ಕಡಿಮೆ ಖರ್ಚಿನಲ್ಲಿ ಯಾವುದೇ ಬೈಕನ್ನಾಗಿಸಿ ಎಲೆಕ್ಟ್ರಿಕ್ ಬೈಕ್
![]() |
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ |
ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಕ್ರಾಂತಿಗೆ ಚಾಲನೆ ದೊರೆತಿದ್ದು, ಹಲವು ವಾಹನ ಉತ್ಪಾದಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಆದರೆ, ಈಗಾಗಲೇ ಗ್ರಾಹಕರ ಬಳಿಯಿರುವ ಮತ್ತು ಮುಂದೆ ಸೇರುವ ಐಸಿ (ಇಂಟರ್ನಲ್ ಕಂಬಷನ್) ಎಂಜಿನ್ ವಾಹನಗಳನ್ನು ಏನು ಮಾಡುವುದು? ಇದಕ್ಕೆ ಬೆಂಗಳೂರಿನ ಸ್ಟಾರ್ಯ ಮೊಬಿಲಿಟಿ ಪರಿಹಾರ ಕಂಡುಹಿಡಿದಿದೆ. ಈ ಕಂಪನಿ ಅತ್ಯಂತ ಸುಲಭವಾಗಿ ಯಾವುದೇ ದ್ವಿಚಕ್ರ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸುತ್ತದೆ.
ನಾಲ್ವರು ತಂತ್ರಜ್ಞಾನ ಪರಿಣತರು ಮತ್ತು ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಸೇರಿ 2018ರ ಜುಲೈನಲ್ಲಿ ಆರಂಭಿಸಿದ ಸ್ಟಾರ್ಯ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಎನ್ನುವ ನವೋದ್ಯಮ ಇವಿ ಕ್ಷೇತ್ರದಲ್ಲಿ ದೇಶದ ಬಹುದೊಡ್ಡ ಸಮಸ್ಯೆಗೆ ಸುಲ‘ ಪರಿಹಾರ ನೀಡುವ ಭರವಸೆ ನೀಡಿದೆ.
ಈ ಐಡಿಯಾ ಹೊಳೆದದ್ದು ಹೇಗೆ?
ಎಲ್ಲರೂ ಸುಧಾರಿತ ಇವಿ ವಾಹನಗಳ ಉತ್ಪಾದನೆಗೆ ಗಮನ ಹರಿಸಿದ್ದರೆ ಸ್ಟಾರ್ಯ ಮಾತ್ರ ಇರುವ ಪೆಟ್ರೋಲ್ ಆಧಾರಿತ ಬೈಕ್‌ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುತ್ತ ಮಹತ್ವದ ಹೆಜ್ಜೆ ಇಟ್ಟಿದೆ.

‘ಭಾರಿ ಕಡಿಮೆ ಖರ್ಚಿನಲ್ಲಿ ಪರಿವರ್ತನೆ: ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಎಲೆಕ್ಟ್ರಿಕ್ ವೆಹಿಕಲ್‌ಗಳು ಇವೆ. ಹೊಸದನ್ನೇ ಖರೀದಿಸಿದರಾಯಿತು. ನಿಮ್ಮ ಕಂಪನಿಯ ಅಗತ್ಯವೇನು ಎಂದು ಕೇಳಿದ್ದಕ್ಕೆ, ‘‘ದೇಶದಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್‌ನ ಬೆಲೆ ಸಾಮಾನ್ಯ 1ರಿಂದ 1.25 ಲಕ್ಷ ರೂ.ಗಳ ಆಸುಪಾಸಿನಲ್ಲಿದೆ. ಇದರಲ್ಲಿ ವಾಹನ ಬಿಡಿಭಾಗಗಳು, ಎಲೆಕ್ಟ್ರಿಕ್ ಎಂಜಿನ್ ವ್ಯವಸ್ಥೆ (ಪವರ್‌ಟ್ರೇನ್) ಹಾಗೂ ಬ್ಯಾಟರಿ ಪ್ಯಾಕ್ ಎಂಬ ಮೂರು ವಿಭಾಗಳಿರುತ್ತವೆ. ಒಂದು ಲಿಥಿಯಂ ಬ್ಯಾಟರಿಯ ಗರಿಷ್ಟ ಆಯಸ್ಸು 4 ವರ್ಷ. ಅಂದರೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸುಮಾರು 35 ಸಾವಿರ ಬೆಲೆ ಇರುವ ಲಿಥಿಯಂ ಬ್ಯಾಟರಿ ಹಾಕುವುದು ಅನಿವಾರ್ಯ. ಇದು ಸಾಮಾನ್ಯ ಜನರಿಗೆ ಇವಿ ಕೊಂಡು, ನಿಭಾಯಿಸುವುದು ಭಾರಿ ವೆಚ್ಚದಾಯಕವಾಗುತ್ತದೆ. ಈ ಸಮಸ್ಯೆಗೆ ನಮ್ಮಲ್ಲಿ ಉತ್ತರವಿದೆ. ಕೇವಲ 37 ಸಾವಿರದಲ್ಲಿ ನಿಮ್ಮ ಯಾವುದೇ ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕನ್ನಾಗಿ ಪರಿವರ್ತಿಸಿಕೊಡುತ್ತೇವೆ. ಅದೂ ಕೇವಲ ಒಂದೇ ಗಂಟೆಯಲ್ಲಿ,’’ ಎಂದು ವಿವರಿಸಿದರು.
