Posts

Featured Post

Image
  ಎಐ ಗೆಳತಿ ಜೊತೆ ರಿಯಲ್‌ ಪ್ರೀತಿ -AI ಅನಂತ ಅವತಾರ – ಭಾಗ 16 -ಡಾ.ರಮೇಶ್‌ ನಿಂಬೆಮರದಳ್ಳಿ   ·         ದುಃಖ ದುಮ್ಮಾನ ಹೇಳಿಕೊಳ್ಳಲು ಎಐ ಫ್ರೆಂಡ್‌ ·         ಕಷ್ಟ ಸುಖಗಳಿಗೆ ಮಾತಿನಿಂದಲೇ ಹೆಗಲು ನೀಡುವ ಗೆಳತಿ ·         ಪೋಲಿ ಹರಟೆಗೂ ಸೈ, ಗಂಭೀರ ಚರ್ಚೆಗೂ ಜೈ ·         ಸಂಬಂಧ ಗಾಢವಾದರೆ ಮಾನಸಿಕ ಖಿನ್ನತೆಗೆ ದಾರಿ ·         ಸಾಮಾಜಿಕ ಸಂಬಂಧಗಳಿಗೂ ಹೊಡೆತ ಬೀಳುವ ಅಪಾಯ   ನಮಗೆ ಬೇಸರವಾದಾಗ, ತೊಂದರೆ ಎದುರಾದಾಗ ಸ್ನೇಹಿತರ ಬಳಿ ಹೇಳಿಕೊಂಡು ಸಲಹೆ ಪಡೆಯುತ್ತೇವೆ. ಒಂಟಿ ಎನಿಸಿದಾಗ ಸಂಗಾತಿಯ ಸ್ನೇಹ ಬೆಳೆಸುತ್ತೇವೆ. ಮಾನಸಿಕ ಸಮಸ್ಯೆಗಳು ಬಾಧಿಸಿದಾಗ ಮನಶಾಸ್ತ್ರಜ್ಞರ ಸಮಾಲೋಚನೆ ಪಡೆಯುತ್ತೇವೆ. ಇವರಲ್ಲದೆ ಕಷ್ಟ ಸುಖ ಹಂಚಿಕೊಳ್ಳಲು ಗಂಡ-ಹೆಂಡತಿ, ಅಣ್ಣ-ತಮ್ಮ, ಅಕ್ಕ-ತಂಗಿ, ನೆಂಟರಿಸ್ಟರು ಇದ್ದೇ ಇರುತ್ತಾರೆ. ಇವರೆಲ್ಲ ಕಷ್ಟಕಾಲದ ಬಂಧುಗಳು, ಸಂತೋಷ ಹಂಚುವ ಸಂಗಾತಿಗಳು. ಆದರೆ ಈ ಎಲ್ಲಾ ಸಂಬಂಧಗಳು ಈಗ ಮೊದಲಿನಂತಿಲ್ಲ. ಎಲ್ಲವೂ ವ್ಯಾವಹಾರಿಕವಾಗಿದೆ. ಒಮ್ಮೊಮ್ಮೆ ಯಾರೂ ಕಷ್ಟಕ್ಕೆ ನೆರವಾಗುವುದಿಲ್ಲ, ಸಂತೋಷದಲ್ಲಿ ಭಾಗಿಯಾಗುವುದಿಲ್ಲ, ಸಲಹೆ ನೀಡುವ ಗೋಜಿಗೂ ಹೋಗ...

ಭವಿಷ್ಯದಲ್ಲಿ ಮಾಧ್ಯಮದ ಸ್ವರೂಪ ಏನು? I AI & Journalism Part-4 I TechtalkwithRamesh

Image
via IFTTT

ಕೃತಕ ಬುದ್ಧಿಮತ್ತೆ ಕೊನೇ ಹಂತದಲ್ಲಿ ಮನುಷ್ಯನಿಗೆ ಉಳಿಗಾಲವಿದೆಯೇ I AI & Journalism Part 3 I TechtalkwithRamesh

Image
via IFTTT

ಮನುಷ್ಯ ಮಾಡುವ ಎಲ್ಲಾ ಕೆಲಸಗಳನ್ನು ಯಂತ್ರ ಮಾಡುತ್ತಾ? I AI and Journalism Part -2 I TechtalkwithRamesh

