ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'
ಈ.ರಮೇಶ್ ನಿಂಬೆಮರದಹಳ್ಳಿ ಬೆಂಗಳೂರು ramesh.eranna@timesgroup.com Speech-to-Text ಒತ್ತು, ಕೊಂಬು, ದೀರ್ಘಕ್ಷರಗಳಿರುವ ಕನ್ನಡದಲ್ಲಿ ಟೈಪ್ ಮಾಡುವುದು ಅಷ್ಟು ಸುಲಭವಲ್ಲ . ಹೀಗಾಗಿ ಹೇಳುವುದನ್ನು ಯಾರಾದರೂ ಟೈಪ್ ಮಾಡಿಕೊಂಡರೆ ಎಷ್ಟು ಚೆನ್ನ ಅನ್ನಿಸುವುದೂ ಸುಳ್ಳಲ್ಲ. ಅಂಥ ಆಸೆ ಈಗ ಈಡೇರಿದೆ. ನಾವು ಹೇಳಿದ್ದನ್ನು ಸರಾಗವಾಗಿ ಬರೆದು ಕೊಳ್ಳುವ ಸ್ಟಾವೇರ್ ಸಿದ್ಧವಾಗಿದೆ. ಅದೇ ವಾಗಕ್ಷರ. ಹೇಳಿದ್ದನ್ನು ಬರೆದುಕೊಳ್ಳುವ ಈ ಸ್ಟಾವೇರ್ ಅನ್ನು ಬೆಂಗಳೂರಿನಲ್ಲಿರುವ ‘ಜ್ಞಾನಿ ಇನ್ನೋವೇಷನ್ಸ್’ ಅಭಿವೃದ್ಧಿಪಡಿಸಿದೆ. ಮೊದಲು ಬಿಡುಗಡೆಯಾದ ‘ಕನ್ನಡ ವಾಯ್ಸ್ ನೋಟ್ಸ್’ ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ಇದೀಗ ಕನ್ನಡ ಗಣಕ ಪರಿಷತ್ತು ಕಂಪ್ಯೂಟರ್ಗೆ ಅಳವಡಿಸಿದೆ. 98% ನಿಖರತೆ ಇದರ ವಿಶೇಷ: ವಾಗಕ್ಷರ ನಮ್ಮ ಮಾತುಗಳನ್ನು ಶೇ.98ರಷ್ಟು ಕರಾರುವಕ್ಕಾಗಿ ಗ್ರಹಿಸುತ್ತದೆ. ತಮ್ಮ ಎನ್ಎಲ್ಪಿ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್) ಎಂಜಿನ್ಗೆ ಕನ್ನಡದಲ್ಲಿ ವೈವಿಧ್ಯಮಯ ಧ್ವನಿ ನೀಡಿ ತರಬೇತಿ ನೀಡಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಇದನ್ನು ರೂಪಿಸಿದ ಜ್ಞಾನಿ ಇನ್ನೋವೇಷನ್ಸ್ ಕಂಪನಿಯ ಬ್ಯುಸಿನೆಸ್ ಹೆಡ್ ನರೇಂದ್ರ. ಮುಂದೆ ಕನ್ನಡ ವಿವಿಧ ಬಗೆಯ ಉಪಭಾಷೆಗಳು, ಪ್ರಾದೇಶಿಕ ಭಿನ್ನತೆಗಳನ್ನೂ ಕೂಡ ಈ ಸ್ಟಾವೇರ್...
Comments
Post a Comment