'ಚಿಂತನ ಬಯಲು' ಎಂಬ ಸಂಶೋಧನಾ ಪತ್ರಿಕೆ (Research Journal) ಯಲ್ಲಿ ಪ್ರಕಟವಾದ ಪ್ರೊ. ಎಸ್. ಎನ್. ಬಾಲಗಂಗಾಧರ ಅವರ ಸಂದರ್ಶನ * ರಮೇಶ್ ನಿಂಬೆಮರ್ದಳ್ಳಿ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಕಗಳ ಅಧ್ಯಯನ ಕೇಂದ್ರ'ದ ನಾಡಿನ ಚಿಂತಕರೆನಿಸಕೊಂಡವರು ಧ್ವನಿಯೆತ್ತಿದ ಬಗ್ಗೆ ಡಾ ರಾಜಾರಾಮ್ ಹೆಗಡೆಯವರ ಲೇಖನ ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಈ ಕೇಂದ್ರದ ಬಗ್ಗೆ ಮತ್ತು ವಿವಾದದ ಹಿನ್ನೆಲೆಯ ಬಗ್ಗೆ ಮಾಹಿತಿ ಇದ್ದರೆ ಒಳ್ಳೆಯದಿತ್ತು ಎಂದು ಹಲವು ಓದುಗರು ತಿಳಿಸಿದ್ದರು. ಆದ್ದರಿಂದ, ಕನ್ನಡ ನಾಡಿನ ಬುದ್ಧಿಜೀವಿಗಳು ಈ ಕೇಂದ್ರವನ್ನು ವಿರೋಧಿಸಲು ಕಾರಣವಾದ, ಬಾಲಗಂಗಾಧರ ಅವರ ಚಿಂತನೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಅವರ ಕಿರು ಸಂದರ್ಶನವೊಂದನ್ನು ಇಲ್ಲಿ ಪ್ರಕಟಿಸಲಾಗಿದೆ. - ಚಿಂತನ ಬಯಲು ಸಂಪಾದಕ
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ ಡಾ.ರಮೇಶ್ ನಿಂಬೆಮರದಹಳ್ಳಿ ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಕ್ರಾಂತಿಗೆ ಚಾಲನೆ ದೊರೆತಿದ್ದು, ಹಲವು ವಾಹನ ಉತ್ಪಾದಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಆದರೆ, ಈಗಾಗಲೇ ಗ್ರಾಹಕರ ಬಳಿಯಿರುವ ಮತ್ತು ಮುಂದೆ ಸೇರುವ ಐಸಿ (ಇಂಟರ್ನಲ್ ಕಂಬಷನ್) ಎಂಜಿನ್ ವಾಹನಗಳನ್ನು ಏನು ಮಾಡುವುದು? ಇದಕ್ಕೆ ಬೆಂಗಳೂರಿನ ಸ್ಟಾರ್ಯ ಮೊಬಿಲಿಟಿ ಪರಿಹಾರ ಕಂಡುಹಿಡಿದಿದೆ. ಈ ಕಂಪನಿ ಅತ್ಯಂತ ಸುಲಭವಾಗಿ ಯಾವುದೇ ದ್ವಿಚಕ್ರ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸುತ್ತದೆ. ನಾಲ್ವರು ತಂತ್ರಜ್ಞಾನ ಪರಿಣತರು ಮತ್ತು ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಸೇರಿ 2018ರ ಜುಲೈನಲ್ಲಿ ಆರಂಭಿಸಿದ ಸ್ಟಾರ್ಯ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಎನ್ನುವ ನವೋದ್ಯಮ ಇವಿ ಕ್ಷೇತ್ರದಲ್ಲಿ ದೇಶದ ಬಹುದೊಡ್ಡ ಸಮಸ್ಯೆಗೆ ಸುಲ‘ ಪರಿಹಾರ ನೀಡುವ ಭರವಸೆ ನೀಡಿದೆ. ಈ ಐಡಿಯಾ ಹೊಳೆದದ್ದು ಹೇಗೆ? ಎಲ್ಲರೂ ಸುಧಾರಿತ ಇವಿ ವಾಹನಗಳ ಉತ್ಪಾದನೆಗೆ ಗಮನ ಹರಿಸಿದ್ದರೆ ಸ್ಟಾರ್ಯ ಮಾತ್ರ ಇರುವ ಪೆಟ್ರೋಲ್ ಆಧಾರಿತ ಬೈಕ್ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಇಂಥ ಐಡಿಯಾ ನಿಮಗೆ ಹೇಗೆ ಬಂತು ಎಂದು ಸ್ಟಾರ್ಯ ಮೊಬಿಲಿಟಿಯ ಮ್ಯಾನೇಜಿಂಗ್ ಡೈರೆಕ್ಟರ್ ರವಿಕುಮಾರ್ ಜಗನ್ನಾಥ್ ಅವರನ್ನು ಕೇಳಿದಾಗ, ‘‘ಭಾರತದಲ್ಲಿ ಹೊಂಡಾ ಆಕ್ಟೀವ ಮತ್ತು ಟಿವಿಎಸ್ ಜುಪೀಟರ್ ಎ...
