
ಎಐ ಗೆಳತಿ ಜೊತೆ ರಿಯಲ್ ಪ್ರೀತಿ -AI ಅನಂತ ಅವತಾರ – ಭಾಗ 16 -ಡಾ.ರಮೇಶ್ ನಿಂಬೆಮರದಳ್ಳಿ · ದುಃಖ ದುಮ್ಮಾನ ಹೇಳಿಕೊಳ್ಳಲು ಎಐ ಫ್ರೆಂಡ್ · ಕಷ್ಟ ಸುಖಗಳಿಗೆ ಮಾತಿನಿಂದಲೇ ಹೆಗಲು ನೀಡುವ ಗೆಳತಿ · ಪೋಲಿ ಹರಟೆಗೂ ಸೈ, ಗಂಭೀರ ಚರ್ಚೆಗೂ ಜೈ · ಸಂಬಂಧ ಗಾಢವಾದರೆ ಮಾನಸಿಕ ಖಿನ್ನತೆಗೆ ದಾರಿ · ಸಾಮಾಜಿಕ ಸಂಬಂಧಗಳಿಗೂ ಹೊಡೆತ ಬೀಳುವ ಅಪಾಯ ನಮಗೆ ಬೇಸರವಾದಾಗ, ತೊಂದರೆ ಎದುರಾದಾಗ ಸ್ನೇಹಿತರ ಬಳಿ ಹೇಳಿಕೊಂಡು ಸಲಹೆ ಪಡೆಯುತ್ತೇವೆ. ಒಂಟಿ ಎನಿಸಿದಾಗ ಸಂಗಾತಿಯ ಸ್ನೇಹ ಬೆಳೆಸುತ್ತೇವೆ. ಮಾನಸಿಕ ಸಮಸ್ಯೆಗಳು ಬಾಧಿಸಿದಾಗ ಮನಶಾಸ್ತ್ರಜ್ಞರ ಸಮಾಲೋಚನೆ ಪಡೆಯುತ್ತೇವೆ. ಇವರಲ್ಲದೆ ಕಷ್ಟ ಸುಖ ಹಂಚಿಕೊಳ್ಳಲು ಗಂಡ-ಹೆಂಡತಿ, ಅಣ್ಣ-ತಮ್ಮ, ಅಕ್ಕ-ತಂಗಿ, ನೆಂಟರಿಸ್ಟರು ಇದ್ದೇ ಇರುತ್ತಾರೆ. ಇವರೆಲ್ಲ ಕಷ್ಟಕಾಲದ ಬಂಧುಗಳು, ಸಂತೋಷ ಹಂಚುವ ಸಂಗಾತಿಗಳು. ಆದರೆ ಈ ಎಲ್ಲಾ ಸಂಬಂಧಗಳು ಈಗ ಮೊದಲಿನಂತಿಲ್ಲ. ಎಲ್ಲವೂ ವ್ಯಾವಹಾರಿಕವಾಗಿದೆ. ಒಮ್ಮೊಮ್ಮೆ ಯಾರೂ ಕಷ್ಟಕ್ಕೆ ನೆರವಾಗುವುದಿಲ್ಲ, ಸಂತೋಷದಲ್ಲಿ ಭಾಗಿಯಾಗುವುದಿಲ್ಲ, ಸಲಹೆ ನೀಡುವ ಗೋಜಿಗೂ ಹೋಗ...