Posts

ಉಗ್ರನಿಗೆ ಬೈದಿದ್ದಕ್ಕೆ ಮಗುವಿಗೆ ಸಿಕ್ಕಿದ್ದು ಚಾಕಲೇಟ್ ಮತ್ತು ಜೀವ

Image
* ರಮೇಶ್‌ ನಿಂಬೆಮರ್ದಳ್ಳಿ ಶಾಪಿಂಗ್ ಮಾಲ್‌ ಒಳಗೆ, ಉಗ್ರರ ಮೆಷಿನ್‌ ಗನ್ ಕೆಳಗೆ ಒತ್ತೆಯಾಳುಗಳೆಲ್ಲ ನಡುಗುತ್ತ ಕುಳಿತಿದ್ದರು. ತಾವು ಬದುಕಿ ಹೊರ ನಡೆಯುತ್ತೇವೆ ಎಂಬ ಯಾವ ಭರವಸೆಯೂ ಇಲ್ಲದೆ ವೈರಾಗ್ಯ ಹೊತ್ತು ಕ್ಷಣ ದೂಡುತ್ತಿದ್ದರು. ಉಗ್ರರ ಬಂದೂಕಿನ ಗುಂಡಿಗೆ ಎದೆಯೊಡ್ಡಲು ಅಂಜಿ ಅವರ ವಿರುದ್ಧ ಒಂದು ಮಾತು ತೆಗೆಯಲೂ ಅಳುಕುತ್ತಿದ್ದರು. ಆದರೆ ಬಾಲಕ ಮಾತ್ರ, ಉಗ್ರರ ಬಳಿ ಹೋಗಿ ಧೈರ್ಯದಿಂದ 'ನೀನು ಕೆಟ್ಟ ಮನುಷ್ಯ' ಎಂದಿದ್ದ.  ಅದಕ್ಕೆ ಅವನಿಗೆ ಸಿಕ್ಕ ಬಳುವಳಿ ಚಾಕಲೇಟ್‌ ಮತ್ತು ಜೀವ. ನಾಲ್ಕು ವರ್ಷದ ಎಲ್ಲಿಯಟ್‌ ಪ್ರಯರ್‌ ಎಂಬಾತನೇ ಆ ಧೈರ್ಯಶಾಲಿ ಬಾಲಕ. ತನ್ನ ಅಮ್ಮ, ಅಕ್ಕನ ಜೊತೆ ಶಾಪಿಂಗ್ ಮಾಲ್‌ಗೆ ಬಂದಿದ್ದ ಅವನು ಉಗ್ರರ ದಾಳಿ ನಡೆದಾಗ ಅವರ ಒತ್ತೆಯಾಳಾಗಿದ್ದ. ಉಗ್ರರಲ್ಲೊಬ್ಬ 'ಶಾಪಿಂಗ್ ಮಾಲ್‌ನಲ್ಲಿ ಯಾರೇ ಮಕ್ಕಳಿದ್ದರೂ ಅವರು ಹೊರಗೆ ಹೋಗಬಹುದು' ಎಂದ. ಕೂಡಲೇ ಎಲ್ಲಿಯಟ್‌ ತಾಯಿ ಎದ್ದು ನಿಂತು ತನ್ನ ಮಗನಿದ್ದಾನೆ ಎಂದಳು. ತಕ್ಷಣವೇ ಉಗ್ರರ ಬಳಿ ಬಂದ ಪುಟ್ಟ ಬಾಲಕ ಎಲ್ಲಿಯಟ್‌ 'ನೀನು ಕೆಟ್ಟ ಮನುಷ್ಯ' ಎಂದನಲ್ಲದೆ, 'ದಯವಿಟ್ಟು ನಮ್ಮನ್ನು ಕ್ಷಮಿಸು, ನಾವು ರಾಕ್ಷಸರಲ್ಲ' ಎಂದು ಬೇಡಿಕೊಂಡ. ಮನ ಕರಗಿದ ಉಗ್ರ ಪುಟ್ಟ ಬಾಲಕನಿಗೆ ಚಾಕೊಲೇಟ್‌ ಕೊಟ್ಟು ಹೊರ ಕಳಿಸಿದ ಎಂದು 'ದಿ ಸನ್‌' ವರದಿ ಮಾಡಿದೆ. 'ದಿ ಸನ್‌' ವರದಿ ಮಾಡಿರುವಂತೆ, ಬಾಲಕ ಎಲ್ಲಿಯಟ್‌ ಅವರ ಅಮ್ಮ ಚಿತ...

