ಭಾರತಕ್ಕೆ ಬಂತು ನೆಕ್ಸಸ್-7 : ಬೆಲೆ ಕೇವಲ 20 ಸಾವಿರ

ಗೂಗಲ್ ಕಂಪನಿಯ ಜನಪ್ರಿಯ ನೆಕ್ಸಸ್ ಟ್ಯಾಬ್ಲೆಟ್ ಕೊನೆಗೂ ಭಾರತಕ್ಕೆ ಬಂದಿದೆ. ಇಂದಿನಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಟ್ಯಾಬ್ಲೆಟ್ ಉತ್ಪಾದಕ ಆಸಸ್ ಕಂಪನಿ ದೃಢಪಡಿಸಿದೆ. 16 ಜಿಬಿ ಸಾಮರ್ಥ್ಯದ ನೆಕ್ಸಸ್ 7 ಬೆಲೆ ಕೇವಲ 19,990 ಎಂದು ಆಸಸ್ ಹೇಳಿದೆ. ಗೂಗಲ್ ಸಹಭಾಗಿತ್ವದೊಂದಿಗೆ ನೆಕ್ಸಸ್ ಉತ್ಪಾದಿಸಿರುವ ಆಸಸ್ ಕಂಪನಿ ಅಧಿಕೃತವಾಗಿ ಭಾರತದ ಮಾರುಕಟ್ಟೆಗೆ ನೆಕ್ಸಸ್7 ಟ್ಯಾಬ್ಲೆಟ್ ಬಿಟ್ಟಿಲ್ಲವಾದರೂ, ಆನ್‌ಲೈನ್ ಮಳಿಗೆಗಳು ಭಾರತದಲ್ಲಿ ಈಗಾಗಲೇ ಟ್ಯಾಬ್ಲೆಟ್ ಮಾರಾಟ ಆರಂಭಿಸಿವೆ.
CNN-IBN ವರದಿ ಮಾಡಿರುವಂತೆ ಆಂಡ್ರಾಯಿಡ್ 4.1 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುವ ನೆಕ್ಸಸ್ 7 ಭಾರತದಾದ್ಯಂತ ಕ್ರೋಮ ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಲಭ್ಯವಾಗಲಿದೆ.
ನೆಕ್ಸಸ್ 7 ವಿಶ್ವದಾದ್ಯಂತ ಗ್ಯಾಜೆಟ್ ವಿಮರ್ಶಕರ ಮೆಚ್ಚುಗೆ ಗಳಿಸಿದೆ. ಇದೇ ಕ್ಯಾಟಗರಿಯ ಇತರೆ ಕಂಪನಿಗಳ ಟ್ಯಾಬ್ಲೆಟ್‌ಗಳಿಗೆ ಹೋಲಿಸಿದೆ ಇದರ ಬೆಲೆ ತೀರಾ ಕಡಿಮೆ. ನೆಕ್ಸಸ್ 7 ಬೆಲೆ ಕೇವಲ 19,990 ಇರುವುದು ವಿಮರ್ಶಕರ ಗಮನ ಸೆಳೆದಿದೆ. ಕಡಿಮೆ ಬೆಲೆ ಮತ್ತು ವಿಶಿಷ್ಟ ಫೀಷರ್‌ಗಳಿಂದ ಕೂಡಿರುವ ನೆಕ್ಸಸ್ ಲಂಡನ್ T3 ಕೊಡುವ 'ಗ್ಯಾಜೆಟ್ ಆಫ್ ದಿ ಇಯರ್' ಪ್ರಶಸ್ತಿ ಪಡೆದುಕೊಂಡಿದೆ.

* IPS (in-plane switching) ಟೆಕ್ನಾಲಜಿಯೊಂದಿಗೆ 7 ಇಂಚು ಟಚ್ ಸ್ಕ್ರೀನ್ ಪರದೆ
* 1,280×800 ಪಿಕ್ಸೆಲ್‌ಗಳ ರೆಸೊಲ್ಯೂಷನ್
* 1.3GHz ಎನ್‌ವಿಡಿಯ ಟೆಗ್ರಾ 3 ಕ್ವಾಡ್ ಕೋರ್ ಪ್ರೊಸೆಸರ್
* ಮೈಕ್ರೋ ಯುಎಸ್‌ಬಿ ಪೋರ್ಟ್
* 1 ಜಿಬಿ ರ್ಯಾಮ್
* 1.2 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮೆರಾ
* ಆದರೆ ಹಿಂಬದಿ ಕ್ಯಾಮೆರಾ ಇಲ್ಲ
Comments
Post a Comment