Posts

Showing posts from September, 2013

ಉಗ್ರನಿಗೆ ಬೈದಿದ್ದಕ್ಕೆ ಮಗುವಿಗೆ ಸಿಕ್ಕಿದ್ದು ಚಾಕಲೇಟ್ ಮತ್ತು ಜೀವ

Image
* ರಮೇಶ್‌ ನಿಂಬೆಮರ್ದಳ್ಳಿ ಶಾಪಿಂಗ್ ಮಾಲ್‌ ಒಳಗೆ, ಉಗ್ರರ ಮೆಷಿನ್‌ ಗನ್ ಕೆಳಗೆ ಒತ್ತೆಯಾಳುಗಳೆಲ್ಲ ನಡುಗುತ್ತ ಕುಳಿತಿದ್ದರು. ತಾವು ಬದುಕಿ ಹೊರ ನಡೆಯುತ್ತೇವೆ ಎಂಬ ಯಾವ ಭರವಸೆಯೂ ಇಲ್ಲದೆ ವೈರಾಗ್ಯ ಹೊತ್ತು ಕ್ಷಣ ದೂಡುತ್ತಿದ್ದರು. ಉಗ್ರರ ಬಂದೂಕಿನ ಗುಂಡಿಗೆ ಎದೆಯೊಡ್ಡಲು ಅಂಜಿ ಅವರ ವಿರುದ್ಧ ಒಂದು ಮಾತು ತೆಗೆಯಲೂ ಅಳುಕುತ್ತಿದ್ದರು. ಆದರೆ ಬಾಲಕ ಮಾತ್ರ, ಉಗ್ರರ ಬಳಿ ಹೋಗಿ ಧೈರ್ಯದಿಂದ 'ನೀನು ಕೆಟ್ಟ ಮನುಷ್ಯ' ಎಂದಿದ್ದ.  ಅದಕ್ಕೆ ಅವನಿಗೆ ಸಿಕ್ಕ ಬಳುವಳಿ ಚಾಕಲೇಟ್‌ ಮತ್ತು ಜೀವ. ನಾಲ್ಕು ವರ್ಷದ ಎಲ್ಲಿಯಟ್‌ ಪ್ರಯರ್‌ ಎಂಬಾತನೇ ಆ ಧೈರ್ಯಶಾಲಿ ಬಾಲಕ. ತನ್ನ ಅಮ್ಮ, ಅಕ್ಕನ ಜೊತೆ ಶಾಪಿಂಗ್ ಮಾಲ್‌ಗೆ ಬಂದಿದ್ದ ಅವನು ಉಗ್ರರ ದಾಳಿ ನಡೆದಾಗ ಅವರ ಒತ್ತೆಯಾಳಾಗಿದ್ದ. ಉಗ್ರರಲ್ಲೊಬ್ಬ 'ಶಾಪಿಂಗ್ ಮಾಲ್‌ನಲ್ಲಿ ಯಾರೇ ಮಕ್ಕಳಿದ್ದರೂ ಅವರು ಹೊರಗೆ ಹೋಗಬಹುದು' ಎಂದ. ಕೂಡಲೇ ಎಲ್ಲಿಯಟ್‌ ತಾಯಿ ಎದ್ದು ನಿಂತು ತನ್ನ ಮಗನಿದ್ದಾನೆ ಎಂದಳು. ತಕ್ಷಣವೇ ಉಗ್ರರ ಬಳಿ ಬಂದ ಪುಟ್ಟ ಬಾಲಕ ಎಲ್ಲಿಯಟ್‌ 'ನೀನು ಕೆಟ್ಟ ಮನುಷ್ಯ' ಎಂದನಲ್ಲದೆ, 'ದಯವಿಟ್ಟು ನಮ್ಮನ್ನು ಕ್ಷಮಿಸು, ನಾವು ರಾಕ್ಷಸರಲ್ಲ' ಎಂದು ಬೇಡಿಕೊಂಡ. ಮನ ಕರಗಿದ ಉಗ್ರ ಪುಟ್ಟ ಬಾಲಕನಿಗೆ ಚಾಕೊಲೇಟ್‌ ಕೊಟ್ಟು ಹೊರ ಕಳಿಸಿದ ಎಂದು 'ದಿ ಸನ್‌' ವರದಿ ಮಾಡಿದೆ. 'ದಿ ಸನ್‌' ವರದಿ ಮಾಡಿರುವಂತೆ, ಬಾಲಕ ಎಲ್ಲಿಯಟ್‌ ಅವರ ಅಮ್ಮ ಚಿತ...

