Posts

ಮನುಷ್ಯ ಮಾಡುವ ಎಲ್ಲಾ ಕೆಲಸಗಳನ್ನು ಯಂತ್ರ ಮಾಡುತ್ತಾ? I AI and Journalism Part -2 I TechtalkwithRamesh

Image
via IFTTT

Artificial Intellegece (AI) ಅಥವಾ ಕೃತಕ ಬುದ್ಧಿಮತ್ತೆ ಕಥೆ, ಕವನ, ಕಾದಂಬರಿ ಬರೆಯುತ್ತಾ? I TechtalkwithRamesh

Image
via IFTTT

ಎಲ್ಲರ ಕಣ್ಣಿಗೆ ಮಾಯಾಗನ್ನಡಿ

Image
ಡಾ. ರಮೇಶ್‌ ನಿಂಬೆಮರದಹಳ್ಳಿ ಜಗತ್ತಿಗೆ ಹಲವು ಸಂಕಷ್ಟಗಳನ್ನು ತಂದೊಡ್ಡಿರುವ ಕೋವಿಡ್‌-19 ಹೊಸ ಸತ್ಯಗಳನ್ನೂ ನಮ್ಮೆದುರು ತೆರೆದಿಟ್ಟಿದೆ. ಓದು ಬರಹ ಕಲಿಯಲು ಶಾಲೆಯೊಂದೇ ತಾಣವಲ್ಲ ಎನ್ನುವುದೀಗ ಮನವರಿಕೆಯಾಗುತ್ತಿದೆ; ಕೆಲಸ ಮಾಡಲು ಕಚೇರಿಯೇನೂ ಅನಿವಾರ್ಯವಲ್ಲ ಎನ್ನುವುದೂ ಸಾಬೀತಾಗುತ್ತಿದೆ; ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನ, ಮಸೀದಿ, ಚರ್ಚುಗಳಿಗೇ ಹೋಗಬೇಕಿಲ್ಲ ಎನ್ನುವುದೂ ಜನರಿಗೆ ಅರಿವಾಗುತ್ತಿದೆ; ಅಷ್ಟೇ ಏಕೆ, ಸಭೆ-ಸಮಾರಂಭ, ದೊಡ್ಡಮಟ್ಟದ ರ‍್ಯಾಲಿಗಳನ್ನು ನಡೆಸಲು ಕೂಡ ಸಾವಿರಾರು ಇಲ್ಲವೇ ಲಕ್ಷಾಂತರ ಜನರನ್ನು ಒಂದೆಡೆ ಕಲೆಹಾಕಬೇಕಿಲ್ಲ ಎನ್ನವುದೂ ನಮಗೆ ಗೊತ್ತಾಗುತ್ತಿದೆ. ಇಂಥ ನೂರಾರು ಹೊಸ ಸಾಧ್ಯತೆ, ಸತ್ಯಗಳನ್ನು ಮನವರಿಕೆ ಮಾಡಿಕೊಟ್ಟಿದು ಕೊರೊನಾ ವೈರಸ್‌. ಆದರೆ, ಈ ಸಾಧ್ಯತೆಗಳನ್ನು ಆಗು ಮಾಡಿದ್ದು ತಂತ್ರಜ್ಞಾನ. ಇದೀಗ ಇದೇ ತಂತ್ರಜ್ಞಾನ ಈ ಎಲ್ಲ ಸಾಧ್ಯತೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಅಣಿಯಾಗಿದೆ. ಎರಡು ಆಯಾಮಗಳಲ್ಲಿರುವ ಬದುಕನ್ನು ಮೂರು ಆಯಾಮದಲ್ಲಿ ಕಣ್ಣ ಮುಂದೆ ತಂದು ನಿಲ್ಲಿಸಲಿದೆ. ಇಂಥ ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ನುಡಿ ಬರೆದಿರುವುದು ಎಂ ಆರ್‌ ಅಥವಾ 'ಮಿಕ್ಸ್‌ಡ್ ರಿಯಾಲಿಟಿ' (ಮಿಶ್ರಿತ ವಾಸ್ತವ). ಈ ತಂತ್ರಜ್ಞಾನವನ್ನು ಮೂರ್ತೀಕರಿಸಿ ರಿಲಯನ್ಸ್‌ ಜಿಯೊ ಇದೀಗ ಸ್ಮಾರ್ಟ್‌ ಗ್ಲಾಸ್‌ ಬಿಡುಗಡೆ ಮಾಡಿದೆ. ಮಿಕ್ಸ್‌ಡ್ ರಿಯಾಲಿಟಿ ತಂತ್ರಜ್ಞಾನದ ಸಾಧ್ಯತೆಗಳು ಅನಂತವಾ...

