ಭಾರತಕ್ಕೆ ಬಂತು ನೆಕ್ಸಸ್-7 : ಬೆಲೆ ಕೇವಲ 20 ಸಾವಿರ

ಗೂಗಲ್ ಕಂಪನಿಯ ಜನಪ್ರಿಯ ನೆಕ್ಸಸ್ ಟ್ಯಾಬ್ಲೆಟ್ ಕೊನೆಗೂ ಭಾರತಕ್ಕೆ ಬಂದಿದೆ. ಇಂದಿನಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಟ್ಯಾಬ್ಲೆಟ್ ಉತ್ಪಾದಕ ಆಸಸ್ ಕಂಪನಿ ದೃಢಪಡಿಸಿದೆ. 16 ಜಿಬಿ ಸಾಮರ್ಥ್ಯದ ನೆಕ್ಸಸ್ 7 ಬೆಲೆ ಕೇವಲ 19,990 ಎಂದು ಆಸಸ್ ಹೇಳಿದೆ. ಗೂಗಲ್ ಸಹಭಾಗಿತ್ವದೊಂದಿಗೆ ನೆಕ್ಸಸ್ ಉತ್ಪಾದಿಸಿರುವ ಆಸಸ್ ಕಂಪನಿ ಅಧಿಕೃತವಾಗಿ ಭಾರತದ ಮಾರುಕಟ್ಟೆಗೆ ನೆಕ್ಸಸ್7 ಟ್ಯಾಬ್ಲೆಟ್ ಬಿಟ್ಟಿಲ್ಲವಾದರೂ, ಆನ್‌ಲೈನ್ ಮಳಿಗೆಗಳು ಭಾರತದಲ್ಲಿ ಈಗಾಗಲೇ ಟ್ಯಾಬ್ಲೆಟ್ ಮಾರಾಟ ಆರಂಭಿಸಿವೆ. CNN-IBN ವರದಿ ಮಾಡಿರುವಂತೆ ಆಂಡ್ರಾಯಿಡ್ 4.1 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುವ ನೆಕ್ಸಸ್ 7 ಭಾರತದಾದ್ಯಂತ ಕ್ರೋಮ ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಲಭ್ಯವಾಗಲಿದೆ.