Posts

Showing posts from 2018

ಆಧುನಿಕತೆಯೆಂಬ ‘ಆದರ್ಶ’ದ ಬಲೆಯೊಳಗೆ

Image
- ರಮೇಶ್ ‌ ನಿಂಬೆಮರದಹಳ್ಳಿ ಬ್ಲರ್ಬ್ ‌: ಫೀಡಮ್ ‌, ಪ್ರೈವೆಸಿ , ಐಡೆಂಟಿಟಿ , ಸೆಲ್ಫ್ ‌ ರೆಸ್ಪೆಕ್ಟ್ ‌ ಮೇಲ್ನೋಟಕ್ಕೆ ಆದರ್ಶ ಮೌಲ್ಯಗಳಂತೆ ಕಂಡರೂ ಭಾರತೀಯರಿಗೆ ಅಪಾಯಕಾರಿ ಎಂಬುದನ್ನು ಇವತ್ತಿನ ವಿದ್ಯಾಮಾನಗಳೇ ಸಾಕ್ಷೀಕರಿಸುತ್ತವೆ . ಈ ಪರಿಕಲ್ಪನೆಗಳನ್ನು ಸೃಜಿಸಿದ ಪಾಶ್ಚಾತ್ಯ ಚಿಂತನೆಯೇ ಇವುಗಳಿಗೆ ವಿರುದ್ಧವಾದ ಫೇಸ್ ‌ ಬುಕ್ ‌ ಅನ್ನೂ ಸೃಷ್ಠಿಸಿದೆ .   ಈ ಯಾವ ಕಲ್ಪನೆ ಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಅರ್ಥವಿ ಲ್ಲ . ನಮ್ಮ ಸಂಸ್ಕೃತಿಗೆ ಒಗ್ಗದ , ಸಲ್ಲದ ಪರಿಕಲ್ಪನೆಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡು ಸಂಘರ್ಷದಲ್ಲಿ ಬದುಕು ಸವೆಸುತ್ತಿ ದ್ದೇವೆ . ------------------------------------- ಈ ಕಾಲಘಟ್ಟದ ಯುವ ಜನತೆಯನ್ನು ನೋಡಿದರೆ ದೇಶದ ಭವಿಷ್ಯದ ಬಗ್ಗೆ ಆತಂಕವಾಗಲಾರದೇ ಇರದು . ಒಂದು ಕಡೆ ಚುರುಕು , ಕೌಶಲ್ಯ , ಬುದ್ಧಿಮತ್ತೆಯಲ್ಲಿ ವಯಸ್ಸಿನ ಹಂಗಿಲ್ಲದೆ ಬೆಳೆಯುತ್ತಿದ್ದಾರೆ , ಮತ್ತೊಂದು ಕಡೆ ಅಶಿಸ್ತು ಅವರ ಬದುಕಿನ ಮೌಲ್ಯವಾಗುತ್ತಿದೆ ; ತಾಳ್ಮೆ ಎಂಬ ಪದ ಕ್ಕೆ ಇವರ ಬಳಿ ಅರ್ಥವೇ ಇಲ್ಲ ; ಇವ ದ ರೇನಿದ್ದರೂ ಸೂಪರ್ ‌ ಸಾನಿಕ್ ‌ ವೇಗ . ಎಲ್ಲವೂ ಕಣ್ರೆಪ್ಪೆ ಬಡಿಯುವಷ್ಟರಲ್ಲಿ ಆಗಿ ಬಿಡಬೇಕು ಎನ್ನುವ ಧಾವಂತ . ನೈತಿಕತೆ ಎನ್ನುವುದನ್ನು ಹಳೆಯ ಕಾಲದ ಗುಜರಿ ವಸ್ತು ಎಂಬಂ ತಾಗಿದ್ದು , ಯಾರಿಗೂ ಬೇಡವಾದ ವಿಚಾರವ...