ನಂಬರ್‌ ಸೇವ್ ಮಾಡದೆ ವಾಟ್ಸಾಪ್‌ ಮಾಡುವುದು ಹೇಗೆ?

Image
ಸಂ ದರ್ಭ 1: ವಾಟ್ಸಾಪ್ ಬಳಸುವ ಪ್ರತಿಯೊಬ್ಬರನ್ನೂ ಕಾಡುವ ಸ ಮಸ್ಯೆಯಿದು .  ಇದ್ದಕ್ಕಿದ್ದಾಗೆ ಎದುರಾಗುವ ಅಪರಿಚಿತರು ನಮ್ಮ ವಿಳಾಸ ಇಲ್ಲವೇ ಮೊಬೈಲ್‌ ನಂಬರ್ ಕೇಳಬಹುದು .  ಬರೆದುಕೊಳ್ಳಿ ಎಂದು ಹೇಳಿದರೆ ನಯವಾಗಿ ದಯವಿಟ್ಟು ವಾಟ್ಸ್‌ಆಪ್‌ ಮಾಡಿ ಎಂದು ಮನವಿ ಮಾಡುತ್ತಾರೆ. ಅದನ್ನು ಧಿಕ್ಕರಿಸಿ ಇಲ್ಲ ಬರೆದುಕೊಳ್ಳಿ ಎಂದು ಹೇಳುವ ದಾರ್ಷ್ಯ್ಟ ತೋರಿಸುವುದು ಉಚಿತವಲ್ಲ. ಸಂ ದರ್ಭ 2: ಇನ್ನು ಆ ಲ್‌ಲೈನ್‌ ಸೇವೆಗಳನ್ನು ಬಹುತೇಕ ನಾವೆಲ್ಲರೂ ಬಳಸುತ್ತೇ ವೆ ಆದ್ದರಿಂದ ಡೆಲಿವರಿ ಬಾಯ್‌ಗಳು ನಮ್ಮ ಮನೆ ಬಾಗಿಲು ಬಡಿಯುವುದೂ ಸಾಮಾನ್ಯ. ಆನ್‌ಲೈನ್‌ ಬುಕಿಂಗ್‌ ವೇಳೆ ನಿಮ್ಮ ವಿಳಾಸವನ್ನು ನೀಡಿದ್ದರು ಡೆಲಿವರಿ ಬಾಯ್ಗಳು ನಿಮಗೆ ಕರೆ ಮಾಡಿ ನಿಮ್ಮ ಲೊಕೇಶನ್ ಶೇರ್‌ ಮಾಡಿ ಎಂದು ಮನವಿ ಮಾಡುವುದು ಸಹಜ. ಆಗಲೂ ಅವರಿಗೆ ವಿಳಾಸವಿದೆಯಲ್ಲ ನೋಡಿಕೊಂಡು ಬನ್ನಿ ಎಂದು ಅಹಂ ತೋರಿಸುವುದು ಸಭ್ಯತೆಯಲ್ಲ. ಆಗ ಬೇರೆ ದಾರಿಯಿಲ್ಲದೆ ಅವರ ನಂಬರ್‌ ಪಡೆದು ಸೇವ್‌ ಮಾಡಿಕೊಂಡು ನಮ್ಮ ಲೊಕೇಶನ್ ಶೇರ್‌ ಮಾಡುತ್ತೇವೆ.   ಸಂದರ್ಭ 3 : ಪರಿಚಿತರು, ಸ್ನೇಹಿತರು, ಸಹೋದ್ಯೋಗಿಗಳು, ಸಂಬಂಧಿಗಳು ಇವರೆಲ್ಲ ಆಗಾಗ್ಗೆ ನಂಬರ್‌ಗಳನ್ನು ಬದಲಾಯಿಸುವುದು ಸರ್ವೇ ಸಹಜ. ಇಷ್ಟು ಸಾಲದೆಂಬಂತೆ ಹಳೆಯ ನಂಬರ್‌ಗಳ ಜತೆಗೆ ಹೊಸ ನಂಬರ್‌ಗಳನ್ನು ಸೇರಿಸಿಕೊಳ್ಳುವುದೂ ಹೊಸದಲ್ಲ. ನಮ್ಮಲ್ಲಿ ಅವರ ಹಳೆಯ ನಂಬರ್‌ ಇರುತ್ತದೆ. ಆದರೆ ಅವರು ಮಾತ್ರ ಅವರ ಹೊಸ ನಂಬರ...

