Posts

Showing posts with the label ವಿಜ್ಞಾನ

2019ರಲ್ಲಿ ಬದುಕನ್ನು ಪ್ರಭಾವಿಸುವ ತಂತ್ರಜ್ಞಾನಗಳು ಯಾವು ಗೊತ್ತಾ?

Image
ತಾಂತ್ರಿಕ ಆವಿಷ್ಕಾರಗಳು ಪ್ರತಿದಿನ ಸಂಭವಿಸುತ್ತಲೇ ಇವೆ. ದಿನಕ್ಕೊಂದು, ಕ್ಷಣಕ್ಕೊಂದು ತಂತ್ರಜ್ಞಾನ ಬೆಳಕು ಕಾಣುತ್ತಲೇ ಇದೆ. ಯಾವುದೇ ತಂತ್ರಜ್ಞಾನದ ಪರಿಣಾಮಗಳನ್ನು ಪಕ್ಕಕ್ಕಿಟ್ಟು ಮಾತನಾಡುವುದಾದರೆ, ಈ ಹೊತ್ತಿನ ಸಂದರ್ಭದಲ್ಲಿ ತಂತ್ರಜ್ಞಾನ ಕ್ರಾಂತಿಯೇ ಸಂಭವಿಸುತ್ತಿದೆ. ಆದರೂ ಎಲ್ಲ ತಂತ್ರಜ್ಞಾನಗಳೂ ಜನರ ಬದುಕಿನಲ್ಲಿ ನಿಲ್ಲುವುದಿಲ್ಲ. ಕೆಲವು ಹಾಗೆ ಬಂದು ಹೀಗೆ ಮರೆಯಾಗುತ್ತವೆ. ಮತ್ತೆ ಕೆಲವು ಒಂದಷ್ಟು ಕಾಲ ಚಾಲ್ತಿಯಲ್ಲಿದ್ದು, ಬಳಿಕ ಮರೆಯಾಗುತ್ತವೆ. ಆದರೆ ಕೆಲವೇ ಕೆಲವು ತಂತ್ರಜ್ಞಾನಗಳು ಜನರ ಬದುಕಿನ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತವೆ. ಜೊತೆಗೆ ಸಮಾಜದಲ್ಲಿ ಭಾರಿ ಪರಿವರ್ತನೆಯನ್ನು ತರುತ್ತವೆ. ಈ ವ‍ರ್ಷ ಅಂದರೆ 2018ರಲ್ಲಿ ಜಗತ್ತಿನಾದ್ಯಂತ ಹೆಚ್ಚು ಚಾಲ್ತಿಗೆ ಬಂದಿರುವ/ಬರುವ ಕೆಲವು ತಂತ್ರಜ್ಞಾನಗಳು ಹೀಗಿವೆ: 1. ಕೃತಕ ಬುದ್ದಿಮತ್ತೆ: ಕೃತಕ ಬುದ್ಧಿಮತ್ತೆ ಎನ್ನುವುದು ಇತ್ತೀಚೆಗೆ ಹೆಚ್ಚು ಕೇಳಿಬರುತ್ತಿರುವ ಪದ. ಇದನ್ನು ಸರಳವಾಗಿ ವಿವರಿಸುವುದಾದರೆ, ಯೋಚಿಸುವ ಇಲ್ಲವೇ ವಿವೇಕವುಳ್ಳ ಪ್ರೋಗ್ರಾಂ. ಕೃತಕ ಬುದ್ಧಿವಂತಿಕೆ ಎನ್ನುವುದು ಒಂದು ಪ್ರೋಗ್ರಾಂ ಆಗಿದ್ದು, ಇದು ಹೊಸದಾಗಿ ಕಲಿಯುತ್ತದೆ; ತನ್ನಲ್ಲಿರುವ ಸಮಸ್ಯೆಗಳನ್ನು ತಾನೇ ಸುಧಾರಿಸಿಕೊಳ್ಳುತ್ತದೆ; ಸಂದರ್ಭಾನುಸಾರ ವರ್ತಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತದೆ. ಒಟ್ಟಿನಲ್ಲಿ ಒಬ್ಬ ಮನುಷ್ಯ ಕಲಿಯುವ, ತಪ್ಪುಗಳನ್ನು ತಿದ್ದಿಕೊಳ್ಳುವ ಕ್ರಮದಲ್ಲೇ ಈ...