ಎಲ್ಲಾದರೂ ನೀ ನಲಿವಿಂದಿರು


ಅಲ್ಲಾದರೂ ಇರು
ಇಲ್ಲಾದರೂ ಇರು
ಎಲ್ಲಾದರೂ ನೀ ನಲಿವಿಂದಿರು
ಏನಾದರೂ ಸರಿ
ಎಂತಾದರೂ ಸರಿ
ನನ್ನೆದೆಯಲಿ ನೀ ಸದಾ ಹಸಿರು

ನಾ ನೊಂದರೂ ಸರಿ
ನಾ ಬೆಂದರೂ ಸರಿ
ನಿನ್ನ ನೆನಪಲೆ ನಾ ಉಳಿವೆ
ಸವಿಗನಸಲಿ
ನಿನ್ನ ನೆನೆಯುತ
ನೆನಪೊಡನೆಯೇ ನಾ ಬೆಳೆವೆ

ನಿನ್ನ ನಲಿವಿಗೆ
ನನ್ನೊಲವಿಗೆ
ನೆಮ್ಮದಿಯನೆ ಬಲಿ ಕೊಡುವೆ
ನಿನ್ನ ಬಾಳಿಗೆ
ನಾ ತೊಡಕಾದರೆ
ಈ ದೇಹವನೆ ಮಣ್ಣಿಗಿಡುವೆ

Comments

Post a Comment

Popular posts from this blog

ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'

ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ?

ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ: ಪ್ರೊ ಎಸ್. ಎನ್. ಬಾಲಗಂಗಾಧರ ಅವರ ಸಂದರ್ಶನ