'ಪರಮ' 'ಗುರು'ವೇ ನಮಃ

Image
* ರಮೇಶ್‌ ನಿಂಬೆಮರ್ದಳ್ಳಿ ಗುರು ಎಂದರೆ, ಶಿಕ್ಷಕ ಮಾತ್ರವಲ್ಲ. ಬದುಕಿನ ವಿವಿಧ ಘಟ್ಟಗಳಲ್ಲಿ ಬದುಕುವುದನ್ನು ಕಲಿಸುವ ಎಲ್ಲರೂ ಗುರುಗಳೇ. ಈ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವರು ತಾಯಿ ಮತ್ತು ಶಿಕ್ಷಕ. ನಮ್ಮ ಅಕಡೆಮಿಕ್‌ ಜೀವನದಲ್ಲಿ ಓದುವ, ಬರೆಯುವ ಮತ್ತು ಜಗತ್ತನ್ನು ಅಕ್ಷರಗಳ ಮೂಲಕ ಅರಗಿಸಿಕೊಳ್ಳುವ ಕಲೆಯನ್ನು ಕಲಿಸುವುದು ಶಿಕ್ಷಕನಾದರೆ, ತಾಯಿ ಬದುಕುವ ಕಲೆಯನ್ನೇ ಕಲಿಸುತ್ತಾಳೆ. ನಮ್ಮ 'ಬದುಕು' ಆರಂಭವಾಗುವುದೇ ತಾಯಿಯ ತೋಳಲ್ಲಿ. ಅಲ್ಲಿಂದ ಮುಂದೆ ನಮ್ಮ ಬದುಕು ಎನ್ನುವ ಅಮೂರ್ತ ಸಂಗತಿಯೊಂದು ಆದಷ್ಟು ಮೂರ್ತ ರೂಪ ಪಡೆದುಕೊಳ್ಳುವತ್ತ ಸಾಗಲು ಅಣಿಗೊಳ್ಳುತ್ತದೆ. ಅಕಡೆಮಿಕ್‌ ಶಿಕ್ಷಣ, ಉದ್ಯೋಗ, ಸಾಧನೆ ಇನ್ನೊಂದು ಮತ್ತೊಂದು ಎಲ್ಲವೂ ಬದುಕನ್ನು ಕಲಿಯುವ, ಅದಕ್ಕೆ ನಮ್ಮದೇ ರೀತಿಯಲ್ಲಿ ಮೂರ್ತ ರೂಪ ಕೊಡುವ ಪ್ರಕ್ರಿಯೆಗಳೇ ಅಲ್ಲವೇ?. ಇದೆಲ್ಲಕ್ಕೂ ಓಂಕಾರ ರೂಪಿಯಾಗಿ ನಿಲ್ಲುವುದು ತಾಯಿ ನಮ್ಮ ಬಾಲ್ಯದಲ್ಲಿ ನಮ್ಮ ಸುತ್ತಮುತ್ತಲ ಸಮಾಜವನ್ನು, ಸಂಬಂಧಗಳನ್ನು, ಅದರ ಸೂಕ್ಷ್ಮಗಳನ್ನು ಹೇಳಿಕೊಟ್ಟ ಶಿಕ್ಷಣವೇ. ಹೀಗಾಗಿ ನನಗೆ ತಾಯಿ ಮೊದಲ ಗುರು ಎನ್ನುವುದಕ್ಕಿಂತ, ತಾಯಿಯೇ ಜಗತ್ತಿನ ಶ್ರೇಷ್ಠ ಗುರು ಎಂದು ಭಾವಿಸುವುದರಲ್ಲಿ ಹೆಚ್ಚು ತೃಪ್ತಿಯಿದೆ. ಇತ್ತೀಚಿನ ದಿನಗಳಲ್ಲಿ 'ಗುರು'ವಿನ ಕಲ್ಪನೆ ಬದಲಾಗಿದೆ. ವಿದ್ಯಾರ್ಥಿ-ಶಿಕ್ಷಕ ಸ್ನೇಹಿತರಂತಿರಬೇಕು ಎನ್ನುವ ಕಲ್ಪನೆಗೆ ಬಹುತೇಕರ ಸಹಮತವಿದೆ. ಆದರೆ ಈ ಕಲ್ಪನೆಗೆ...

