Posts

Showing posts from May, 2020

ನಂಬರ್‌ ಸೇವ್ ಮಾಡದೆ ವಾಟ್ಸಾಪ್‌ ಮಾಡುವುದು ಹೇಗೆ?

Image
ಸಂ ದರ್ಭ 1: ವಾಟ್ಸಾಪ್ ಬಳಸುವ ಪ್ರತಿಯೊಬ್ಬರನ್ನೂ ಕಾಡುವ ಸ ಮಸ್ಯೆಯಿದು .  ಇದ್ದಕ್ಕಿದ್ದಾಗೆ ಎದುರಾಗುವ ಅಪರಿಚಿತರು ನಮ್ಮ ವಿಳಾಸ ಇಲ್ಲವೇ ಮೊಬೈಲ್‌ ನಂಬರ್ ಕೇಳಬಹುದು .  ಬರೆದುಕೊಳ್ಳಿ ಎಂದು ಹೇಳಿದರೆ ನಯವಾಗಿ ದಯವಿಟ್ಟು ವಾಟ್ಸ್‌ಆಪ್‌ ಮಾಡಿ ಎಂದು ಮನವಿ ಮಾಡುತ್ತಾರೆ. ಅದನ್ನು ಧಿಕ್ಕರಿಸಿ ಇಲ್ಲ ಬರೆದುಕೊಳ್ಳಿ ಎಂದು ಹೇಳುವ ದಾರ್ಷ್ಯ್ಟ ತೋರಿಸುವುದು ಉಚಿತವಲ್ಲ. ಸಂ ದರ್ಭ 2: ಇನ್ನು ಆ ಲ್‌ಲೈನ್‌ ಸೇವೆಗಳನ್ನು ಬಹುತೇಕ ನಾವೆಲ್ಲರೂ ಬಳಸುತ್ತೇ ವೆ ಆದ್ದರಿಂದ ಡೆಲಿವರಿ ಬಾಯ್‌ಗಳು ನಮ್ಮ ಮನೆ ಬಾಗಿಲು ಬಡಿಯುವುದೂ ಸಾಮಾನ್ಯ. ಆನ್‌ಲೈನ್‌ ಬುಕಿಂಗ್‌ ವೇಳೆ ನಿಮ್ಮ ವಿಳಾಸವನ್ನು ನೀಡಿದ್ದರು ಡೆಲಿವರಿ ಬಾಯ್ಗಳು ನಿಮಗೆ ಕರೆ ಮಾಡಿ ನಿಮ್ಮ ಲೊಕೇಶನ್ ಶೇರ್‌ ಮಾಡಿ ಎಂದು ಮನವಿ ಮಾಡುವುದು ಸಹಜ. ಆಗಲೂ ಅವರಿಗೆ ವಿಳಾಸವಿದೆಯಲ್ಲ ನೋಡಿಕೊಂಡು ಬನ್ನಿ ಎಂದು ಅಹಂ ತೋರಿಸುವುದು ಸಭ್ಯತೆಯಲ್ಲ. ಆಗ ಬೇರೆ ದಾರಿಯಿಲ್ಲದೆ ಅವರ ನಂಬರ್‌ ಪಡೆದು ಸೇವ್‌ ಮಾಡಿಕೊಂಡು ನಮ್ಮ ಲೊಕೇಶನ್ ಶೇರ್‌ ಮಾಡುತ್ತೇವೆ.   ಸಂದರ್ಭ 3 : ಪರಿಚಿತರು, ಸ್ನೇಹಿತರು, ಸಹೋದ್ಯೋಗಿಗಳು, ಸಂಬಂಧಿಗಳು ಇವರೆಲ್ಲ ಆಗಾಗ್ಗೆ ನಂಬರ್‌ಗಳನ್ನು ಬದಲಾಯಿಸುವುದು ಸರ್ವೇ ಸಹಜ. ಇಷ್ಟು ಸಾಲದೆಂಬಂತೆ ಹಳೆಯ ನಂಬರ್‌ಗಳ ಜತೆಗೆ ಹೊಸ ನಂಬರ್‌ಗಳನ್ನು ಸೇರಿಸಿಕೊಳ್ಳುವುದೂ ಹೊಸದಲ್ಲ. ನಮ್ಮಲ್ಲಿ ಅವರ ಹಳೆಯ ನಂಬರ್‌ ಇರುತ್ತದೆ. ಆದರೆ ಅವರು ಮಾತ್ರ ಅವರ ಹೊಸ ನಂಬರ...