ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'

ಈ.ರಮೇಶ್ ನಿಂಬೆಮರದಹಳ್ಳಿ ಬೆಂಗಳೂರು
ramesh.eranna@timesgroup.com

                  Speech-to-Text
ಒತ್ತು, ಕೊಂಬು, ದೀರ್ಘಕ್ಷರಗಳಿರುವ ಕನ್ನಡದಲ್ಲಿ ಟೈಪ್ ಮಾಡುವುದು ಅಷ್ಟು ಸುಲಭವಲ್ಲ . ಹೀಗಾಗಿ ಹೇಳುವುದನ್ನು ಯಾರಾದರೂ ಟೈಪ್ ಮಾಡಿಕೊಂಡರೆ ಎಷ್ಟು ಚೆನ್ನ ಅನ್ನಿಸುವುದೂ ಸುಳ್ಳಲ್ಲ. ಅಂಥ ಆಸೆ ಈಗ ಈಡೇರಿದೆ. ನಾವು ಹೇಳಿದ್ದನ್ನು ಸರಾಗವಾಗಿ ಬರೆದು ಕೊಳ್ಳುವ ಸ್‌ಟಾವೇರ್ ಸಿದ್ಧವಾಗಿದೆ. ಅದೇ ವಾಗಕ್ಷರ.

ಹೇಳಿದ್ದನ್ನು ಬರೆದುಕೊಳ್ಳುವ ಈ ಸ್‌ಟಾವೇರ್ ಅನ್ನು ಬೆಂಗಳೂರಿನಲ್ಲಿರುವ ‘ಜ್ಞಾನಿ ಇನ್ನೋವೇಷನ್ಸ್’ ಅಭಿವೃದ್ಧಿಪಡಿಸಿದೆ. ಮೊದಲು ಬಿಡುಗಡೆಯಾದ ‘ಕನ್ನಡ ವಾಯ್ಸ್ ನೋಟ್ಸ್’ ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ಇದೀಗ ಕನ್ನಡ ಗಣಕ ಪರಿಷತ್ತು ಕಂಪ್ಯೂಟರ್‌ಗೆ ಅಳವಡಿಸಿದೆ. 

98% ನಿಖರತೆ ಇದರ ವಿಶೇಷ: ವಾಗಕ್ಷರ ನಮ್ಮ ಮಾತುಗಳನ್ನು ಶೇ.98ರಷ್ಟು ಕರಾರುವಕ್ಕಾಗಿ ಗ್ರಹಿಸುತ್ತದೆ. ತಮ್ಮ ಎನ್‌ಎಲ್‌ಪಿ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್) ಎಂಜಿನ್‌ಗೆ ಕನ್ನಡದಲ್ಲಿ ವೈವಿಧ್ಯಮಯ ಧ್ವನಿ ನೀಡಿ ತರಬೇತಿ ನೀಡಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಇದನ್ನು ರೂಪಿಸಿದ ಜ್ಞಾನಿ ಇನ್ನೋವೇಷನ್ಸ್ ಕಂಪನಿಯ ಬ್ಯುಸಿನೆಸ್ ಹೆಡ್ ನರೇಂದ್ರ. ಮುಂದೆ ಕನ್ನಡ ವಿವಿಧ ಬಗೆಯ ಉಪಭಾಷೆಗಳು, ಪ್ರಾದೇಶಿಕ ಭಿನ್ನತೆಗಳನ್ನೂ ಕೂಡ ಈ ಸ್‌ಟಾವೇರ್ ಗುರುತಿಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸುವ ಗುರಿ ಇದೆ ಎಂದವರು ಹೇಳುತ್ತಾರೆ. 