'ಪರಮ' 'ಗುರು'ವೇ ನಮಃ

Image
* ರಮೇಶ್‌ ನಿಂಬೆಮರ್ದಳ್ಳಿ ಗುರು ಎಂದರೆ, ಶಿಕ್ಷಕ ಮಾತ್ರವಲ್ಲ. ಬದುಕಿನ ವಿವಿಧ ಘಟ್ಟಗಳಲ್ಲಿ ಬದುಕುವುದನ್ನು ಕಲಿಸುವ ಎಲ್ಲರೂ ಗುರುಗಳೇ. ಈ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವರು ತಾಯಿ ಮತ್ತು ಶಿಕ್ಷಕ. ನಮ್ಮ ಅಕಡೆಮಿಕ್‌ ಜೀವನದಲ್ಲಿ ಓದುವ, ಬರೆಯುವ ಮತ್ತು ಜಗತ್ತನ್ನು ಅಕ್ಷರಗಳ ಮೂಲಕ ಅರಗಿಸಿಕೊಳ್ಳುವ ಕಲೆಯನ್ನು ಕಲಿಸುವುದು ಶಿಕ್ಷಕನಾದರೆ, ತಾಯಿ ಬದುಕುವ ಕಲೆಯನ್ನೇ ಕಲಿಸುತ್ತಾಳೆ. ನಮ್ಮ 'ಬದುಕು' ಆರಂಭವಾಗುವುದೇ ತಾಯಿಯ ತೋಳಲ್ಲಿ. ಅಲ್ಲಿಂದ ಮುಂದೆ ನಮ್ಮ ಬದುಕು ಎನ್ನುವ ಅಮೂರ್ತ ಸಂಗತಿಯೊಂದು ಆದಷ್ಟು ಮೂರ್ತ ರೂಪ ಪಡೆದುಕೊಳ್ಳುವತ್ತ ಸಾಗಲು ಅಣಿಗೊಳ್ಳುತ್ತದೆ. ಅಕಡೆಮಿಕ್‌ ಶಿಕ್ಷಣ, ಉದ್ಯೋಗ, ಸಾಧನೆ ಇನ್ನೊಂದು ಮತ್ತೊಂದು ಎಲ್ಲವೂ ಬದುಕನ್ನು ಕಲಿಯುವ, ಅದಕ್ಕೆ ನಮ್ಮದೇ ರೀತಿಯಲ್ಲಿ ಮೂರ್ತ ರೂಪ ಕೊಡುವ ಪ್ರಕ್ರಿಯೆಗಳೇ ಅಲ್ಲವೇ?. ಇದೆಲ್ಲಕ್ಕೂ ಓಂಕಾರ ರೂಪಿಯಾಗಿ ನಿಲ್ಲುವುದು ತಾಯಿ ನಮ್ಮ ಬಾಲ್ಯದಲ್ಲಿ ನಮ್ಮ ಸುತ್ತಮುತ್ತಲ ಸಮಾಜವನ್ನು, ಸಂಬಂಧಗಳನ್ನು, ಅದರ ಸೂಕ್ಷ್ಮಗಳನ್ನು ಹೇಳಿಕೊಟ್ಟ ಶಿಕ್ಷಣವೇ. ಹೀಗಾಗಿ ನನಗೆ ತಾಯಿ ಮೊದಲ ಗುರು ಎನ್ನುವುದಕ್ಕಿಂತ, ತಾಯಿಯೇ ಜಗತ್ತಿನ ಶ್ರೇಷ್ಠ ಗುರು ಎಂದು ಭಾವಿಸುವುದರಲ್ಲಿ ಹೆಚ್ಚು ತೃಪ್ತಿಯಿದೆ. ಇತ್ತೀಚಿನ ದಿನಗಳಲ್ಲಿ 'ಗುರು'ವಿನ ಕಲ್ಪನೆ ಬದಲಾಗಿದೆ. ವಿದ್ಯಾರ್ಥಿ-ಶಿಕ್ಷಕ ಸ್ನೇಹಿತರಂತಿರಬೇಕು ಎನ್ನುವ ಕಲ್ಪನೆಗೆ ಬಹುತೇಕರ ಸಹಮತವಿದೆ. ಆದರೆ ಈ ಕಲ್ಪನೆಗೆ...