ಭಾರತ ಚಿತ್ರೋದ್ಯಮದ 'ವಿಶ್ವರೂಪ'

Image
ನೋಡಲೇಬೇಕೆನಿಸಿದ ತುರ್ತು... ವಿಶ್ವರೂಪಂ ವಿವಾದ ಇತ್ಯರ್ಥವಾಗಿದೆ. ಹೀಗಾಗಿ ಚಿತ್ರಕ್ಕೆದುರಾಗಿದ್ದ ವಿಘ್ನ ನಿವಾರಣೆಯಾಗಿದೆ. ಆದರೆ, ಚಿತ್ರದ ಮೇಲೆ ಎದ್ದ 'ವಿವಾದ' ಹುಟ್ಟುಹಾಕಿದ ಪ್ರಶ್ನೆಗಳಿಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಇಷ್ಟೊಂದು ವಿವಾದ ಭುಗಿಲೇಳುವಂಥ ಅಂಶ ಏನಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೆಂದೇ ನಾನು ವಿಶ್ವರೂಪಂ ನೋಡಲು ಹೋದೆ. ಜೊತೆಗೆ ಕಮಲ್‌ ಹಾಸನ್‌ ನಟನೆ ಯಾವಾಗಲೂ ನೀಡುವ ಭರವಸೆ ನನ್ನನ್ನು ಥಿಯೇಟರ್‌ಗೆ ನುಗ್ಗುವಂತೆ ಮಾಡಿತು. ಯಾವುದರ ವಿಶ್ವರೂಪ? ವಿಶ್ವರೂಪಂ, ಭಯೋತ್ಪಾದನೆಯನ್ನು ಆಧರಿಸಿದ ಚಿತ್ರ. ಉಗ್ರರು ಆಫ್ಘಾನಿಸ್ತಾನದಲ್ಲಿ ತರಬೇತಿ ಪಡೆದು ಅಮೆರಿಕದ ಮರ್ಮಾಂಗಕ್ಕೆ ಹೊಡೆಯಲು ನ್ಯೂಯಾರ್ಕ್‌ನಲ್ಲಿ ಪರಮಾಣು ಬಾಂಬ್‌ ಇಡುವುದು. ಅದನ್ನು ಕಮಲ್‌ ಹಾಸನ್‌ ಮತ್ತು ಆತನ ತಂಡ ವಿಫಲಗೊಳಿಸುವುದೇ ಚಿತ್ರದ ಸ್ಟೋರಿ.

ಎಲ್ಲಾದರೂ ನೀ ನಲಿವಿಂದಿರು

ಅಲ್ಲಾದರೂ ಇರು ಇಲ್ಲಾದರೂ ಇರು ಎಲ್ಲಾದರೂ … ನೀ ನಲಿವಿಂದಿರು ಏನಾದರೂ ಸರಿ ಎಂತಾದರೂ ಸರಿ ನನ್ನೆದೆಯಲಿ ನೀ ಸದಾ ಹಸಿರು ನಾ ನೊಂದರೂ ಸರಿ ನಾ ಬೆಂದರೂ ಸರಿ ನಿನ್ನ ನೆನಪಲೆ ನಾ ಉಳಿವೆ ಸವಿಗನಸಲಿ ನಿನ್ನ ನೆನೆಯುತ ಆ ನೆನಪೊಡನೆಯೇ ನಾ ಬೆಳೆವೆ ನಿನ್ನ ನಲಿವಿಗೆ ನನ್ನೊಲವಿಗೆ ಈ ನೆಮ್ಮದಿಯನೆ ಬಲಿ ಕೊಡುವೆ ನಿನ್ನ ಬಾಳಿಗೆ ನಾ ತೊಡಕಾದರೆ ಈ ದೇಹವನೆ ಮಣ್ಣಿಗಿಡುವೆ

