದುರ್ಗತಿ

Image
ಕುವೆಂಪು ಬರೆದ ’’ಶ್ರೀ ರಾಮಾಯಣ ದರ್ಶನಂ’’ ಕೃತಿ ಕನ್ನಡ ಸಾಹಿತ್ಯದ ಮೇರುಕೃತಿ, ಮಹಾಕಾವ್ಯ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಕಲಶಪ್ರಾಯವಾಗಿರುವ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲೊಂದು. ಆದರೆ ಇಂಥದ್ದೊಂದು ಮಹತ್ವದ ಕೃತಿ ಲಭ್ಯವಿಲ್ಲದ್ದು ಸಾಹಿತ್ಯ ಪ್ರೇಮಿಗಳಿಗೆ ಕಹಿ ಸತ್ಯವೇ ಸರಿ. ಇಂಥ ಮೇರು ಕೃತಿಯ ಲಭ್ಯತೆ ಏಕಿಲ್ಲ ಎನ್ನುವುದೇ ಸಾಹಿತ್ಯಾಸಕ್ತರ ದೊಡ್ಡ ಪ್ರಶ್ನೆ. ಕನ್ನಡ ಸಾಹಿತ್ಯಕ್ಕೆ, ಮೊಟ್ಟ ಮೊದಲ ಅತ್ಯುನ್ನತ ಸಾಹಿತ್ಯಕ ಪ್ರಶಸ್ತಿ ‘ಜ್ಞಾನಪೀಠ’ವನ್ನು ತಂದುಕೊಟ್ಟು, ಕನ್ನಡ ಸಾಹಿತ್ಯವನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದ ಒಂದು ಮಹಾನ್‌ ಕೃತಿ ಓದುಗರಿಗೆ ಲಭ್ಯವಿಲ್ಲ ಎಂದರೆ ಇದೆಂಥಾ ದುರ್ಗತಿ. ಇದು ಕನ್ನಡಿಗರು ತಲೆ ತಗ್ಗಿಸುವಂಥ ವಿಚಾರ. ಕುವೆಂಪು ಕನ್ನಡ ಸಾಹಿತ್ಯದ ಮೇರು ಪುರುಷ. ಅವರ ತಪಸ್ಸಿನ ಫಲವಾಗಿ ಆವಿರ್ಭವಿಸಿದ ಅನರ್ಘ್ಯ ಕಾವ್ಯವೊಂದು ಓದುಗರಿಗೆ ಲಭ್ಯವಾಗದಿರುವುದು ಅತ್ಯಂತ ಖೇದದ ಸಂಗತಿ. ಈ ಕೃತಿಯ ಮೂಲ ಹಕ್ಕು ಹೊಂದಿರುವ ಉದಯರವಿ ಪ್ರಕಾಶನ, ಇದನ್ನು ಮೊದಲು ಮುದ್ರಿಸಿತು. ಇದರ ನಂತರ ಕನ್ನಡ ಪುಸ್ತಕ ಪ್ರಾಧಿಕಾರ 2000ನೇ ವರ್ಷದಲ್ಲಿ ಸರ್ಕಾರದ ವಿಶೇಷ ಅನುದಾನದಿಂದ 880 ಪುಟಗಳ ಈ ಬೃಹತ್‌ ಕಾವ್ಯವನ್ನು ಕೇವಲ 40 ರೂಗಳ ರಿಯಾಯಿತಿ ದರದಲ್ಲಿ ಪ್ರಕಟಿಸಿತು. ಕೆಲವೇ ದಿನಗಳಲ್ಲಿ ಈ ಮೇರುಕೃತಿ ಸಹೃದಯರ ಮನೆ ಸೇರಿತು. ಎಲ್ಲೂ ಪ್ರತಿಗಳು ಲಭ್ಯವಾಗದಾದವು. ಅಂದಿನಿಂದ ಇದು ಮರು ಮುದ್ರಣಗೊಂಡಿಲ್ಲ. ನಾನು ಈ ಕೃತಿಗಾಗಿ ಸುತ್ತದೇ ...

’ಅವತಾರ್‌’ ಚಿತ್ರದ ಟ್ರೈಲರ್‌

’ಶ್ರೀ ರಾಮಾಯಣ ದರ್ಶನಂ’ ಎಲ್ಲಿ ದೊರೆವುದಯ್ಯ???