ಕಡಿಮೆ ಖರ್ಚಿನಲ್ಲಿ ಯಾವುದೇ ಬೈಕನ್ನಾಗಿಸಿ ಎಲೆಕ್ಟ್ರಿಕ್ ಬೈಕ್

Image
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ ಡಾ.ರಮೇಶ್‌ ನಿಂಬೆಮರದಹಳ್ಳಿ ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಕ್ರಾಂತಿಗೆ ಚಾಲನೆ ದೊರೆತಿದ್ದು, ಹಲವು ವಾಹನ ಉತ್ಪಾದಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಆದರೆ, ಈಗಾಗಲೇ ಗ್ರಾಹಕರ ಬಳಿಯಿರುವ ಮತ್ತು ಮುಂದೆ ಸೇರುವ ಐಸಿ (ಇಂಟರ್ನಲ್ ಕಂಬಷನ್) ಎಂಜಿನ್ ವಾಹನಗಳನ್ನು ಏನು ಮಾಡುವುದು? ಇದಕ್ಕೆ ಬೆಂಗಳೂರಿನ ಸ್ಟಾರ್ಯ ಮೊಬಿಲಿಟಿ ಪರಿಹಾರ ಕಂಡುಹಿಡಿದಿದೆ. ಈ ಕಂಪನಿ ಅತ್ಯಂತ ಸುಲಭವಾಗಿ ಯಾವುದೇ ದ್ವಿಚಕ್ರ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸುತ್ತದೆ. ನಾಲ್ವರು ತಂತ್ರಜ್ಞಾನ ಪರಿಣತರು ಮತ್ತು ಒಬ್ಬ ಚಾರ್ಟರ್ಡ್‌ ಅಕೌಂಟೆಂಟ್ ಸೇರಿ 2018ರ ಜುಲೈನಲ್ಲಿ ಆರಂಭಿಸಿದ ಸ್ಟಾರ್ಯ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಎನ್ನುವ ನವೋದ್ಯಮ ಇವಿ ಕ್ಷೇತ್ರದಲ್ಲಿ ದೇಶದ ಬಹುದೊಡ್ಡ ಸಮಸ್ಯೆಗೆ ಸುಲ‘ ಪರಿಹಾರ ನೀಡುವ ಭರವಸೆ ನೀಡಿದೆ. ಈ ಐಡಿಯಾ ಹೊಳೆದದ್ದು ಹೇಗೆ? ಎಲ್ಲರೂ ಸುಧಾರಿತ ಇವಿ ವಾಹನಗಳ ಉತ್ಪಾದನೆಗೆ ಗಮನ ಹರಿಸಿದ್ದರೆ ಸ್ಟಾರ್ಯ ಮಾತ್ರ ಇರುವ ಪೆಟ್ರೋಲ್ ಆಧಾರಿತ ಬೈಕ್‌ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಇಂಥ ಐಡಿಯಾ ನಿಮಗೆ ಹೇಗೆ ಬಂತು ಎಂದು ಸ್ಟಾರ್ಯ ಮೊಬಿಲಿಟಿಯ ಮ್ಯಾನೇಜಿಂಗ್ ಡೈರೆಕ್ಟರ್ ರವಿಕುಮಾರ್ ಜಗನ್ನಾಥ್ ಅವರನ್ನು ಕೇಳಿದಾಗ, ‘‘ಭಾರತದಲ್ಲಿ ಹೊಂಡಾ ಆಕ್ಟೀವ ಮತ್ತು ಟಿವಿಎಸ್ ಜುಪೀಟರ್ ಎ...

ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'

Image
ಈ.ರಮೇಶ್ ನಿಂಬೆಮರದಹಳ್ಳಿ ಬೆಂಗಳೂರು ramesh.eranna@timesgroup.com                     Speech-to-Text ಒತ್ತು, ಕೊಂಬು, ದೀರ್ಘಕ್ಷರಗಳಿರುವ ಕನ್ನಡದಲ್ಲಿ ಟೈಪ್ ಮಾಡುವುದು ಅಷ್ಟು ಸುಲಭವಲ್ಲ . ಹೀಗಾಗಿ ಹೇಳುವುದನ್ನು ಯಾರಾದರೂ ಟೈಪ್ ಮಾಡಿಕೊಂಡರೆ ಎಷ್ಟು ಚೆನ್ನ ಅನ್ನಿಸುವುದೂ ಸುಳ್ಳಲ್ಲ. ಅಂಥ ಆಸೆ ಈಗ ಈಡೇರಿದೆ. ನಾವು ಹೇಳಿದ್ದನ್ನು ಸರಾಗವಾಗಿ ಬರೆದು ಕೊಳ್ಳುವ ಸ್‌ಟಾವೇರ್ ಸಿದ್ಧವಾಗಿದೆ. ಅದೇ ವಾಗಕ್ಷರ. ಹೇಳಿದ್ದನ್ನು ಬರೆದುಕೊಳ್ಳುವ ಈ ಸ್‌ಟಾವೇರ್ ಅನ್ನು ಬೆಂಗಳೂರಿನಲ್ಲಿರುವ ‘ಜ್ಞಾನಿ ಇನ್ನೋವೇಷನ್ಸ್’ ಅಭಿವೃದ್ಧಿಪಡಿಸಿದೆ. ಮೊದಲು ಬಿಡುಗಡೆಯಾದ ‘ಕನ್ನಡ ವಾಯ್ಸ್ ನೋಟ್ಸ್’ ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ಇದೀಗ ಕನ್ನಡ ಗಣಕ ಪರಿಷತ್ತು ಕಂಪ್ಯೂಟರ್‌ಗೆ ಅಳವಡಿಸಿದೆ.  98% ನಿಖರತೆ ಇದರ ವಿಶೇಷ: ವಾಗಕ್ಷರ  ನಮ್ಮ ಮಾತುಗಳನ್ನು ಶೇ.98ರಷ್ಟು ಕರಾರುವಕ್ಕಾಗಿ ಗ್ರಹಿಸುತ್ತದೆ. ತಮ್ಮ ಎನ್‌ಎಲ್‌ಪಿ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್) ಎಂಜಿನ್‌ಗೆ ಕನ್ನಡದಲ್ಲಿ ವೈವಿಧ್ಯಮಯ ಧ್ವನಿ ನೀಡಿ ತರಬೇತಿ ನೀಡಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಇದನ್ನು ರೂಪಿಸಿದ ಜ್ಞಾನಿ ಇನ್ನೋವೇಷನ್ಸ್ ಕಂಪನಿಯ ಬ್ಯುಸಿನೆಸ್ ಹೆಡ್ ನರೇಂದ್ರ. ಮುಂದೆ ಕನ್ನಡ ವಿವಿಧ ಬಗೆಯ ಉಪಭಾಷೆಗಳು, ಪ್ರಾದೇಶಿಕ ಭಿನ್ನತೆಗಳನ್ನೂ ಕೂಡ ಈ ಸ್‌ಟಾವೇರ್...