ಒಂದು ಪುಟ್ಟ ಗ್ರಾಮದ ಹೂವಿನಂಥ ಕಥೆ

Image
* ಈ.ರಮೇಶ್‌  ನಿಂಬೆಮರದಹಳ್ಳಿ (ಡಿಸೆಂಬರ್‌ 26, 2012ರಂದು ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ) http://vijaykarnataka.indiatimes.com ಆ ಊರಿನಲ್ಲಿ ಹೊತ್ತು ಮೇಲೇರುವ ಮೊದಲೇ ಜನ ವಿರಳವಾಗುತ್ತಾರೆ. ಸದಾ ಪಿಸುಗುಟ್ಟುವ ಜಗಲಿ ಮೌನವಾಗುತ್ತದೆ. ಗಿಜಿಗುಟ್ಟುವ ಊರ ಮುಂದಿನ ಹೈಕಳ ಅಡ್ಡೆ ಖಾಲಿ ಹೊಡೆಯುತ್ತದೆ.  ಇನ್ನು ದನ ಕರುಗಳು ಕೊಟ್ಟಿಗೆ ಸೇರುವ ಗೋಧೂಳಿ ಹೊತ್ತಲ್ಲಿ ಒಂದಷ್ಟು ಧೂಳು, ಧೂಮ, ಸದ್ದು. ಆಮೇಲೆ ಮತ್ತೆ ರಸ್ತೆಗಳು ನಿರ್ಜನ.ಯಾವ ಮನೆಗೆ ಇಣುಕಿದರೂ ಹೂವಿನ ಘಮಲು. ಹರಡಿಕೊಂಡ ಹೂ ರಾಶಿ ನಡುವೆ ಯಂತ್ರದಂತೆ ಸರಸರನೆ ಹೂವು ಕಟ್ಟುವ ಕೈಗಳು. ಇದು ಶಿರಾ ತಾಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಬೆಳಗು ಮತ್ತು ಬೈಗಿನ ಸಮಯದಲ್ಲಿ ಕಂಡುಬರುವ ದೃಶ್ಯ. ಈಗ ಆ ಊರಿನ ತುಂಬೆಲ್ಲ ಹೂವಿನ ಪರಿಮಳ. ಎಲ್ಲರ ಬಾಯಲ್ಲೂ ಹೂವಿನ ಮಾತು. ಊರಿಗೆ ಊರೇ ಈಗ ಸೇವಂತಿಗೆಯಲ್ಲಿ ಮುಳುಗಿ ಹೋಗಿದೆ. ಎಲ್ಲಿ ನೋಡಿದರೂ ಹಳದಿ ಚೆಲ್ಲಿದ ಹಾಗೆ ಕಾಣುವ ಸೇವಿಂತಿಗೆ ಹೂವಿನ ತೋಟಗಳು. ಸೇವಂತಿಗೆಯಲ್ಲಿ ಚಾಂದಿನಿ, ಬಿಳಿಹೂವು, ಬೆಳ್ಳಟ್ಟಿ, ಕರ್ನಲ್‌, ಪಚ್ಚೆ ಮುಂತಾದ ತಳಿಗಳಿವೆ. ಇವುಗಳಲ್ಲಿ ಕೆಲವು ಮಳೆಗಾಲಕ್ಕೆ ಸೂಕ್ತವಾದರೆ ಇನ್ನು ಕೆಲವು ಬೇಸಿಗೆಯ ಒಣ ಹವೆಗೆ ಸೂಕ್ತ, ಕೆಲವು 3 ತಿಂಗಳ ಬೆಳೆ ಮತ್ತೆ ಕೆಲವು 6 ತಿಂಗಳ ಬೆಳೆ. 3 ತಿಂಗಳ ಬೆಳೆಯಾದರೆ ನಾಟಿ ಮಾಡಿದ ಒಂದೂವರೆ ತಿಂಗಳಿಗೆಲ್ಲ ಆದಾಯ ಶುರು. ಮುಂದಿನ ಎರಡು ತಿಂಗಳು ನಿರಂತರ ದುಡಿಮೆ,...

ಹೃದಯದಲ್ಲಿ ಮೋದಿ ಇನ್ನೂ ’ಪ್ರಚಾರಕ’