ಶಿಷ್ಟ ಮಾತ್ರವಲ್ಲ, ಆಡುನುಡಿಯೂ ಸಾಧ್ಯ: ವಾಗಕ್ಷ ರವು, ಶಿಷ್ಟ ಕನ್ನಡವನ್ನು ಸ್ಫುಟವಾಗಿ ಗ್ರಹಿಸುತ್ತದೆ. ಜತೆಗೆ, ನಿಧಾನವಾಗಿ ಮತ್ತು ಸ್ಪಷ್ಟವಾಗಿ ಉಚ್ಚರಿಸಿದರೆ ಯಾವುದೇ ಪ್ರಾದೇಶಿಕ ಸೊಗಡಿನ ಭಾಷೆ ಮತ್ತು ಆಡು ಭಾಷೆಯನ್ನೂ ಇದು ಗುರುತಿಸಿ ಬರೆದುಕೊಳ್ಳುತ್ತದೆ. ಇದನ್ನು ಎಂ.ಎಸ್ ವರ್ಡ್‌ನಲ್ಲಿ ಸೇವ್ ಮಾಡಿಕೊಳ್ಳ ಬಹುದು. ಅಲ್ಲಿನ ಪಠ್ಯ ಕಾಪಿ ಮಾಡಿಕೊಂಡು ಎಲ್ಲಿ ಬೇಕಾದರೂ ಬಳಸಬಹುದು. ಇದು ಯೂನಿಕೋಡ್‌ನಲ್ಲಿ ಟೈಪ್ ಮಾಡುವುದ–ರಿಂದ ಸೋಷಿಯಲ್ ಮೀಡಿ ಯಾಗಳಲ್ಲಿ ಮತ್ತು ಬ್ರೌಸರ್‌ಗಳಲ್ಲಿ ಬಳಸುವುದು ಸುಲಭ. ಕಗಪ ಅಭಿವೃದ್ಧಿಪಡಿಸಿರುವ ಕನ್ವರ್ಟರ್ ಬಳಿಸಿ ನುಡಿ, ಇಲ್ಲವೇ ಬರಹಕ್ಕೆ ಪರಿವರ್ತಿಸಿಕೊಳ್ಳ ಬಹುದು. ನಾವು ಮಾತನಾಡಿದ್ದು ಧ್ವನಿ ರೂಪದಲ್ಲೂ ದೊರೆಯುತ್ತದೆ. ತಪ್ಪಾದ ಪದಗಳನ್ನು ಮತ್ತೆ ಹೇಳಿ ತಿದ್ದುವ ಅವಕಾಶ ಇಲ್ಲಿದೆ. ನಾವು ಮತನಾಡಿದ ವೇಗ ದಲ್ಲೇ ಬರೆದುಕೊಳ್ಳುವುದರಿಂದ ಒಂದು ಪುಟವನ್ನು ಸುಮಾರು 5 ನಿಮಿಷದಲ್ಲಿ ಟೈಪ್ ಮಾಡಬಹುದು. 

ಇದು ಸದ್ಯಕ್ಕೆ ಆನ್‌ಲೈನ್‌ನಲ್ಲಿ ಮಾತ್ರವೇ ಕೆಲಸ ಮಾಡುತ್ತದೆ. ಕನ್ನಡ ಅಂಕೆಗಳು, ಇಸವಿಗಳು ಹಾಗೂ ವ್ಯಾಕರಣ ಚಿನ್ಹೆ, ಕೀಬೋರ್ಡ್ ಚಿನ್ಹೆಗಳನ್ನು ಸದ್ಯಕ್ಕೆ ಗುರುತಿಸುವುದಿಲ್ಲ. ಹೀಗಾಗಿ ಕೊನೆಯಲ್ಲೇ ನಾವೇ ಅಗತ್ಯ ಜಾಗಗಳಲ್ಲಿ ವ್ಯಾಕರಣ ಚಿನ್ಹೆಗಳನ್ನು ಸೇರಿಸಿಕೊಳ್ಳಬಹುದು. ಆದರೆ ಇದು ಉಚಿತವಲ್ಲ, ಹಣಕೊಟ್ಟು ವಾರ್ಷಿಕ ಚಂದಾ ಪಡೆಯಬಹುದು.

Comments

Popular posts from this blog

ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ?

ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ: ಪ್ರೊ ಎಸ್. ಎನ್. ಬಾಲಗಂಗಾಧರ ಅವರ ಸಂದರ್ಶನ