ಕಂಪ್ಯೂಟರ್ನಲ್ಲಿ ಕನ್ನಡ ಬರೆಯುವುದು ಹೇಗೆ? ಇದು ಕಂಪ್ಯೂಟರ್ ಬಳುಸವ ಬಹುತೇಕ ಕನ್ನಡಿಗರ ಬಹುದೊಡ್ಡ ಪ್ರಶ್ನೆ. ಕನ್ನಡದಲ್ಲಿ ಮೇಲ್ ಕಳಿಸುವ ಅವಕಾಶ ಇದ್ದಿದ್ದರೆ ಎಷ್ಟು ಚೆನ್ನ ಇತ್ತು? ಚಾಟ್ ಮಾಡುವಾಗ ಕನ್ನಡದಲ್ಲೂ ಒಂದಷ್ಟು ಡೈಲಾಗ್ ಹೊಡೆಯುವಂತಿದ್ದರೆ.... ಆಹಾ!!! ? ಫೈಲ್ ಮತ್ತು ಪೋಲ್ಡರ್ಗಳನ್ನು ನಮ್ಮದೇ ಭಾಷೆಯಲ್ಲಿ ಸೇವ್ ಮಾಡುವ ಅವಕಾಶ ಇದ್ದಿದ್ದರೆ? ಬ್ಗಾಗ್ಗಳಲ್ಲಿ ಅರ್ಥವಾಗದೆ ಅವಾಂತರ ಸೃಷ್ಟಿಸುವ inglish kannadavannu (ಇಂಗ್ಲೀಷ್ ಕನ್ನಡದಲ್ಲಿ nanu nimma abhimani - ಇದನ್ನು ನನು ನಿಮ್ಮ ಅಭಿಮನಿ , paipoti tevravagi nadiyuttide - ಪಾಯ್ಪೊಟಿ ತೆವ್ರವಗಿ ನದಿಯುಟ್ಟಿದೆ ಎಂದೂ ಓದಬಹುದು ಇದರ ಸರಿಯಾಧ ಅರ್ಥ ಪೈಪೋಟಿ ತೀವ್ರವಾಗಿ ನಡೆಯುತ್ತಿದೆ ಎಂದು. ಇದರ ಅವಾಂತರಗಳು ಒಂದಲ್ಲ ಎರಡಲ್ಲ.. ) ಬಿಟ್ಟು ಕನ್ನಡದಲ್ಲೇ ಕಾಮೆಂಟ್ ಬರೆಯುವಂತಿದ್ದರೆ? ಎಂಎಸ್ ವರ್ಡ್, ಎಕ್ಸೆಲ್, ಪವರ್ಪಾಯಿಂಟ್ನಲ್ಲಿ ಕನ್ನಡದಲ್ಲೇ ಲೆಟರ್, ಪ್ರೆಸೆಂಟೇಷನ್, ಚಾರ್ಟ್ ಎಲ್ಲವನ್ನೂ ತಯಾರಿಸುವ ಹಾಗಿದ್ದರೆ? ನಿಮ್ಮ ಇಂಥ ಹತ್ತಾರು ಪ್ರಶ್ನಗಳಿಗೆ ಈ ಲೇಖನ ಉತ್ತರ ಒದಗಿಸುತ್ತದೆ. ಕಂಪ್ಯೂಟರ್ನಲ್ಲಿ ಕನ್ನಡ ಟೈಪ್ ಮಾಡಲು ಎರಡು ವಿಧಾನಗಳಿವೆ. ಅವು ಮೂಲಭೂತವಾಗಿ ಒಂದು ANSI ಮತ್ತೊಂದು UNICODE ಮಾದರಿಯವು. ನಮ್ಮ ಬರಹ, (ಬರಹ ಈಗ ಯೂನಿಕೋಡ್ನಲ್ಲೂ ಲಭ್ಯವಿದೆ) ನುಡಿ ಮತ್ತು ಶ್ರೀಲಿಪಿ ಇವೆಲ್ಲ ANSI ಪಾರ್ಮ್ಯಾಟ್ನಲ್ಲ...