'ನಕಲಿ' ಅತ್ಯಾಚಾರ, ಅಸಲಿ 'ಹಿಂಸಾ'ಚಾರ
* ಈ.ರಮೇಶ್ ನಿಂಬೆಮರದಹಳ್ಳಿ
ಮಹಿಳೆ, ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಸುಳ್ಳು ಅತ್ಯಾಚಾರ ಪ್ರಕರಣಗಳೂ ಹೆಚ್ಚುತ್ತಿವೆ. ಅತ್ಯಾಚಾರ ಎನ್ನುವ ಅಮಾನುಷ ಕೃತ್ಯ, ಮಹಿಳೆಯ ಆತ್ಮಘಾತಕ ಹೇಗೋ ಹಾಗೆ, ಅತ್ಯಾಚಾರ ವಿರೋಧಿ ಕಾನೂನು, ಕೆಲವರಿಗೆ ವಿರೋಧಿಗಳನ್ನು ಹಣಿಯುವ ಅಸ್ತ್ರವೂ ಆಗಿ ಪರಿಣಮಿಸಿದೆ.
ಯಾವುದೇ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಯಾವುದೇ ಮಹಿಳೆ ಬಯಸಿದರೆ, ಬಹುಶಃ 'ಅತ್ಯಾಚಾರ ಆರೋಪ'ವೆಂಬ ಅಸ್ತ್ರಕ್ಕಿಂತ ಹರಿತವಾದ ಮತ್ತೊಂದು ಅಸ್ತ್ರ ಸಿಗಲು ಸಾಧ್ಯವೇ ಇಲ್ಲ. ಅತ್ಯಾಚಾರ ಆರೋಪ ಕಾನೂನು ಮತ್ತು ಸಮಾಜದ ದೃಷ್ಟಿಯಲ್ಲಿ ಅತ್ಯಂತ ಗಂಭೀರವಾದ ದುಷ್ಕೃತ್ಯವಾಗಿರುವುದರಿಂದ, ಆರೋಪಿ ಸ್ಥಾನದಲ್ಲಿರುವ ಪುರುಷನಿಗೆ ಇದು ಭಾರಿ ಪೆಟ್ಟು ನೀಡುವುದಂತೂ ಸತ್ಯ. ಇನ್ನು ಆರೋಪ ಸಾಬೀತಾದರಂತೂ (ಸಾಬೀತಾದ ಎಲ್ಲಾ ಆರೋಪಗಳೂ ಸತ್ಯಗಳಾಗಿರಬೇಕಿಂದಿಲ್ಲ. ಅವು ಸಾಬೀತು ಮಾಡಲಾದ 'ಸತ್ಯ'ಗಳೂ ಆಗಿರಲು ಸಾಧ್ಯ.) ಕಾನೂನಿನ ಕುಣಿಕೆಗೆ ಕೊರಳೊಡ್ಡುವುದು ಅನಿವಾರ್ಯ. ಇದಕ್ಕಿಂತ ಕ್ರೂರ ಮತ್ತು ಭಯಾನಕ ಎಂದರೆ ಸಾಮಾಜಿಕ ಅಪಮಾನ. ಈ ಆರೋಪ, ಆತನ ಬದುಕನ್ನೇ ಹೊಸಕಿ ಹಾಕಿಬಿಡುತ್ತದೆ. ಒಂದು ವೇಳೆ ಆರೋಪ ಮುಕ್ತನಾಗಿ ಹೊರಬಂದರೂ 'ಅತ್ಯಾಚಾರಿ' ಪಟ್ಟ ಆತನ ಬೆನ್ನು ಬಿಡುವುದಿಲ್ಲ. ಮಾನಸಿಕ ಹಿಂಸೆಯೊಂದೇ ಜೀವನವಿಡೀ ಆತನಿಗೆ ಉಳಿಯುವ ಆಸ್ತಿ. ಮಡದಿಗೆ ದುರುಳನಾಗಿ, ಮಕ್ಕಳಿಗೆ ಬೇಡವಾಗಿ ಬದುಕು ಸವೆಸುತ್ತಾನೆ.
