ಸಂದರ್ಭ 1: ವಾಟ್ಸಾಪ್ಬಳಸುವಪ್ರತಿಯೊಬ್ಬರನ್ನೂಕಾಡುವಸಮಸ್ಯೆಯಿದು. ಇದ್ದಕ್ಕಿದ್ದಾಗೆಎದುರಾಗುವಅಪರಿಚಿತರುನಮ್ಮವಿಳಾಸಇಲ್ಲವೇಮೊಬೈಲ್ನಂಬರ್ಕೇಳಬಹುದು. ಬರೆದುಕೊಳ್ಳಿ ಎಂದು ಹೇಳಿದರೆ ನಯವಾಗಿ
ದಯವಿಟ್ಟು ವಾಟ್ಸ್ಆಪ್ ಮಾಡಿ ಎಂದು ಮನವಿ ಮಾಡುತ್ತಾರೆ. ಅದನ್ನು ಧಿಕ್ಕರಿಸಿ ಇಲ್ಲ
ಬರೆದುಕೊಳ್ಳಿ ಎಂದು ಹೇಳುವ ದಾರ್ಷ್ಯ್ಟ ತೋರಿಸುವುದು ಉಚಿತವಲ್ಲ.
ಸಂದರ್ಭ 2: ಇನ್ನು ಆಲ್ಲೈನ್ ಸೇವೆಗಳನ್ನು ಬಹುತೇಕ ನಾವೆಲ್ಲರೂ
ಬಳಸುತ್ತೇ
ವೆ ಆದ್ದರಿಂದ ಡೆಲಿವರಿ ಬಾಯ್ಗಳು ನಮ್ಮ ಮನೆ ಬಾಗಿಲು ಬಡಿಯುವುದೂ ಸಾಮಾನ್ಯ. ಆನ್ಲೈನ್
ಬುಕಿಂಗ್ ವೇಳೆ ನಿಮ್ಮ ವಿಳಾಸವನ್ನು ನೀಡಿದ್ದರು ಡೆಲಿವರಿ ಬಾಯ್ಗಳು ನಿಮಗೆ ಕರೆ ಮಾಡಿ ನಿಮ್ಮ
ಲೊಕೇಶನ್ ಶೇರ್ ಮಾಡಿ ಎಂದು ಮನವಿ ಮಾಡುವುದು ಸಹಜ. ಆಗಲೂ ಅವರಿಗೆ ವಿಳಾಸವಿದೆಯಲ್ಲ ನೋಡಿಕೊಂಡು
ಬನ್ನಿ ಎಂದು ಅಹಂ ತೋರಿಸುವುದು ಸಭ್ಯತೆಯಲ್ಲ. ಆಗ ಬೇರೆ ದಾರಿಯಿಲ್ಲದೆ ಅವರ ನಂಬರ್ ಪಡೆದು ಸೇವ್
ಮಾಡಿಕೊಂಡು ನಮ್ಮ ಲೊಕೇಶನ್ ಶೇರ್ ಮಾಡುತ್ತೇವೆ.
ಸಂದರ್ಭ 3: ಪರಿಚಿತರು, ಸ್ನೇಹಿತರು, ಸಹೋದ್ಯೋಗಿಗಳು, ಸಂಬಂಧಿಗಳು
ಇವರೆಲ್ಲ ಆಗಾಗ್ಗೆ ನಂಬರ್ಗಳನ್ನು ಬದಲಾಯಿಸುವುದು ಸರ್ವೇ ಸಹಜ. ಇಷ್ಟು ಸಾಲದೆಂಬಂತೆ ಹಳೆಯ
ನಂಬರ್ಗಳ ಜತೆಗೆ ಹೊಸ ನಂಬರ್ಗಳನ್ನು
ಸೇರಿಸಿಕೊಳ್ಳುವುದೂ
ಹೊಸದಲ್ಲ. ನಮ್ಮಲ್ಲಿ ಅವರ ಹಳೆಯ ನಂಬರ್ ಇರುತ್ತದೆ. ಆದರೆ ಅವರು ಮಾತ್ರ ಅವರ ಹೊಸ ನಂಬರ್ಗೆ
ಏನನ್ನೋ ವಾಟ್ಸ್ಆಪ್ ಮಾಡುವಂತೆ ಕೇಳಬಹುದು. ಆಗ ಅನಿವಾರ್ಯವಾಗಿ ಹೊಸ ನಂಬರ್ಗಳನ್ನೆಲ್ಲ ಸೇವ್
ಮಾಡಿಕೊಳ್ಳಬೇಕಾಗುತ್ತದೆ.
