'ವಿಸ್ಮಯ’ಗಳ ಜಾಡಿನಲ್ಲಿ...
ಇದು ವೈಜ್ಞಾನಿಕ ಯುಗ. ಎಲ್ಲಿ ನೋಡಿದರೂ ವಿಜ್ಞಾನ-ತಂತ್ರಜ್ಞಾನದ ಚಮತ್ಕಾರಗಳು, ತಾಂತ್ರಿಕ ಉಪಕರಣಗಳು, ಎಲ್ಲದ್ದಕ್ಕೂ ತಂತ್ರಜ್ಞಾನದ ಸ್ಪರ್ಶ. ಜಗತ್ತೇ ಒಂದು ಹಳ್ಳಿಯೆಂಬ ಕಲ್ಪನೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ವಿಜ್ಞಾನ-ತಂತ್ರಜ್ಞಾನಗಳು ಇಂದು ಸಾವಿನ ರಹಸ್ಯವನ್ನೂ ಬೇಧಿಸುವಲ್ಲಿ ದಾಪುಗಾಲಿಟ್ಟಿವೆ. ಅಷ್ಟರಮಟ್ಟಿಗೆ ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಬದುಕನ್ನು ಆವರಿಸಿವೆ ಆದರೆ...??? ಆದರೆ ಇದಕ್ಕೆ ಸಮನಾಗಿ ಜನರ ಮನಸ್ಸುಗಳು ಬದಲಾಗಿವೆಯೇ? ವೈಜ್ಞಾನಿಕ ದೃಷ್ಟಿಕೋನ ಅವರ ಕಣ್ಣುಗಳಲ್ಲಿ ಮಿಂಚುತ್ತಿದೆಯೇ?, ಕಣ್ಣಿಗೆ ಕಂಡ ಸತ್ಯವನ್ನು ತಾರ್ಕಿಕವಾಗಿ ಚಿಂತಿಸುವ ಮನೋಭಾವ ರೂಡಿಯಾಗಿದೆಯೇ? ಇದಕ್ಕೆ ಉತ್ತರ ಮೌನ. ನಿಜಕ್ಕೂ ಇದು ಅಚ್ಚರಿಯ ಸಂಗತಿ. ಜಗತ್ತು ಈ ಪ್ರಮಾಣದಲ್ಲಿ ಬದಲಾವಣೆ ಕಾಣುತ್ತಿದ್ದರೂ, ಅದೇಕೆ ಭಾರತೀಯರು ಮಾತ್ರ ತಮ್ಮ ಮನಸ್ಸುಗಳನ್ನು ಬದಲಾವಣೆಯಗೆ ತೆರೆಯುತ್ತಿಲ್ಲ, ಇದಕ್ಕೆ ನಾನಾ ಕಾರಣಗಳಿವೆ. ಜನರಲ್ಲಿ ಇಂದಿಗೂ ಮೌಢ್ಯ ತಂಬಿ ತುಳುಕುತ್ತಿದೆ, ಧರ್ಮ-ಶಾಸ್ತ್ರಗಳೇ ಇವರ ಬದುಕಿನ ನಿಯಂತ್ರಕ ಶಕ್ತಿಯಾಗಿ ವಿಜೃಂಭಿಸುತ್ತಿವೆ. ಮಾನವೀಯತೆಗಿಂತ ಜಾತಿ, ಕಂದಾಚಾರಗಳೇ ಮೇಲುಗೈ ಸಾಧಿಸಿವೆ. ದುರಾದೃಷ್ಟದ ಸಂಗತಿಯೆಂದರೆ ಸಮಾಜದ ಓರೆಕೋರೆಗಳನ್ನು ನೇರ ಮಾಡಬೇಕಾದ, ಸಮಾಜದ ಮುನ್ನಡೆಗೆ ಮಾರ್ಗದರ್ಶಿಯಾಗಬೇಕಾದ, ಜನರ ಹೃದಯಗಳಲ್ಲಿ ಬದಲಾವಣೆಯ ಹರಿಕಾರನಾಗಬೇಕಾದ ಮಾಧ್ಯಮಗಳೂ ಕೂಡ ಸಮಾಜದ ಯಥಾವತ್ ಪ್ರತಿಬಿಂಬಗಳಂತೆ ವರ್ತಿಸುತ್ತ...