ಕಡಿಮೆ ಖರ್ಚಿನಲ್ಲಿ ಯಾವುದೇ ಬೈಕನ್ನಾಗಿಸಿ ಎಲೆಕ್ಟ್ರಿಕ್ ಬೈಕ್

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ ಡಾ.ರಮೇಶ್ ನಿಂಬೆಮರದಹಳ್ಳಿ ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಕ್ರಾಂತಿಗೆ ಚಾಲನೆ ದೊರೆತಿದ್ದು, ಹಲವು ವಾಹನ ಉತ್ಪಾದಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಆದರೆ, ಈಗಾಗಲೇ ಗ್ರಾಹಕರ ಬಳಿಯಿರುವ ಮತ್ತು ಮುಂದೆ ಸೇರುವ ಐಸಿ (ಇಂಟರ್ನಲ್ ಕಂಬಷನ್) ಎಂಜಿನ್ ವಾಹನಗಳನ್ನು ಏನು ಮಾಡುವುದು? ಇದಕ್ಕೆ ಬೆಂಗಳೂರಿನ ಸ್ಟಾರ್ಯ ಮೊಬಿಲಿಟಿ ಪರಿಹಾರ ಕಂಡುಹಿಡಿದಿದೆ. ಈ ಕಂಪನಿ ಅತ್ಯಂತ ಸುಲಭವಾಗಿ ಯಾವುದೇ ದ್ವಿಚಕ್ರ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸುತ್ತದೆ. ನಾಲ್ವರು ತಂತ್ರಜ್ಞಾನ ಪರಿಣತರು ಮತ್ತು ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಸೇರಿ 2018ರ ಜುಲೈನಲ್ಲಿ ಆರಂಭಿಸಿದ ಸ್ಟಾರ್ಯ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಎನ್ನುವ ನವೋದ್ಯಮ ಇವಿ ಕ್ಷೇತ್ರದಲ್ಲಿ ದೇಶದ ಬಹುದೊಡ್ಡ ಸಮಸ್ಯೆಗೆ ಸುಲ‘ ಪರಿಹಾರ ನೀಡುವ ಭರವಸೆ ನೀಡಿದೆ. ಈ ಐಡಿಯಾ ಹೊಳೆದದ್ದು ಹೇಗೆ? ಎಲ್ಲರೂ ಸುಧಾರಿತ ಇವಿ ವಾಹನಗಳ ಉತ್ಪಾದನೆಗೆ ಗಮನ ಹರಿಸಿದ್ದರೆ ಸ್ಟಾರ್ಯ ಮಾತ್ರ ಇರುವ ಪೆಟ್ರೋಲ್ ಆಧಾರಿತ ಬೈಕ್‌ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಇಂಥ ಐಡಿಯಾ ನಿಮಗೆ ಹೇಗೆ ಬಂತು ಎಂದು ಸ್ಟಾರ್ಯ ಮೊಬಿಲಿಟಿಯ ಮ್ಯಾನೇಜಿಂಗ್ ಡೈರೆಕ್ಟರ್ ರವಿಕುಮಾರ್ ಜಗನ್ನಾಥ್ ಅವರನ್ನು ಕೇಳಿದಾಗ, ‘‘ಭಾರತದಲ್ಲಿ ಹೊಂಡಾ ಆಕ್ಟೀವ ಮತ್ತು ಟಿವಿಎಸ್ ಜುಪೀಟರ್ ಎ...