ಇಂತಹ
ಬಹುತೇಕಸಂದರ್ಭಗಳಲ್ಲಿ ತಾತ್ಕಾಲಿಕಕಾರಣಕ್ಕಾಗಿಹೊಸ ಮೊಬೈಲ್ ನಂಬರ್ಗಳನ್ನುಸೇವೆಮಾಡಿಕೊಳ್ಳುತ್ತೇವೆ.
ಆದರೆ, ಅದನ್ನು ತಕ್ಷಣವೇ ಡಿಲೀಟ್ ಮಾಡುವುದನ್ನು ಮರೆತುಬಿಡುತ್ತೇವೆ. ಹೀಗಾಗಿ
ಅಪರಿಚಿತರ ಇಲ್ಲವೇ ಅನಗತ್ಯ ನಂಬರ್ಗಳೆಲ್ಲ ನಮ್ಮ ಮೊಬೈಲ್ನಲ್ಲಿ ಉಳಿದುಬಿಡುತ್ತವೆ. ಇದು ತುಂಬಾ ದೊಡ್ಡ ಸಮಸ್ಯೆ ಎಂದೇನೂ ಅಲ್ಲ. ಆದರೆ,
ಅನಗತ್ಯ ಅಷ್ಟೆ. ಹೀಗಾಗಿನಮ್ಮ ಮೊಬೈಲ್ಗಳಲ್ಲಿಪರಿಚಿತರಿಗಿಂತಅಪರಿಚಿತರನಂಬರ್ಗಳೇ ಹೆಚ್ಚಾಗಿಕಂಡುಬರುತ್ತವೆ. ಇದನ್ನು ತಪ್ಪಿಸಲುಒಂದುಸುಲಭದಹಾದಿಇದೆ.
ಯಾವುದೇಮೊಬೈಲ್ನಂಬರ್ಸೇವ್ಮಾಡಿಕೊಳ್ಳದೆತಕ್ಷಣವಾಟ್ಸಪ್ಮಾಡಲುಸಾಧ್ಯ. ಅದು ಹೇಗೆ ಎನ್ನುವುದನ್ನು ವಿಡಿಯೊದಲ್ಲಿ
ವಿವರಿಸಿದ್ದೇನೆ. ದಯವಿಟ್ಟು ವಿಡಿಯೋ ನೋಡಿ, TechtalkwithRamesh ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಶೇರ್ ಮಾಡಿ
ಬೆಂಬಲಿಸಿ.