ಸ್ಟಾರ್ಯ ಕಂಪನಿಯ ಮತ್ತೊಂದು ವಿಶೇಷ ಎಂದರೆ, ಇಡೀ ದೇಶದಲ್ಲಿ ಬೈಕ್‌ಗಳ ಎಲೆಕ್ಟ್ರಿಕ್ ಎಂಜಿನ್ ಉತ್ಪಾದಿಸುವ ಏಕೈಕ ಕಂಪನಿ. ದೊಡ್ಡ ದೊಡ್ಡ ಬೈಕ್ ಕಂಪನಿಗಳೂ ಕೂಡ ವಿದೇಶದಿಂದ ಈ ಎಂಜಿನ್ ಅನ್ನು ಆಮದು ಮಾಡಿಕೊಳ್ಳುತ್ತವೆ. ಸ್ಟಾರ್ಯ ಕಂಪನಿಯ ಎಂಜಿನ್ ಪ್ಲಗ್ ಅಂಡ್ ಪ್ಲೇ ಮಾದರಿಯಲ್ಲಿರುವುದರಿಂದ ಯಾವುದೇ ಐಸಿ ವಾಹನಕ್ಕೆ ಒಂದು ಗಂಟೆಯಲ್ಲೇ ಅಳವಡಿಸಬಹುದು.
ಕಂಪನಿಯು ಇನ್ನು ಆರು ತಿಂಗಳಲ್ಲಿ ವಾಣಿಜ್ಯ ವಹಿವಾಟಿಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಬಳಕೆದಾರರು ಮನೆಯಲ್ಲಿ ಚಾರ್ಜಿಂಗ್ ಪಾಯಿಂಟ್ ಹಾಕಿಸಿಕೊಂಡು ಹೊಸ ಬ್ಯಾಟರಿ ಖರೀದಿಸುವುದನ್ನು ತಪ್ಪಿಸಲು ಸ್ಟಾರ್ಯ ಹೊಸ ದಾರಿ ಕಂಡುಕೊಂಡಿದೆ. ಇನ್ನು ಕೆಲ ತಿಂಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 40 ಇಂಥ ಸ್ಟೇಷನ್‌ಗಳನ್ನು ಕಂಪನಿ ಸ್ಥಾಪಿಸಲಿದ್ದುಘಿ, ಇಂಥ ಪೆಟ್ರೋಲ್ ಬಂಕ್‌ಗಳಲ್ಲಿ ಕೇವಲ ಸುಮಾರು 40 ರೂ. ನೀಡಿ ಚಾರ್ಜ್ ಆಗಿರುವ ಬ್ಯಾಟರಿಯನ್ನು ಕೆಲ ನಿಮಿಷಗಳಲ್ಲೇ ಬದಲಾಯಿಸಬಹುದು.