ಸ್ವತಃ ಆತನ ಮಡದಿಯೇ ವಿಲನ್ ಆಗಿಬಿಡುವ ಸಾಧ್ಯತೆಯೇ ಹೆಚ್ಚು. ಇನ್ನು ಮಕ್ಕಳಂತೂ 'ಪಾಪಿ' ತಂದೆಯ ಬಳಿ ಸುಳಿಯಲೂ ಹಿಂದು ಮುಂದು ನೋಡುತ್ತವೆ. ಅಷ್ಟೇ ಅಲ್ಲ ಅವರ ಪಾಲಿಗೆ ಜೀವನವಿಡೀ ಕ್ರೂರ ತಂದೆಯಾಗಿಯೇ ಉಳಿದುಬಿಡುತ್ತಾನೆ. ಆರೋಪಿಯ ಮಡದಿ ಮಕ್ಕಳ ಬಾಹ್ಯ ಬದುಕು ಘನಘೋರ. ಎಲ್ಲೇ ಹೋದರೂ 'ಅತ್ಯಾಚಾರಿ'ಯ ಮಕ್ಕಳನ್ನು 'ಸಮಾಜಘಾತುಕ'ನ ಸಂತಾನವೆಂಬತೆಯೇ ಜನ ನೋಡುತ್ತಾರೆ. ಶಾಲೆಯಲ್ಲೂ ಆ ಮಕ್ಕಳಿಗೆ ಸಹಪಾಠಿಗಳ ಕುಹಕ ತಪ್ಪುವುದಿಲ್ಲ. ಅಪ್ಪನ ಪ್ರೀತಿಯನ್ನು ಅಪ್ಪಿಕೊಳ್ಳಲಾಗದೆ ಕೊರುಗುವುದು ಒಂದೆಡೆಯಾದರೆ, ಅಪ್ಪನ ಮುಖಕ್ಕಂಟಿದ ಮಸಿ ಈ ಮಕ್ಕಳ ಮುಖವನ್ನೂ ಕಪ್ಪಿಡುವಂತೆ ಮಾಡುತ್ತದೆ. 'ರೇಪಿಸ್ಟ್ ಫಾದರ್' ವಿಚಾರ ಎಲ್ಲೇ ಬಂದರೂ ಮಕ್ಕಳ ಮನಸು ಮುದುಡಿ ಹೋಗುತ್ತದೆ. ಅದು ಟಿವಿಯಲ್ಲಿ ಬರುವ ಸುದ್ದಿಯೇ ಇರಲಿ, ಚಲನಚಿತ್ರದಲ್ಲಿ ಬರುವ ಪಾತ್ರವೇ ಇರಲಿ. ಇವರ ಖಳನಾಯಕನೆಂಬ ಅಪ್ಪನನ್ನು ನೆನೆಸದೇ ಬಿಡುವುದಿಲ್ಲ.
ಇನ್ನು 'ಅತ್ಯಾಚಾರಿ'ಯ ಮಡದಿಯದ್ದು ನರಕ ಸದೃಶ ಬದುಕು. ಹೆಜ್ಜೆ ಹೆಜ್ಜೆಗೂ ಅವಮಾನ, ನಿಂದನೆ, ತಿರಸ್ಕಾರಗಳು ಮುಖಕ್ಕೆ ಬಡಿಯುತ್ತವೆ. ಬದುಕಿನ ಆಧಾರವಾಗಬೇಕಿದ್ದ ಗಂಡ, ಅವಳ ಬದುಕನ್ನು ಕಳಂಕವೆಂಬ ಕಮರಿಗೆ ತಳ್ಳಿಬಿಟ್ಟಿರುತ್ತಾನೆ. ತನ್ನದೇನೂ ತಪ್ಪಿಲ್ಲದಿದ್ದರೂ ಆತನನ್ನು ಮದುವೆಯಾಗಿದ್ದೇ ಮಹಾಪರಾಧವಾಗಿರುತ್ತದೆ. ಹೀಗಾಗಿ ಈಕೆ ಅಕ್ಕಪಕ್ಕದ ಮನೆಯ ಬಿಡುವಿರುವ ಗೃಹಿಣಿಯರಿಗೆ ಜಗಿಯುವ ಎಲೆ-ಅಡಿಕೆಯಂತಾಗುತ್ತಾಳೆ. ಅಗೆದೂ ಅಗೆದೂ ಕೊನೆಗೆ ಅವರೆಲ್ಲಾ ಬೀದಿಯಲ್ಲಿ ಉಗಿಯುತ್ತಾರೆ.