ಈ.ರಮೇಶ್ ನಿಂಬೆಮರದಹಳ್ಳಿ ಬೆಂಗಳೂರು ramesh.eranna@timesgroup.com Speech-to-Text ಒತ್ತು, ಕೊಂಬು, ದೀರ್ಘಕ್ಷರಗಳಿರುವ ಕನ್ನಡದಲ್ಲಿ ಟೈಪ್ ಮಾಡುವುದು ಅಷ್ಟು ಸುಲಭವಲ್ಲ . ಹೀಗಾಗಿ ಹೇಳುವುದನ್ನು ಯಾರಾದರೂ ಟೈಪ್ ಮಾಡಿಕೊಂಡರೆ ಎಷ್ಟು ಚೆನ್ನ ಅನ್ನಿಸುವುದೂ ಸುಳ್ಳಲ್ಲ. ಅಂಥ ಆಸೆ ಈಗ ಈಡೇರಿದೆ. ನಾವು ಹೇಳಿದ್ದನ್ನು ಸರಾಗವಾಗಿ ಬರೆದು ಕೊಳ್ಳುವ ಸ್ಟಾವೇರ್ ಸಿದ್ಧವಾಗಿದೆ. ಅದೇ ವಾಗಕ್ಷರ. ಹೇಳಿದ್ದನ್ನು ಬರೆದುಕೊಳ್ಳುವ ಈ ಸ್ಟಾವೇರ್ ಅನ್ನು ಬೆಂಗಳೂರಿನಲ್ಲಿರುವ ‘ಜ್ಞಾನಿ ಇನ್ನೋವೇಷನ್ಸ್’ ಅಭಿವೃದ್ಧಿಪಡಿಸಿದೆ. ಮೊದಲು ಬಿಡುಗಡೆಯಾದ ‘ಕನ್ನಡ ವಾಯ್ಸ್ ನೋಟ್ಸ್’ ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ಇದೀಗ ಕನ್ನಡ ಗಣಕ ಪರಿಷತ್ತು ಕಂಪ್ಯೂಟರ್ಗೆ ಅಳವಡಿಸಿದೆ. 98% ನಿಖರತೆ ಇದರ ವಿಶೇಷ: ವಾಗಕ್ಷರ ನಮ್ಮ ಮಾತುಗಳನ್ನು ಶೇ.98ರಷ್ಟು ಕರಾರುವಕ್ಕಾಗಿ ಗ್ರಹಿಸುತ್ತದೆ. ತಮ್ಮ ಎನ್ಎಲ್ಪಿ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್) ಎಂಜಿನ್ಗೆ ಕನ್ನಡದಲ್ಲಿ ವೈವಿಧ್ಯಮಯ ಧ್ವನಿ ನೀಡಿ ತರಬೇತಿ ನೀಡಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಇದನ್ನು ರೂಪಿಸಿದ ಜ್ಞಾನಿ ಇನ್ನೋವೇಷನ್ಸ್ ಕಂಪನಿಯ ಬ್ಯುಸಿನೆಸ್ ಹೆಡ್ ನರೇಂದ್ರ. ಮುಂದೆ ಕನ್ನಡ ವಿವಿಧ ಬಗೆಯ ಉಪಭಾಷೆಗಳು, ಪ್ರಾದೇಶಿಕ ಭಿನ್ನತೆಗಳನ್ನೂ ಕೂಡ ಈ ಸ್ಟಾವೇರ್...
ಕಂಪ್ಯೂಟರ್ನಲ್ಲಿ ಕನ್ನಡ ಬರೆಯುವುದು ಹೇಗೆ? ಇದು ಕಂಪ್ಯೂಟರ್ ಬಳುಸವ ಬಹುತೇಕ ಕನ್ನಡಿಗರ ಬಹುದೊಡ್ಡ ಪ್ರಶ್ನೆ. ಕನ್ನಡದಲ್ಲಿ ಮೇಲ್ ಕಳಿಸುವ ಅವಕಾಶ ಇದ್ದಿದ್ದರೆ ಎಷ್ಟು ಚೆನ್ನ ಇತ್ತು? ಚಾಟ್ ಮಾಡುವಾಗ ಕನ್ನಡದಲ್ಲೂ ಒಂದಷ್ಟು ಡೈಲಾಗ್ ಹೊಡೆಯುವಂತಿದ್ದರೆ.... ಆಹಾ!!! ? ಫೈಲ್ ಮತ್ತು ಪೋಲ್ಡರ್ಗಳನ್ನು ನಮ್ಮದೇ ಭಾಷೆಯಲ್ಲಿ ಸೇವ್ ಮಾಡುವ ಅವಕಾಶ ಇದ್ದಿದ್ದರೆ? ಬ್ಗಾಗ್ಗಳಲ್ಲಿ ಅರ್ಥವಾಗದೆ ಅವಾಂತರ ಸೃಷ್ಟಿಸುವ inglish kannadavannu (ಇಂಗ್ಲೀಷ್ ಕನ್ನಡದಲ್ಲಿ nanu nimma abhimani - ಇದನ್ನು ನನು ನಿಮ್ಮ ಅಭಿಮನಿ , paipoti tevravagi nadiyuttide - ಪಾಯ್ಪೊಟಿ ತೆವ್ರವಗಿ ನದಿಯುಟ್ಟಿದೆ ಎಂದೂ ಓದಬಹುದು ಇದರ ಸರಿಯಾಧ ಅರ್ಥ ಪೈಪೋಟಿ ತೀವ್ರವಾಗಿ ನಡೆಯುತ್ತಿದೆ ಎಂದು. ಇದರ ಅವಾಂತರಗಳು ಒಂದಲ್ಲ ಎರಡಲ್ಲ.. ) ಬಿಟ್ಟು ಕನ್ನಡದಲ್ಲೇ ಕಾಮೆಂಟ್ ಬರೆಯುವಂತಿದ್ದರೆ? ಎಂಎಸ್ ವರ್ಡ್, ಎಕ್ಸೆಲ್, ಪವರ್ಪಾಯಿಂಟ್ನಲ್ಲಿ ಕನ್ನಡದಲ್ಲೇ ಲೆಟರ್, ಪ್ರೆಸೆಂಟೇಷನ್, ಚಾರ್ಟ್ ಎಲ್ಲವನ್ನೂ ತಯಾರಿಸುವ ಹಾಗಿದ್ದರೆ? ನಿಮ್ಮ ಇಂಥ ಹತ್ತಾರು ಪ್ರಶ್ನಗಳಿಗೆ ಈ ಲೇಖನ ಉತ್ತರ ಒದಗಿಸುತ್ತದೆ. ಕಂಪ್ಯೂಟರ್ನಲ್ಲಿ ಕನ್ನಡ ಟೈಪ್ ಮಾಡಲು ಎರಡು ವಿಧಾನಗಳಿವೆ. ಅವು ಮೂಲಭೂತವಾಗಿ ಒಂದು ANSI ಮತ್ತೊಂದು UNICODE ಮಾದರಿಯವು. ನಮ್ಮ ಬರಹ, (ಬರಹ ಈಗ ಯೂನಿಕೋಡ್ನಲ್ಲೂ ಲಭ್ಯವಿದೆ) ನುಡಿ ಮತ್ತು ಶ್ರೀಲಿಪಿ ಇವೆಲ್ಲ ANSI ಪಾರ್ಮ್ಯಾಟ್ನಲ್ಲ...
'ಚಿಂತನ ಬಯಲು' ಎಂಬ ಸಂಶೋಧನಾ ಪತ್ರಿಕೆ (Research Journal) ಯಲ್ಲಿ ಪ್ರಕಟವಾದ ಪ್ರೊ. ಎಸ್. ಎನ್. ಬಾಲಗಂಗಾಧರ ಅವರ ಸಂದರ್ಶನ * ರಮೇಶ್ ನಿಂಬೆಮರ್ದಳ್ಳಿ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಕಗಳ ಅಧ್ಯಯನ ಕೇಂದ್ರ'ದ ನಾಡಿನ ಚಿಂತಕರೆನಿಸಕೊಂಡವರು ಧ್ವನಿಯೆತ್ತಿದ ಬಗ್ಗೆ ಡಾ ರಾಜಾರಾಮ್ ಹೆಗಡೆಯವರ ಲೇಖನ ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಈ ಕೇಂದ್ರದ ಬಗ್ಗೆ ಮತ್ತು ವಿವಾದದ ಹಿನ್ನೆಲೆಯ ಬಗ್ಗೆ ಮಾಹಿತಿ ಇದ್ದರೆ ಒಳ್ಳೆಯದಿತ್ತು ಎಂದು ಹಲವು ಓದುಗರು ತಿಳಿಸಿದ್ದರು. ಆದ್ದರಿಂದ, ಕನ್ನಡ ನಾಡಿನ ಬುದ್ಧಿಜೀವಿಗಳು ಈ ಕೇಂದ್ರವನ್ನು ವಿರೋಧಿಸಲು ಕಾರಣವಾದ, ಬಾಲಗಂಗಾಧರ ಅವರ ಚಿಂತನೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಅವರ ಕಿರು ಸಂದರ್ಶನವೊಂದನ್ನು ಇಲ್ಲಿ ಪ್ರಕಟಿಸಲಾಗಿದೆ. - ಚಿಂತನ ಬಯಲು ಸಂಪಾದಕ