Posts

Showing posts with the label technology

ನಂಬರ್‌ ಸೇವ್ ಮಾಡದೆ ವಾಟ್ಸಾಪ್‌ ಮಾಡುವುದು ಹೇಗೆ?

Image
ಸಂ ದರ್ಭ 1: ವಾಟ್ಸಾಪ್ ಬಳಸುವ ಪ್ರತಿಯೊಬ್ಬರನ್ನೂ ಕಾಡುವ ಸ ಮಸ್ಯೆಯಿದು .  ಇದ್ದಕ್ಕಿದ್ದಾಗೆ ಎದುರಾಗುವ ಅಪರಿಚಿತರು ನಮ್ಮ ವಿಳಾಸ ಇಲ್ಲವೇ ಮೊಬೈಲ್‌ ನಂಬರ್ ಕೇಳಬಹುದು .  ಬರೆದುಕೊಳ್ಳಿ ಎಂದು ಹೇಳಿದರೆ ನಯವಾಗಿ ದಯವಿಟ್ಟು ವಾಟ್ಸ್‌ಆಪ್‌ ಮಾಡಿ ಎಂದು ಮನವಿ ಮಾಡುತ್ತಾರೆ. ಅದನ್ನು ಧಿಕ್ಕರಿಸಿ ಇಲ್ಲ ಬರೆದುಕೊಳ್ಳಿ ಎಂದು ಹೇಳುವ ದಾರ್ಷ್ಯ್ಟ ತೋರಿಸುವುದು ಉಚಿತವಲ್ಲ. ಸಂ ದರ್ಭ 2: ಇನ್ನು ಆ ಲ್‌ಲೈನ್‌ ಸೇವೆಗಳನ್ನು ಬಹುತೇಕ ನಾವೆಲ್ಲರೂ ಬಳಸುತ್ತೇ ವೆ ಆದ್ದರಿಂದ ಡೆಲಿವರಿ ಬಾಯ್‌ಗಳು ನಮ್ಮ ಮನೆ ಬಾಗಿಲು ಬಡಿಯುವುದೂ ಸಾಮಾನ್ಯ. ಆನ್‌ಲೈನ್‌ ಬುಕಿಂಗ್‌ ವೇಳೆ ನಿಮ್ಮ ವಿಳಾಸವನ್ನು ನೀಡಿದ್ದರು ಡೆಲಿವರಿ ಬಾಯ್ಗಳು ನಿಮಗೆ ಕರೆ ಮಾಡಿ ನಿಮ್ಮ ಲೊಕೇಶನ್ ಶೇರ್‌ ಮಾಡಿ ಎಂದು ಮನವಿ ಮಾಡುವುದು ಸಹಜ. ಆಗಲೂ ಅವರಿಗೆ ವಿಳಾಸವಿದೆಯಲ್ಲ ನೋಡಿಕೊಂಡು ಬನ್ನಿ ಎಂದು ಅಹಂ ತೋರಿಸುವುದು ಸಭ್ಯತೆಯಲ್ಲ. ಆಗ ಬೇರೆ ದಾರಿಯಿಲ್ಲದೆ ಅವರ ನಂಬರ್‌ ಪಡೆದು ಸೇವ್‌ ಮಾಡಿಕೊಂಡು ನಮ್ಮ ಲೊಕೇಶನ್ ಶೇರ್‌ ಮಾಡುತ್ತೇವೆ.   ಸಂದರ್ಭ 3 : ಪರಿಚಿತರು, ಸ್ನೇಹಿತರು, ಸಹೋದ್ಯೋಗಿಗಳು, ಸಂಬಂಧಿಗಳು ಇವರೆಲ್ಲ ಆಗಾಗ್ಗೆ ನಂಬರ್‌ಗಳನ್ನು ಬದಲಾಯಿಸುವುದು ಸರ್ವೇ ಸಹಜ. ಇಷ್ಟು ಸಾಲದೆಂಬಂತೆ ಹಳೆಯ ನಂಬರ್‌ಗಳ ಜತೆಗೆ ಹೊಸ ನಂಬರ್‌ಗಳನ್ನು ಸೇರಿಸಿಕೊಳ್ಳುವುದೂ ಹೊಸದಲ್ಲ. ನಮ್ಮಲ್ಲಿ ಅವರ ಹಳೆಯ ನಂಬರ್‌ ಇರುತ್ತದೆ. ಆದರೆ ಅವರು ಮಾತ್ರ ಅವರ ಹೊಸ ನಂಬರ...

ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'

Image
ಈ.ರಮೇಶ್ ನಿಂಬೆಮರದಹಳ್ಳಿ ಬೆಂಗಳೂರು ramesh.eranna@timesgroup.com                     Speech-to-Text ಒತ್ತು, ಕೊಂಬು, ದೀರ್ಘಕ್ಷರಗಳಿರುವ ಕನ್ನಡದಲ್ಲಿ ಟೈಪ್ ಮಾಡುವುದು ಅಷ್ಟು ಸುಲಭವಲ್ಲ . ಹೀಗಾಗಿ ಹೇಳುವುದನ್ನು ಯಾರಾದರೂ ಟೈಪ್ ಮಾಡಿಕೊಂಡರೆ ಎಷ್ಟು ಚೆನ್ನ ಅನ್ನಿಸುವುದೂ ಸುಳ್ಳಲ್ಲ. ಅಂಥ ಆಸೆ ಈಗ ಈಡೇರಿದೆ. ನಾವು ಹೇಳಿದ್ದನ್ನು ಸರಾಗವಾಗಿ ಬರೆದು ಕೊಳ್ಳುವ ಸ್‌ಟಾವೇರ್ ಸಿದ್ಧವಾಗಿದೆ. ಅದೇ ವಾಗಕ್ಷರ. ಹೇಳಿದ್ದನ್ನು ಬರೆದುಕೊಳ್ಳುವ ಈ ಸ್‌ಟಾವೇರ್ ಅನ್ನು ಬೆಂಗಳೂರಿನಲ್ಲಿರುವ ‘ಜ್ಞಾನಿ ಇನ್ನೋವೇಷನ್ಸ್’ ಅಭಿವೃದ್ಧಿಪಡಿಸಿದೆ. ಮೊದಲು ಬಿಡುಗಡೆಯಾದ ‘ಕನ್ನಡ ವಾಯ್ಸ್ ನೋಟ್ಸ್’ ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ಇದೀಗ ಕನ್ನಡ ಗಣಕ ಪರಿಷತ್ತು ಕಂಪ್ಯೂಟರ್‌ಗೆ ಅಳವಡಿಸಿದೆ.  98% ನಿಖರತೆ ಇದರ ವಿಶೇಷ: ವಾಗಕ್ಷರ  ನಮ್ಮ ಮಾತುಗಳನ್ನು ಶೇ.98ರಷ್ಟು ಕರಾರುವಕ್ಕಾಗಿ ಗ್ರಹಿಸುತ್ತದೆ. ತಮ್ಮ ಎನ್‌ಎಲ್‌ಪಿ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್) ಎಂಜಿನ್‌ಗೆ ಕನ್ನಡದಲ್ಲಿ ವೈವಿಧ್ಯಮಯ ಧ್ವನಿ ನೀಡಿ ತರಬೇತಿ ನೀಡಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಇದನ್ನು ರೂಪಿಸಿದ ಜ್ಞಾನಿ ಇನ್ನೋವೇಷನ್ಸ್ ಕಂಪನಿಯ ಬ್ಯುಸಿನೆಸ್ ಹೆಡ್ ನರೇಂದ್ರ. ಮುಂದೆ ಕನ್ನಡ ವಿವಿಧ ಬಗೆಯ ಉಪಭಾಷೆಗಳು, ಪ್ರಾದೇಶಿಕ ಭಿನ್ನತೆಗಳನ್ನೂ ಕೂಡ ಈ ಸ್‌ಟಾವೇರ್...

2019ರಲ್ಲಿ ಬದುಕನ್ನು ಪ್ರಭಾವಿಸುವ ತಂತ್ರಜ್ಞಾನಗಳು ಯಾವು ಗೊತ್ತಾ?

