'ನಕಲಿ' ಅತ್ಯಾಚಾರ, ಅಸಲಿ 'ಹಿಂಸಾ'ಚಾರ

* ಈ.ರಮೇಶ್ ನಿಂಬೆಮರದಹಳ್ಳಿ ಮಹಿಳೆ, ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಸುಳ್ಳು ಅತ್ಯಾಚಾರ ಪ್ರಕರಣಗಳೂ ಹೆಚ್ಚುತ್ತಿವೆ. ಅತ್ಯಾಚಾರ ಎನ್ನುವ ಅಮಾನುಷ ಕೃತ್ಯ, ಮಹಿಳೆಯ ಆತ್ಮಘಾತಕ ಹೇಗೋ ಹಾಗೆ, ಅತ್ಯಾಚಾರ ವಿರೋಧಿ ಕಾನೂನು, ಕೆಲವರಿಗೆ ವಿರೋಧಿಗಳನ್ನು ಹಣಿಯುವ ಅಸ್ತ್ರವೂ ಆಗಿ ಪರಿಣಮಿಸಿದೆ. ಯಾವುದೇ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಯಾವುದೇ ಮಹಿಳೆ ಬಯಸಿದರೆ, ಬಹುಶಃ 'ಅತ್ಯಾಚಾರ ಆರೋಪ'ವೆಂಬ ಅಸ್ತ್ರಕ್ಕಿಂತ ಹರಿತವಾದ ಮತ್ತೊಂದು ಅಸ್ತ್ರ ಸಿಗಲು ಸಾಧ್ಯವೇ ಇಲ್ಲ. ಅತ್ಯಾಚಾರ ಆರೋಪ ಕಾನೂನು ಮತ್ತು ಸಮಾಜದ ದೃಷ್ಟಿಯಲ್ಲಿ ಅತ್ಯಂತ ಗಂಭೀರವಾದ ದುಷ್ಕೃತ್ಯವಾಗಿರುವುದರಿಂದ, ಆರೋಪಿ ಸ್ಥಾನದಲ್ಲಿರುವ ಪುರುಷನಿಗೆ ಇದು ಭಾರಿ ಪೆಟ್ಟು ನೀಡುವುದಂತೂ ಸತ್ಯ. ಇನ್ನು ಆರೋಪ ಸಾಬೀತಾದರಂತೂ (ಸಾಬೀತಾದ ಎಲ್ಲಾ ಆರೋಪಗಳೂ ಸತ್ಯಗಳಾಗಿರಬೇಕಿಂದಿಲ್ಲ. ಅವು ಸಾಬೀತು ಮಾಡಲಾದ 'ಸತ್ಯ'ಗಳೂ ಆಗಿರಲು ಸಾಧ್ಯ.) ಕಾನೂನಿನ ಕುಣಿಕೆಗೆ ಕೊರಳೊಡ್ಡುವುದು ಅನಿವಾರ್ಯ. ಇದಕ್ಕಿಂತ ಕ್ರೂರ ಮತ್ತು ಭಯಾನಕ ಎಂದರೆ ಸಾಮಾಜಿಕ ಅಪಮಾನ. ಈ ಆರೋಪ, ಆತನ ಬದುಕನ್ನೇ ಹೊಸಕಿ ಹಾಕಿಬಿಡುತ್ತದೆ. ಒಂದು ವೇಳೆ ಆರೋಪ ಮುಕ್ತನಾಗಿ ಹೊರಬಂದರೂ 'ಅತ್ಯಾಚಾರಿ' ಪಟ್ಟ ಆತನ ಬೆನ್ನು ಬಿಡುವುದಿಲ್ಲ. ಮಾನಸಿಕ ಹಿಂಸೆಯೊಂದೇ ಜೀವನವಿಡೀ ಆತನಿಗೆ ಉಳಿಯುವ ಆಸ್ತಿ. ಮಡದಿಗೆ ದುರುಳನಾಗಿ, ಮಕ್ಕಳಿಗೆ ಬೇಡವಾಗಿ ಬದುಕು ಸವೆಸುತ...