Image
* ಶಿವ ವಿಶ್ವನಾಥನ್ * ಕನ್ನಡಕ್ಕೆ: ಈ.ರಮೇಶ್‌ ನಿಂಬೆಮರದಹಳ್ಳಿ  (ವಿಜಯಕರ್ನಾಟಕದ ಸಂಪಾದಕೀಯ ಪುಟದಲ್ಲಿ ಡಿಸೆಂಬರ್‌ 17, 2012ರಂದು ಪ್ರಕಟವಾದ ಅನುವಾದಿತ ಲೇಖನ) http://vijaykarnataka.indiatimes.com/ ಇಪ್ಪತ್ತು ವರ್ಷಗಳ ಹಿಂದೆ ಬಾಬ್ರಿ ಮಸೀದಿ ಧ್ವಂಸಗೊಂಡ ಸಂದರ್ಭದಲ್ಲಿ ಮನಶಾಸ್ತ್ರಜ್ಞ ಆಶಿಸ್ ನಂದಿ, ಅಯೋಧ್ಯೆಯ ಗ್ರಹಿಕೆ ಮತ್ತು ಸಮಸ್ಯೆಗಳ ಕುರಿತು ಅಧ್ಯಯನ ಮಾಡಲು ನಿರ್ಧರಿಸಿದರು. ನಂದಿಯವರ ಕುತೂಹಲ ಅವರನ್ನು ಮಸೀದಿ ಧ್ವಂಸದ ವಾಸ್ತವಾಂಶಗಳಾಚೆ ಕೊಂಡೊಯ್ಯಿತು. ಕೊನೆಗೆ ಅವರೇ ಹೇಳುವಂತೆ ಒಂದು ಫ್ಯಾಸಿಸ್ಟ್ ವ್ಯಕ್ತಿತ್ವವನ್ನೂ ಪರಿಚಯ ಮಾಡಿಕೊಟ್ಟಿತು. ಅವರು ಕೇವಲ ಆರ್‌ಎಸ್‌ಎಸ್‌ನ ಒಬ್ಬ ಸಾಮಾನ್ಯ 'ಪ್ರಚಾರಕ'ರಾಗಿದ್ದರು. ಆದರೂ ಅವರ ಪ್ರಜ್ಞೆ, ಅಸಮಾನತೆ ಕುರಿತಾದ ಅವರ ಗ್ರಹಿಕೆ ಮತೀಯರಿಗೆ ರೋಮಾಂಚನವನ್ನುಂಟು ಮಾಡಿತ್ತು. ಅಪ್ಪಟ ನಿರಂಕುಶಾಧಿಕಾರಿ ವ್ಯಕ್ತಿತ್ವದ ಮಾದರಿಯ ಒಬ್ಬ ವ್ಯಕ್ತಿ ದೊರೆತಿದ್ದಕ್ಕೆ ಆಶಿಸ್ ನಂದಿಗೆ ಬಹಳ ಸಂತೋಷವಾಯಿತು. ಕಟ್ಟಾ ಬಲಪಂಥೀಯರಾಗಿದ್ದ ಆ 'ಪ್ರಚಾರಕ' ಆಗಿನ್ನೂ ಅಷ್ಟು ಜನಪ್ರಿಯರಾಗಿರಲಿಲ್ಲ. ಅವರ ಹೆಸರೇ ನರೇಂದ್ರ ಮೋದಿ. ಮುಂದಿನ 10 ವರ್ಷಗಳ ಕಾಲ ಅವರ ವ್ಯಕ್ತಿತ್ವ ವಿಕಸನಗೊಳ್ಳುತ್ತಾ ಹೋಯಿತು.

ಭಾರತಕ್ಕೆ ಬಂತು ನೆಕ್ಸಸ್‌-7 : ಬೆಲೆ ಕೇವಲ 20 ಸಾವಿರ

Image
ಗೂಗಲ್‌ ಕಂಪನಿಯ ಜನಪ್ರಿಯ ನೆಕ್ಸಸ್‌ ಟ್ಯಾಬ್ಲೆಟ್‌ ಕೊನೆಗೂ ಭಾರತಕ್ಕೆ ಬಂದಿದೆ. ಇಂದಿನಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಟ್ಯಾಬ್ಲೆಟ್‌ ಉತ್ಪಾದಕ ಆಸಸ್‌ ಕಂಪನಿ ದೃಢಪಡಿಸಿದೆ. 16 ಜಿಬಿ ಸಾಮರ್ಥ್ಯದ ನೆಕ್ಸಸ್‌ 7 ಬೆಲೆ ಕೇವಲ 19,990 ಎಂದು ಆಸಸ್‌ ಹೇಳಿದೆ. ಗೂಗಲ್‌ ಸಹಭಾಗಿತ್ವದೊಂದಿಗೆ ನೆಕ್ಸಸ್‌ ಉತ್ಪಾದಿಸಿರುವ ಆಸಸ್‌ ಕಂಪನಿ ಅಧಿಕೃತವಾಗಿ ಭಾರತದ ಮಾರುಕಟ್ಟೆಗೆ ನೆಕ್ಸಸ್‌7 ಟ್ಯಾಬ್ಲೆಟ್‌ ಬಿಟ್ಟಿಲ್ಲವಾದರೂ, ಆನ್‌ಲೈನ್‌ ಮಳಿಗೆಗಳು ಭಾರತದಲ್ಲಿ ಈಗಾಗಲೇ ಟ್ಯಾಬ್ಲೆಟ್‌ ಮಾರಾಟ ಆರಂಭಿಸಿವೆ. CNN-IBN ವರದಿ ಮಾಡಿರುವಂತೆ ಆಂಡ್ರಾಯಿಡ್‌ 4.1 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುವ ನೆಕ್ಸಸ್‌ 7 ಭಾರತದಾದ್ಯಂತ ಕ್ರೋಮ ಎಲೆಕ್ಟ್ರಾನಿಕ್‌ ಮಳಿಗೆಗಳಲ್ಲಿ ಲಭ್ಯವಾಗಲಿದೆ.