Image
ತಾಂತ್ರಿಕ ಆವಿಷ್ಕಾರಗಳು ಪ್ರತಿದಿನ ಸಂಭವಿಸುತ್ತಲೇ ಇವೆ. ದಿನಕ್ಕೊಂದು, ಕ್ಷಣಕ್ಕೊಂದು ತಂತ್ರಜ್ಞಾನ ಬೆಳಕು ಕಾಣುತ್ತಲೇ ಇದೆ. ಯಾವುದೇ ತಂತ್ರಜ್ಞಾನದ ಪರಿಣಾಮಗಳನ್ನು ಪಕ್ಕಕ್ಕಿಟ್ಟು ಮಾತನಾಡುವುದಾದರೆ, ಈ ಹೊತ್ತಿನ ಸಂದರ್ಭದಲ್ಲಿ ತಂತ್ರಜ್ಞಾನ ಕ್ರಾಂತಿಯೇ ಸಂಭವಿಸುತ್ತಿದೆ. ಆದರೂ ಎಲ್ಲ ತಂತ್ರಜ್ಞಾನಗಳೂ ಜನರ ಬದುಕಿನಲ್ಲಿ ನಿಲ್ಲುವುದಿಲ್ಲ. ಕೆಲವು ಹಾಗೆ ಬಂದು ಹೀಗೆ ಮರೆಯಾಗುತ್ತವೆ. ಮತ್ತೆ ಕೆಲವು ಒಂದಷ್ಟು ಕಾಲ ಚಾಲ್ತಿಯಲ್ಲಿದ್ದು, ಬಳಿಕ ಮರೆಯಾಗುತ್ತವೆ. ಆದರೆ ಕೆಲವೇ ಕೆಲವು ತಂತ್ರಜ್ಞಾನಗಳು ಜನರ ಬದುಕಿನ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತವೆ. ಜೊತೆಗೆ ಸಮಾಜದಲ್ಲಿ ಭಾರಿ ಪರಿವರ್ತನೆಯನ್ನು ತರುತ್ತವೆ. ಈ ವ‍ರ್ಷ ಅಂದರೆ 2018ರಲ್ಲಿ ಜಗತ್ತಿನಾದ್ಯಂತ ಹೆಚ್ಚು ಚಾಲ್ತಿಗೆ ಬಂದಿರುವ/ಬರುವ ಕೆಲವು ತಂತ್ರಜ್ಞಾನಗಳು ಹೀಗಿವೆ: 1. ಕೃತಕ ಬುದ್ದಿಮತ್ತೆ: ಕೃತಕ ಬುದ್ಧಿಮತ್ತೆ ಎನ್ನುವುದು ಇತ್ತೀಚೆಗೆ ಹೆಚ್ಚು ಕೇಳಿಬರುತ್ತಿರುವ ಪದ. ಇದನ್ನು ಸರಳವಾಗಿ ವಿವರಿಸುವುದಾದರೆ, ಯೋಚಿಸುವ ಇಲ್ಲವೇ ವಿವೇಕವುಳ್ಳ ಪ್ರೋಗ್ರಾಂ. ಕೃತಕ ಬುದ್ಧಿವಂತಿಕೆ ಎನ್ನುವುದು ಒಂದು ಪ್ರೋಗ್ರಾಂ ಆಗಿದ್ದು, ಇದು ಹೊಸದಾಗಿ ಕಲಿಯುತ್ತದೆ; ತನ್ನಲ್ಲಿರುವ ಸಮಸ್ಯೆಗಳನ್ನು ತಾನೇ ಸುಧಾರಿಸಿಕೊಳ್ಳುತ್ತದೆ; ಸಂದರ್ಭಾನುಸಾರ ವರ್ತಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತದೆ. ಒಟ್ಟಿನಲ್ಲಿ ಒಬ್ಬ ಮನುಷ್ಯ ಕಲಿಯುವ, ತಪ್ಪುಗಳನ್ನು ತಿದ್ದಿಕೊಳ್ಳುವ ಕ್ರಮದಲ್ಲೇ ಈ...