Image
via IFTTT

Artificial Intellegece (AI) ಅಥವಾ ಕೃತಕ ಬುದ್ಧಿಮತ್ತೆ ಕಥೆ, ಕವನ, ಕಾದಂಬರಿ ಬರೆಯುತ್ತಾ? I TechtalkwithRamesh

Image
via IFTTT

ಎಲ್ಲರ ಕಣ್ಣಿಗೆ ಮಾಯಾಗನ್ನಡಿ

Image
ಡಾ. ರಮೇಶ್‌ ನಿಂಬೆಮರದಹಳ್ಳಿ ಜಗತ್ತಿಗೆ ಹಲವು ಸಂಕಷ್ಟಗಳನ್ನು ತಂದೊಡ್ಡಿರುವ ಕೋವಿಡ್‌-19 ಹೊಸ ಸತ್ಯಗಳನ್ನೂ ನಮ್ಮೆದುರು ತೆರೆದಿಟ್ಟಿದೆ. ಓದು ಬರಹ ಕಲಿಯಲು ಶಾಲೆಯೊಂದೇ ತಾಣವಲ್ಲ ಎನ್ನುವುದೀಗ ಮನವರಿಕೆಯಾಗುತ್ತಿದೆ; ಕೆಲಸ ಮಾಡಲು ಕಚೇರಿಯೇನೂ ಅನಿವಾರ್ಯವಲ್ಲ ಎನ್ನುವುದೂ ಸಾಬೀತಾಗುತ್ತಿದೆ; ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನ, ಮಸೀದಿ, ಚರ್ಚುಗಳಿಗೇ ಹೋಗಬೇಕಿಲ್ಲ ಎನ್ನುವುದೂ ಜನರಿಗೆ ಅರಿವಾಗುತ್ತಿದೆ; ಅಷ್ಟೇ ಏಕೆ, ಸಭೆ-ಸಮಾರಂಭ, ದೊಡ್ಡಮಟ್ಟದ ರ‍್ಯಾಲಿಗಳನ್ನು ನಡೆಸಲು ಕೂಡ ಸಾವಿರಾರು ಇಲ್ಲವೇ ಲಕ್ಷಾಂತರ ಜನರನ್ನು ಒಂದೆಡೆ ಕಲೆಹಾಕಬೇಕಿಲ್ಲ ಎನ್ನವುದೂ ನಮಗೆ ಗೊತ್ತಾಗುತ್ತಿದೆ. ಇಂಥ ನೂರಾರು ಹೊಸ ಸಾಧ್ಯತೆ, ಸತ್ಯಗಳನ್ನು ಮನವರಿಕೆ ಮಾಡಿಕೊಟ್ಟಿದು ಕೊರೊನಾ ವೈರಸ್‌. ಆದರೆ, ಈ ಸಾಧ್ಯತೆಗಳನ್ನು ಆಗು ಮಾಡಿದ್ದು ತಂತ್ರಜ್ಞಾನ. ಇದೀಗ ಇದೇ ತಂತ್ರಜ್ಞಾನ ಈ ಎಲ್ಲ ಸಾಧ್ಯತೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಅಣಿಯಾಗಿದೆ. ಎರಡು ಆಯಾಮಗಳಲ್ಲಿರುವ ಬದುಕನ್ನು ಮೂರು ಆಯಾಮದಲ್ಲಿ ಕಣ್ಣ ಮುಂದೆ ತಂದು ನಿಲ್ಲಿಸಲಿದೆ. ಇಂಥ ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ನುಡಿ ಬರೆದಿರುವುದು ಎಂ ಆರ್‌ ಅಥವಾ 'ಮಿಕ್ಸ್‌ಡ್ ರಿಯಾಲಿಟಿ' (ಮಿಶ್ರಿತ ವಾಸ್ತವ). ಈ ತಂತ್ರಜ್ಞಾನವನ್ನು ಮೂರ್ತೀಕರಿಸಿ ರಿಲಯನ್ಸ್‌ ಜಿಯೊ ಇದೀಗ ಸ್ಮಾರ್ಟ್‌ ಗ್ಲಾಸ್‌ ಬಿಡುಗಡೆ ಮಾಡಿದೆ. ಮಿಕ್ಸ್‌ಡ್ ರಿಯಾಲಿಟಿ ತಂತ್ರಜ್ಞಾನದ ಸಾಧ್ಯತೆಗಳು ಅನಂತವಾ...