ಆ ಪತಿತನ ಪತ್ನಿ ಕೆಲಸಕ್ಕೆ ಹೋಗುವವಳಾಗಿದ್ದರೆ, ತಿರಸ್ಕಾರದ ನೋಟಗಳು ಇವಳನ್ನು ಕೆಕ್ಕರಿಸದೇ ಇರುವ ದಿನಗಳು ತೀರಾ ಅಪರೂಪ. ಗುಮಾನಿಯಿಂದ ನೋಡುವವರು ಕೆಲವರಾದರೆ, ಅವಳ ಬದುಕಿನ ಖಾಲಿ ಜಾಗ ತುಂಬಲು ತವಕಿಸುವವರೇ ಹೆಚ್ಚು. ಈ ಲಿಸ್ಟ್‌ನಲ್ಲಿ ಅವಳ ಬಾಸ್ ಇದ್ದರಂತೂ ಅವಳಿಗೆ ಕೆಲಸದ ಸ್ಥಳ ನರಕವಲ್ಲದೆ ಮತ್ತೇನೂ ಆಗಿರಲು ಸಾಧ್ಯವಿಲ್ಲ. ಇನ್ನು ನೆಂಟರಿಸ್ಟರ ಮನೆ ಬಾಗಿಲು ಇವಳ ಪಾಲಿಗೆ ಮುಚ್ಚಿದಂತೆಯೇ ಸರಿ. ಶುಭ ಸಮಾರಂಭಗಳಂತೂ ಮುಗಿದ ಅಧ್ಯಾಯ. ಆಗೊಮ್ಮೆ ಆಹ್ವಾನ ಬಂದರೂ ಅವು ಇವಳ ಪಾಲಿಗೆ ಅವಮಾನ ಸಮಾರಂಭಗಳೇ ಆಗಿಬಿಡುವ ಸಾದ್ಯತೆಯೇ ಹೆಚ್ಚು. ಸಮಾಜದ ವ್ಯಂಗ್ಯವನ್ನು ಎದುರಿಸಲಾಗದೆ, ಮಕ್ಕಳು ಕೇಳುವ ಮುಗ್ಧ ಪ್ರಶ್ನೆಗಳಿಗೆ ಉತ್ತರಿಸಲೂ ಆಗದೆ ವಿಲ ವಿಲ ಒದ್ದಾಡಿಕೊಂಡೇ ಬದುಕು ಸಾಗಿಸುವುದು ಅವಳಿಗೆ ಸಹಜವಾಗಿ ಹೋಗಿರುತ್ತದೆ.
ಇತ್ತ, ವಂಶ ಬೆಳಗುವ ಸುಪುತ್ರನನ್ನು ಹೆತ್ತ ಅಪ್ಪ-ಅಮ್ಮಂದಿರದು ಬೇರೆಯದೇ ಕಥೆ. ಸಮಾಜದಲ್ಲಿ ತಲೆ ಎತ್ತಿ ತಿರುಗಲಾರದೆ ಒಳಗೊಳಗೇ ಕುಗ್ಗಿ ಹೋಗುತ್ತಾರೆ. ಕುಟುಕು ಜೀವ ದೇಹದಲ್ಲಿರುವವರೆಗೂ ಕೊರೆಯುವ ಏಕೈಕ ಸಮಸ್ಯೆಯಾಗಿ ಅವರ ಮನಸ್ಸಲ್ಲಿ 'ಪಾಪಿ' ಮಗ ಸ್ಥಾನ ಪಡೆದುಬಿಡುತ್ತಾನೆ. ಮರೆಯೋಣವೆಂದರೂ ಮರೆಯಲಾಗದ ನೋವಾಗಿ ಕಾಡುತ್ತಲೇ ಇರುತ್ತಾನೆ. ಬದುಕಿನ ಇಳಿ ಸಂಜೆ ಇವರಿಗೆ ಶಾಶ್ವತವಾಗಿ ಕತ್ತಲೆಯೇ ಆಗಿಬಿಡುತ್ತದೆ. ಅತ್ಯಾಚಾರ ಆರೋಪಕ್ಕೆ ಗುರಿಯಾಗುವ ನತದೃಷ್ಟನಿಗೆ ಚೆಂದದ ಬದುಕು ಮರೀಚಿಕೆಯಾಗುತ್ತದೆ. ಆದರೆ, ಆತನ ಅವಲಂಬಿತರ ಬದುಕೂ ಕೂಡ ಮೂರಾಬಟ್ಟೆಯಾಗುವುದು ಇಲ್ಲಿನ ದುರಂತ.