--
35ರಿಂದ 37 ಸಾವಿರದ ಒಳಗೆ ನಿಮ್ಮ ಹಳೆಯ ಎಂಜಿನ್ ಬೈಕ್‌ಗಳನ್ನು ನಾವು ಎಲೆಕ್ಟ್ರಿಕ್ ಆಗಿ ಪರಿವರ್ತಿಸುತ್ತೇವೆ. ಇದರ ರ್ಪಾಮೆನ್ಸ್ ಬೆಸ್ಟ್ ಇವಿ ಬೈಕ್‌ಗಳಷ್ಟೇ ಇರುತ್ತದೆ ಎನ್ನುವ ಗ್ಯಾರಂಟಿ ಕೊಡುತ್ತೇವೆ. ನಗರದೆಲ್ಲೆಡೆ ಜಾರ್ಜಿಂಗ್ ಸ್ಟೇಷನ್‌ಗಳು ಸಿದ್ಧವಾಗುತ್ತಿವೆ. 40 ರೂ. ಕೊಟ್ಟು ಕೆಲ ನಿಮಿಷಗಳಲ್ಲೇ ಹೊಸ ಬ್ಯಾಟರಿ ಹಾಕಿಸಿಕೊಂಡು ಹೋಗಬಹುದು. ನಮಗೊಂದು ಕಾಲ್ ಮಾಡಿದರೆ ನಿಮ್ಮ ಹಳೆಯ ಬೈಕ್ ಪರಿವರ್ತಿಸಿ ಮನೆಗೇ ತಲುಪಿಸುತ್ತೇವೆ. ದೇಶದಲ್ಲಿ ಎಲೆಕ್ಟ್ರಿಕ್ ರೆವೊಲ್ಯೂಷನ್ ಮಾಡಬೇಕೆಂಬುದು ನಮ್ಮ ಹೆಬ್ಬಯಕೆ.
-ರವಿಕುಮಾರ್ ಜಗನ್ನಾಥ್, ಎಂ.ಡಿ, ಸ್ಟಾರ್ಯ ಮೊಬಿಲಿಟಿ
---
ಸ್ಟಾರ್ಟಪ್ ಇಂಡಿಯಾ ವಿನ್ನರ್
ಅಮೆರಿಕ ಮೂಲದ ಆಲ್ಟೇರ್ ಎಂಬ ಕಂಪನಿ ಕೇಂದ್ರ ಸರಕಾರದ ಸ್ಟಾರ್ಟಪ್ ಇಂಡಿಯಾ ಯೋಜನೆಯಡಿ ಭಾರತದಲ್ಲಿ ಆಯೋಜಿಸಿದ್ದ ‘ಆಲ್ಟೇರ್ ಗ್ರ್ಯಾಂಡ್ ಚಾಲೆಂಜ್’ ಎಂಬ ರಾಷ್ಟ್ರೀಯ ಸ್ಪರ್‘ೆಯಲ್ಲಿ ಸ್ಟಾರ್ಯ ಮೊಬಿಲಿಟಿ ಮೊದಲ ಬಹುಮಾನ ಗಳಿಸಿದೆ. ಈ ಮೂಲಕ ನಗದು ಬಹುಮಾನ, ಆಲ್ಟೇರ್ ಕಂಪನಿಯ ವಿಶೇಷ ಉತ್ಪನ್ನಗಳ ಒಂದು ವರ್ಷ ಉಚಿತ ಬಳಕೆ ಮತ್ತು ಕಂಪನಿಯ ಮಾರ್ಗದರ್ಶವನ್ನು ಸ್ಟಾರ್ಯ ಪಡೆದುಕೊಂಡಿದೆ. ಕಳೆದ ಜನವರಿ 31, 2020ಕ್ಕೆ ಬೆಂಗಳೂರಿನಲ್ಲೇ ಪ್ರಶಸ್ತಿ ವಿತರಣೆಯಾಗಿದೆ. 1.75 ಲಕ್ಷ ನಗದು ಬಹುಮಾನ, ಆಲ್ಟೇರ್ ಕಂಪನಿಯ ಸುಮಾರು 2 ಕೋಟಿ ರೂ. ವೌಲ್ಯದ ಉಚಿತ ಸ್‌ಟಾವೇರ್‌ಗಳು ಹಾಗೂ ಕಂಪನಿಯ ಮಾರ್ಗದರ್ಶನ ಸ್ಟಾರ್ಯಕ್ಕೆ ಲಭಿಸಿದೆ.
ದೇಶಾದ್ಯಂತ ಅರ್ಜಿ ಸಲ್ಲಿಸಿದ್ದ ಸುಮಾರು 500 ಸ್ಟಾರ್ಟಪ್‌ಗಳಲ್ಲಿ ಟಾಪ್ 10ರಲ್ಲಿ ಆಯ್ಕೆಯಾಗಿ ಅಂತಿಮವಾಗಿ ಸ್ಟಾರ್ಯ ಮೊಬಿಲಿಟಿ ವಿಜೇತ ನವೋದ್ಯಮವಾಗಿ ಪ್ರಶಸ್ತಿ ಪಡೆದಿದೆ.