Image
ಶ್ರೀ ರಾಮಾಯಣ ದರ್ಶನಂ ಕೃತಿ ಕನ್ನಡ ಸಾಹಿತ್ಯದ ಮೆರುಕೃತಿ, ಮಹಾಕಾವ್ಯ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಕಳಶಪ್ರಾಯವಾಗಿರುವ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲೊಂದು. ಆದರೆ ಇಂಥದ್ದೊಂದು ಮಹತ್ತವ ಕೃತಿ ಲಭ್ಯವಿಲ್ಲದ್ದು ಸಾಹಿತ್ಯ ಪ್ರೇಮಿಗಳಿಗೆ ಕಹಿ ಸತ್ಯವೇ ಸರಿ. ಇದರ ಮರು ಮುದ್ರಣ ಏಕಿಲ್ಲ ಎನ್ನುವುದೇ ಸಾಹಿತ್ಯಾಸಕ್ತರ ದೊಡ್ಡ ಪ್ರಶ್ನೆ ಈ ಕೃತಿಯ ಮೂಲ ಹಕ್ಕು ಹೊಂದಿರುವ ಉದಯರವಿ ಪ್ರಕಾಶನ, ಇದನ್ನು ಮೊದಲು ಮುದ್ರಿಸಿತು. ಇದರ ನಂತರ ಕನ್ನಡ ಪುಸ್ತಕ ಪ್ರಾಧಿಕಾರ ಎಲ್ಲರೂ ಇದನ್ನು ಓದಬೇಕೆಂಬ ಮಹದುದ್ದೇಶದಿಂದ 2000ನೇ ವರ್ಷದಲ್ಲಿ ಸರ್ಕಾರದ ವಿಶೇಷ ಅನುದಾನದಿಂದ 880 ಪುಟಗಳ ಈ ಬೃಹತ್‌ ಕಾವ್ಯವನ್ನು ಕೇವಲ 40 ರಾಪಾಯಿಯ ರಿಯಾಯಿತಿ ದರದಲ್ಲಿ ಪ್ರಕಟಿಸಿತು. ಅದಾದ ನಂತರ ಬಹಷಃ ಇದು ಮರು ಮುದ್ರಣಗೊಂಡಿಲ್ಲ ಎಂಬುದು ನನ್ನ ನಂಬಿಕೆ. ಹಾಗಾಗಿ ಇದರ ಲಭ್ಯತೆ ದುರ್ಲಭ. ಶ್ರೀ ರಾಮಾಯಣ ದರ್ಶನಂ ಕೃತಿಯ ಗದ್ಯಾನುವಾದವನ್ನು ’ಶ್ರೀ ರಾಮಾಯಣ ದರ್ಶನಂ ವಚನಚಂದ್ರಿಕೆ’ ಎಂಬ ಹೆಸರಿನಲ್ಲಿ ದೇಜಗೌ (ದೇ.ಜವರೇಗೌಡ) ಮಾಡಿದ್ದಾರೆ. ನೀವು ಅದನ್ನು ಪರಾಮರ್ಶನ ಮಾಡಬಹುದು. ಕುವೆಂಪು ಅವರ ಮೂಲ ಕೃತಿ ಹಳಕನ್ನಡಲ್ಲಿದ್ದು ಒಬ್ಬ ಸಾಮಾನ್ಯ ಓದುಗನಿಗೆ ಅರ್ಥೈಸಿಕೊಳ್ಳಲು ಕಷ್ಟಸಾಧ್ಯ. ಹಾಗಾಗಿ ಇದರ ಗದ್ಯಾನುವಾದವನ್ನು ಪರಾಮರ್ಶಿಸುವುದರಲ್ಲಿ ಅರ್ಥವಿದೆ. ಇದು ಸಪ್ನ ಬುಕ್‌ ಹೌಸ್‌ ಮತ್ತು ಬಹುತೇಕ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ಇದರ ಬೆಲೆ 120 ರೂಪಾಯಿಗಳು. ಹಾಗೂ ಈ ಮೇರು...

ನೀಡುವ ಕೈಗಳಿವು...

Image
ಸ್ನೇಹಿತರೇ, ನಿಮ್ಮ ನೆರೆಹೊರೆಯಲ್ಲಿ ಎಂದರೆ ಮನೆಯ ಅಕ್ಕಪಕ್ಕ, ನಿಮ್ಮದೇ ಬಡಾವಣೆಯಲ್ಲಿ, ನಿಮ್ಮ ಸ್ನೇಹಿತರ ಮನೆಗಳಲ್ಲಿ, ನಿಮ್ಮ ಬಂಧು-ಬಾಂಧವರ ನಡುವೆ , ನಿಮ್ಮದೇ ಮನೆಯಲ್ಲಿ ಅಥವ ಇನ್ನೆಲ್ಲೋ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿದ್ದಾರಾ? ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ಮುಂದೆ ಓದಲಾಗದ ಬಡತನವೇ? ವಿದ್ಯಾರ್ಥಿ ಚುರುಕುಮತಿ, ಚಾಣಾಕ್ಷನಾಗಿದ್ದೂ ಕುಟುಂಬದ ಹಣಕಾಸಿನ ದಾರಿದ್ಯ್ರದಿಂದ ಓದನ್ನು ಅರ್ಧಕ್ಕೇ ನಿಲ್ಲಿಸಿ ದುಡಿಮೆಗಿಳಿಯಬೇಕಾದ ಅನಿವಾರ್ಯತೆ ಇದೆಯೇ? ಹೌದು ಇಂತಹ ಬಡ , ನತದೃಷ್ಟ ವಿದ್ಯಾರ್ಥಿಗಳು ನಮ್ಮ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹವರನ್ನು ಗುರ್ತಿಸಿ ಅವರಿಗೆ ನೆರವಾಗಬೇಕಾದ್ದು ನಮ್ಮೆಲ್ಲರ ಕರ್ತವ್ಯ. ನಮಗೆ ನೇರವಾಗಿ ಸಹಾಯ ಮಾಡುವ ಸಾಮರ್ಥ್ಯ ಇಲ್ಲವಾದರೆ ಕೊನೆಪಕ್ಷ ಸಹಾಯ ಸಿಗುವ ದಾರಿಯನ್ನಾದರೂ ತೋರಿಸಬಹುದಲ್ಲವೇ? ಬೇಡುವ ಕೈಗಳಿರುವಂತೆ ನೀಡುವ ಕೈಗಳೂ ಇದ್ದೇ ಇರುತ್ತವೆ. ಹತ್ತನೇ ತರಗತಿ ಪೂರ್ಣಗೊಳಿಸಿರುವ 80%ಗಿಂತ ಹೆಚ್ಚು ಅಂಕ ಗಳಿಸಿರುವ ಬಡ ವಿದ್ಯಾರ್ಥಿಗಳು ನಿಮ್ಮ ಕಣ್ಣಿಗೆ ಬಿದ್ದರೆ ದಯವಿಟ್ಟು ಅವರಿಗೆ ಈ ವಿಳಾಸ ಕೊಡಿ. ಇನ್‌ಫೋಸಿಸಿ‌ ಫೌಂಡೇಷನ್‌ ಪೋಷಣೆಯಲ್ಲಿರುವ ಪ್ರೇರಣಾ ಎಂಬ ಎನ್‌ಜಿಓ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡಲು ಮುಂದಾಗಿದೆ. ಇದು ನೆರವಿಗಾಗಿ ಬರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರೀಕ್ಷೆ ಏರ್ಪಡಿಸಿ, ಅದರಲ್ಲಿ ನಿಗದಿತ ಅಂಕ ಗಳಿಸಿದವರ ...