ಈ ಅಪಾಯದ ಅರಿವಿದ್ದೇ, ದೆಹಲಿ ಕೋರ್ಟ್, ಸುಳ್ಳು ಅತ್ಯಾಚಾರ ಪ್ರಕರಣಗಳು ಸಮಾಜಕ್ಕೆ ತೀರ ಅಪಾಯಕಾರಿ ಎಂದು ಆಭಿಪ್ರಾಯಪಟ್ಟಿದೆ. ಇದು ನಿಜವಾಗಿಯೂ ಅತ್ಯಾಚಾರಕ್ಕೊಳಗಾದ ಮಹಿಳೆಯ ಆರ್ತನಾದ ನಮಗೆಲ್ಲಾ ಕೇವಲ ಕಿರುಚಾಟವಾಗಿ ಮಾತ್ರವೇ ಕೇಳಿಸುವಂತೆ ಮಾಡಿಬಿಡುತ್ತದೆ. ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಕೇಸ್ ಒಂದನ್ನು ಕೋರ್ಟ್ ವಿಚಾರಣೆ ನಡೆಸಿತು. ಆರೋಪ ಸುಳ್ಳು ಎಂದು ಸಾಬೀತಾದ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಿದ ನ್ಯಾಯಮೂರ್ತಿ ಆರ್.ತಿವಾರಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಅತ್ಯಾಚಾರಿಗೆ ಅನುಕಂಪ ತೋರಿಸುವುದಾಗಲೀ, ಆತನ ಕೃತ್ಯವನ್ನು ಮನ್ನಿಸಿಬಿಡಬೇಕೆಂಬುದಾಗಲಿ ಇಲ್ಲಿನ ನಿಲುವಲ್ಲ. ಬದಲು, ಯಾವುದೇ ತಪ್ಪು ಎಸಗದೆಯೂ ಅತ್ಯಾಚಾರ ಆರೋಪಕ್ಕೆ ಗುರಿಯಾಗುವ ವ್ಯಕ್ತಿಯ ಕೌಟುಂಬಿಕ ಮತ್ತು ಸಾಮಾಜಿಕ ಅಧಃಪತನವನ್ನು ತೋರಿಸುವುದು ಇಲ್ಲಿನ ಉದ್ಧೇಶ. ಅತ್ಯಾಚಾರ, ವರದಕ್ಷಿಣೆ ಕಿರುಕುಳದಂತಹ ಕಾನೂನುಗಳನ್ನು ಪರಿಷ್ಕರಿಸುವ ಅಗತ್ಯವಿದೆ. ದುಷ್ಕರ್ಮಿಗಳನ್ನು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳದಂತೆ ಮಾಡುವುದರ ಜೊತೆಗೆ, ಕಾನೂನಿನ ದುರಪಯೋಗ ತಪ್ಪಿಸಲು ಕಾನೂನಿನಲ್ಲೇ ಅವಕಾಶ ಕಲ್ಪಿಸಬೇಕಿದೆ. ಅಮಾಯಕನೊಬ್ಬನ ಬದುಕು ಅತ್ಯಾಚಾರ, ವರದಕ್ಷಿಣೆ ಕಿರುಕುಳದಂತಹ ಆರೋಪದಲ್ಲಿ ಕಮರಿ ಹೋಗಬಾರದು ಎಂಬುದಷ್ಟೇ ಇಲ್ಲಿನ ಕಳಕಳಿ. ಹಾಗೆಂದು ಅತ್ಯಾಚಾರಕ್ಕೊಳಗಾದ ಮಹಿಳೆಗೆ ನ್ಯಾಯ ನಿರಾಕರಿಸುವುದು ಘೋರ ಅನ್ಯಾಯ.

Comments
Post a Comment