ನಂಬರ್‌ ಸೇವ್ ಮಾಡದೆ ವಾಟ್ಸಾಪ್‌ ಮಾಡುವುದು ಹೇಗೆ?

Image
ಸಂ ದರ್ಭ 1: ವಾಟ್ಸಾಪ್ ಬಳಸುವ ಪ್ರತಿಯೊಬ್ಬರನ್ನೂ ಕಾಡುವ ಸ ಮಸ್ಯೆಯಿದು .  ಇದ್ದಕ್ಕಿದ್ದಾಗೆ ಎದುರಾಗುವ ಅಪರಿಚಿತರು ನಮ್ಮ ವಿಳಾಸ ಇಲ್ಲವೇ ಮೊಬೈಲ್‌ ನಂಬರ್ ಕೇಳಬಹುದು .  ಬರೆದುಕೊಳ್ಳಿ ಎಂದು ಹೇಳಿದರೆ ನಯವಾಗಿ ದಯವಿಟ್ಟು ವಾಟ್ಸ್‌ಆಪ್‌ ಮಾಡಿ ಎಂದು ಮನವಿ ಮಾಡುತ್ತಾರೆ. ಅದನ್ನು ಧಿಕ್ಕರಿಸಿ ಇಲ್ಲ ಬರೆದುಕೊಳ್ಳಿ ಎಂದು ಹೇಳುವ ದಾರ್ಷ್ಯ್ಟ ತೋರಿಸುವುದು ಉಚಿತವಲ್ಲ. ಸಂ ದರ್ಭ 2: ಇನ್ನು ಆ ಲ್‌ಲೈನ್‌ ಸೇವೆಗಳನ್ನು ಬಹುತೇಕ ನಾವೆಲ್ಲರೂ ಬಳಸುತ್ತೇ ವೆ ಆದ್ದರಿಂದ ಡೆಲಿವರಿ ಬಾಯ್‌ಗಳು ನಮ್ಮ ಮನೆ ಬಾಗಿಲು ಬಡಿಯುವುದೂ ಸಾಮಾನ್ಯ. ಆನ್‌ಲೈನ್‌ ಬುಕಿಂಗ್‌ ವೇಳೆ ನಿಮ್ಮ ವಿಳಾಸವನ್ನು ನೀಡಿದ್ದರು ಡೆಲಿವರಿ ಬಾಯ್ಗಳು ನಿಮಗೆ ಕರೆ ಮಾಡಿ ನಿಮ್ಮ ಲೊಕೇಶನ್ ಶೇರ್‌ ಮಾಡಿ ಎಂದು ಮನವಿ ಮಾಡುವುದು ಸಹಜ. ಆಗಲೂ ಅವರಿಗೆ ವಿಳಾಸವಿದೆಯಲ್ಲ ನೋಡಿಕೊಂಡು ಬನ್ನಿ ಎಂದು ಅಹಂ ತೋರಿಸುವುದು ಸಭ್ಯತೆಯಲ್ಲ. ಆಗ ಬೇರೆ ದಾರಿಯಿಲ್ಲದೆ ಅವರ ನಂಬರ್‌ ಪಡೆದು ಸೇವ್‌ ಮಾಡಿಕೊಂಡು ನಮ್ಮ ಲೊಕೇಶನ್ ಶೇರ್‌ ಮಾಡುತ್ತೇವೆ.   ಸಂದರ್ಭ 3 : ಪರಿಚಿತರು, ಸ್ನೇಹಿತರು, ಸಹೋದ್ಯೋಗಿಗಳು, ಸಂಬಂಧಿಗಳು ಇವರೆಲ್ಲ ಆಗಾಗ್ಗೆ ನಂಬರ್‌ಗಳನ್ನು ಬದಲಾಯಿಸುವುದು ಸರ್ವೇ ಸಹಜ. ಇಷ್ಟು ಸಾಲದೆಂಬಂತೆ ಹಳೆಯ ನಂಬರ್‌ಗಳ ಜತೆಗೆ ಹೊಸ ನಂಬರ್‌ಗಳನ್ನು ಸೇರಿಸಿಕೊಳ್ಳುವುದೂ ಹೊಸದಲ್ಲ. ನಮ್ಮಲ್ಲಿ ಅವರ ಹಳೆಯ ನಂಬರ್‌ ಇರುತ್ತದೆ. ಆದರೆ ಅವರು ಮಾತ್ರ ಅವರ ಹೊಸ ನಂಬರ...