ಕಂಪ್ಯೂಟರ್ನಲ್ಲಿ ಕನ್ನಡ ಬರೆಯುವುದು ಹೇಗೆ? ಇದು ಕಂಪ್ಯೂಟರ್ ಬಳುಸವ ಬಹುತೇಕ ಕನ್ನಡಿಗರ ಬಹುದೊಡ್ಡ ಪ್ರಶ್ನೆ. ಕನ್ನಡದಲ್ಲಿ ಮೇಲ್ ಕಳಿಸುವ ಅವಕಾಶ ಇದ್ದಿದ್ದರೆ ಎಷ್ಟು ಚೆನ್ನ ಇತ್ತು? ಚಾಟ್ ಮಾಡುವಾಗ ಕನ್ನಡದಲ್ಲೂ ಒಂದಷ್ಟು ಡೈಲಾಗ್ ಹೊಡೆಯುವಂತಿದ್ದರೆ.... ಆಹಾ!!! ? ಫೈಲ್ ಮತ್ತು ಪೋಲ್ಡರ್ಗಳನ್ನು ನಮ್ಮದೇ ಭಾಷೆಯಲ್ಲಿ ಸೇವ್ ಮಾಡುವ ಅವಕಾಶ ಇದ್ದಿದ್ದರೆ? ಬ್ಗಾಗ್ಗಳಲ್ಲಿ ಅರ್ಥವಾಗದೆ ಅವಾಂತರ ಸೃಷ್ಟಿಸುವ inglish kannadavannu (ಇಂಗ್ಲೀಷ್ ಕನ್ನಡದಲ್ಲಿ nanu nimma abhimani - ಇದನ್ನು ನನು ನಿಮ್ಮ ಅಭಿಮನಿ , paipoti tevravagi nadiyuttide - ಪಾಯ್ಪೊಟಿ ತೆವ್ರವಗಿ ನದಿಯುಟ್ಟಿದೆ ಎಂದೂ ಓದಬಹುದು ಇದರ ಸರಿಯಾಧ ಅರ್ಥ ಪೈಪೋಟಿ ತೀವ್ರವಾಗಿ ನಡೆಯುತ್ತಿದೆ ಎಂದು. ಇದರ ಅವಾಂತರಗಳು ಒಂದಲ್ಲ ಎರಡಲ್ಲ.. ) ಬಿಟ್ಟು ಕನ್ನಡದಲ್ಲೇ ಕಾಮೆಂಟ್ ಬರೆಯುವಂತಿದ್ದರೆ? ಎಂಎಸ್ ವರ್ಡ್, ಎಕ್ಸೆಲ್, ಪವರ್ಪಾಯಿಂಟ್ನಲ್ಲಿ ಕನ್ನಡದಲ್ಲೇ ಲೆಟರ್, ಪ್ರೆಸೆಂಟೇಷನ್, ಚಾರ್ಟ್ ಎಲ್ಲವನ್ನೂ ತಯಾರಿಸುವ ಹಾಗಿದ್ದರೆ? ನಿಮ್ಮ ಇಂಥ ಹತ್ತಾರು ಪ್ರಶ್ನಗಳಿಗೆ ಈ ಲೇಖನ ಉತ್ತರ ಒದಗಿಸುತ್ತದೆ. ಕಂಪ್ಯೂಟರ್ನಲ್ಲಿ ಕನ್ನಡ ಟೈಪ್ ಮಾಡಲು ಎರಡು ವಿಧಾನಗಳಿವೆ. ಅವು ಮೂಲಭೂತವಾಗಿ ಒಂದು ANSI ಮತ್ತೊಂದು UNICODE ಮಾದರಿಯವು. ನಮ್ಮ ಬರಹ, (ಬರಹ ಈಗ ಯೂನಿಕೋಡ್ನಲ್ಲೂ ಲಭ್ಯವಿದೆ) ನುಡಿ ಮತ್ತು ಶ್ರೀಲಿಪಿ ಇವೆಲ್ಲ ANSI ಪಾರ್ಮ್ಯಾಟ್ನಲ್ಲ...
Comments
Post a Comment