ಮೈಕ್ರೋಸಾಫ್ಟ್‌ನಿಂದ ಭಾರತೀಯ ಭಾಷೆಗಳ ಸಾಫ್ಟ್‌ವೇರ್‌

Image
ಮೈಕ್ರೋಸಾಫ್ಟ್‌ ಇಂಡಿಯಾ ಡೆವೊಲಪ್‌ಮೆಂಟ್‌ ಸೆಂಟರ್‌ (MSIDC) ಭಾರತೀಯ ಭಾಷೆಗಳನ್ನು ಲಿಪ್ಯಂತರ (ಒಂದು ಭಾಷೆಯನ್ನು ಮತ್ತೊಂದು ಭಾಷೆಯ ಲಿಪಿಗೆ ಪರಿವರ್ತಿಸುವುದು) ಮಾಡುವ ಸಾಫ್ಟ್‌ವೇರ್‌ ಬಿಡುಗಡೆಗೆ ಸಿದ್ಧವಾಗಿದೆ. ಇಂಗ್ಷಿಷ್‌ ಕೀ ಬೋರ್ಡ್‌ನಿಂದಲೇ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ನಲ್ಲಿ ಬರೆಯಲು ಈ ಸಾಫ್ಟ್‌ವೇರ್‌ ಅವಕಾಶ ನೀಡಲಿದೆ. ಈ ಸಾಫ್ಟ್‌ವೇರ್‌ನ ಬೀಟಾ ಆವೃತ್ತಿ ಆರಂಭದಲ್ಲಿ ಉಚಿತವಾಗಿ ಲಭ್ಯವಾಗಲಿದ್ದು, ಕನ್ನಡ, ತೆಲುಗು, ಹಿಂದಿ, ತಮಿಳು, ಬಂಗಾಳಿ ಮತ್ತು ಮಲಯಾಳಂ ಭಾಷೆಗಳಲ್ಲಿ ದೊರೆಯಲಿದೆ. ಈ ಸಾಪ್ಟ್‌ವೇರ್‌ ಬಳಸಿಕೊಂಡು ಮೈಕ್ರೋಸಾಫ್ಟ್‌ನಲ್ಲಿ ರನ್‌ ಆಗುವ ಯಾವುದೇ ಅ‌ಪ್ಲಿಕೇಶನ್‌ಲ್ಲಿ ಭಾರತೀಯ ಭಾಷೆಗಳಲ್ಲಿ ಟೈಪ್‌ ಮಾಡಬಹುದು. ಈ ನಡುವೆ ವಿಂಡೋಸ್‌ ಓಎಸ್‌ನ ಇತ್ತೀಚಿನ ಆವತ್ತಿ ವಿಂಡೋಸ್‌ 7 ಇತರೆ ಭಾರತೀಯ ಭಾಷೆಗಳಲ್ಲೂ ಲಭ್ಯವಾಗುವ ಸುದ್ದಿ ಬಂದಿದೆ. ಅಂತೂ ಕಂಪ್ಯೂಟರ್‌ ಕ್ಷೇತ್ರದಲ್ಲಿ ಐಟಿ ದೈತ್ಯ ಕಂಪನಿಗಳಿಂದ ಭಾರತೀಯ ಭಾಷೆಗಳಿಗೂ ಮಹತ್ವ ದೊರೆಯುತ್ತಿರುವುದು ಸಂತೋಷದ ವಿಚಾರ.