ಕೃಷಿಯಲ್ಲಿ ಶುರುವಾಗಿದೆ ಕೃತಕ ಬುದ್ಧಿವಂತಿಕೆ ಕ್ರಾಂತಿ

Image
 ಮಳೆ, ಹವಾಮಾನ ಮತ್ತು ಮಣ್ಣಿನ ಗುಣಮಟ್ಟದ ಮೇಲೆ ನಿಂತಿರುವ ಭಾರತದ ಕೃಷಿಗೆ ಹಲವು ಅಡ್ಡಿ ಆತಂಕಗಳಿವೆ. ಭಾರತದ ಬಹುತೇಕ ಬೇಸಾಯ ಮಳೆಯ ಮೇಲೆ ನಿಂತಿದೆ. ಮಳೆ ಮುಗಿಲು ಸೇರಿದರೂ ಸಮಸ್ಯೆ; ಅತಿಯಾಗಿ ಸುರಿದರೂ ಅಪಾಯ. ಇದರ ನಡುವೆ ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಾರ್ಮಿಕರ ಕೊರತೆಯೂ ಈ ಕ್ಷೇತ್ರವನ್ನು ಬಾಧಿಸುತ್ತಿದೆ. ದಶಕಗಳ ಕಾಲ ಭೂಮಿ ತಾಯಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ನುಂಗಿ ಬಂಜೆಯಾಗುತ್ತಿದ್ದಾಳೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಹೇಗೋ ಒಳ್ಳೆಯ ಬೆಳೆ ತೆಗೆದರೆ ಸರಿಯಾದ ಮಾರುಕಟ್ಟೆಯಂತೂ ಸಿಗುವುದಿಲ್ಲ, ಖರ್ಚಿನ ಮೇಲೆ ಒಂದಿಷ್ಟು ಲಾಭ ನೋಡುವಷ್ಟು ಬೆಲೆ ದೊರಕುವುದು ಅಪರೂಪವೇ ಸರಿ. ಇದೆಲ್ಲದರ ನಡುವೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಯಂತ್ರಾಧಾರಿತ ಆಧುನಿಕ ಬೇಸಾಯದ ಕ್ರಮಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಈಗ ನಾವು ಕೃಷಿ ಕ್ಷೇತ್ರದಲ್ಲಿ ಹೊಸದೊಂದು ಸಂಚಲನವನ್ನು ಕಾಣುತ್ತಿದ್ದೇವೆ. ಆ ಸಂಚಲನ ಹಿಂದೆಂದೂ ನೋಡಿರದಂಥದ್ದು. ಇದು ಕೇವಲ ಆಧುನಿಕವಲ್ಲ, ಅತ್ಯಾಧುನಿಕ. ಈ ಅತ್ಯಾಧುನಿಕ ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲಿ ನಾವೀಗ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಉತ್ತರ ಹೇಳಬಲ್ಲಂಥದ್ದು. ಅದುವೇ ಕೃಷಿ ಕ್ಷೇತ್ರದ ಕೃತಕ ಬುದ್ಧಿವಂತಿಕೆ. ಒಟ್ಟಾರೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪ್ರಪಂಚದಲ್ಲಿ ಬಹುದೊಡ್ಡ ಸಂಚಲನ ಹುಟ್ಟು ಹಾಕಿರುವ ಕೃತಕ ಬುದ್ಧಿವಂತಿಕೆ ಎಂದರೆ ಆರ್ಟಿಫಿಷಿಯಲ್ ಇಂಟೆಲೆಜೆನ್ಸಿ ಈ...