ಪ್ರೀತಿಯ ಮೇಷ್ಟ್ರು ಇನ್ನಿಲ್ಲ


ಕನ್ನಡದ ಹಿರಿಯ ಸಾಹಿತ್ಯ ವಿಮರ್ಶಕ ಕಿ.ರಂ. ನಾಗರಾಜ್ (64) ಬಸವನಗುಡಿ ನಿವಾಸದಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿರುವ ನಾಗರಾಜ್ ನಿಧನದಿಂದ ಸಾಹಿತ್ಯ ಲೋಕ ಆಘಾತಕ್ಕೊಳಗಾಗಿದೆ. ಕಳೆದ ರಾತ್ರಿ ಹೃದಯಾಘಾತಕ್ಕೊಳಗಾದ ನಾಗರಾಜ್ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

64 ವರ್ಷದ ನಾಗರಾಜ್ ಮೂರು ಪುತ್ರಿಯರನ್ನು ಆಗಲಿದ್ದಾರೆ. ನಾಗರಾಜ್ ಪಾರ್ಥಿವ ಶರೀರವನ್ನು ಬಸವನಗುಡಿ ನಿವಾಸದ ಬಳಿ ಅಂತಿಮ ದರ್ಶನಕ್ಕಿಡಲಾಗಿದ್ದು, ಬನಶಂಕರಿ ಚಿತಾಗಾರದಲ್ಲಿ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ನಾಗರಾಜ್ ನಿಧನದಿಂದ ಸಾಹಿತ್ಯ ಲೋಕದಲ್ಲಿ ಶೂನ್ಯ ಸೃಷ್ಟಿ ಮಾಡಿದಂತಾಗಿದೆ. ನಾಗರಾಜ್ ನಿಧನಕ್ಕೆ ಅನೇಕ ಗಣ್ಯ ವ್ಯಕ್ತಿಗಳು ಮತ್ತು ಸಾಹಿತ್ಯ ಲೋಕ ಕಂಬನಿ ಮಿಡಿದಿದೆ. ಶ್ರೇಷ್ಠ ವಿಮರ್ಶಕರಾಗಿದ್ದ ನಾಗರಾಜ್ ಸಾಕಷ್ಟು ವಿದ್ಯಾರ್ಥಿ ಶಿಷ್ಯ ವರ್ಗವನ್ನು ಹೊಂದಿದ್ದರು.

ಕನ್ನಡ ಸಾಹಿತ್ಯ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾಗಿದ್ದ ಕಿ.ರಂ. ನಾಗರಾಜ್ 1943 ಡಿಸೆಂಬರ್ 5ರಂದು ಹಾಸನದ ಕಿತ್ತಾನೆಯಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ ಪದವಿ ಪಡೆದಿದ್ದ ಅವರು ಬೆಂಗಳೂರು ವಿ.ವಿನಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪೂರೈಸಿದ್ದರು. ಅಲ್ಲದೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ, ಡಾ.ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ, ಡಾ.ಎಲ್.ಬಸವರಾಜು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

Comments

Popular posts from this blog

ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'

ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ?

ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ: ಪ್ರೊ ಎಸ್. ಎನ್. ಬಾಲಗಂಗಾಧರ ಅವರ ಸಂದರ್ಶನ