ಮುರಿದು ಬೀಳುತ್ತಿವೆ ಲಿವ್-ಇನ್ ಸಂಬಂಧಳು
* ರಮೇಶ್ ನಿಂಬೆಮರ್ದಳ್ಳಿ
ಕಾಸ್ಮೋಪಾಲಿಟನ್ ಬೆಂಗಳೂರು ಹಲವು ವಿಸ್ಮಯ, ವಿಚಿತ್ರಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ. ಅಂತಹ ವಿಚಿತ್ರಗಳಲ್ಲಿ ತಾತ್ಕಾಲಿಕ 'ಲಿವ್-ಇನ್' ಸಂಬಂಧವೂ ಒಂದು. ಇತ್ತೀಚೆಗೆ, ಹೀಗೆ ಲಿವ್-ಇನ್ ಸಂಬಂಧಗಳು ಮುರಿದುಬೀಳುತ್ತಿರುವ ಪ್ರಕರಣ ಬೆಂಗಳೂರಿನಲ್ಲಿ ಹೆಚ್ಚುತ್ತಿವೆ.
ಮದುವೆಯ ಗೋಜಲು ಬಯಸದ, ಸಂಸಾರದ ಜವಾಬ್ದಾರಿಗೆ ಒಲ್ಲೆ ಎನ್ನುವ ಆದರೆ ಸಾಂಸಾರಿಕ ಸುಖ ಬೇಕೆನ್ನುವ ಮನಸ್ಸುಗಳು 'ಲಿವ್-ಇನ್' ಸಂಬಂಧಕ್ಕೆ ಕಟ್ಟು ಬೀಳುತ್ತವೆ. ಸಾಮಾನ್ಯವಾಗಿ ಈ ತೆರನಾದ ಸಂಬಂಧಕ್ಕೆ ಹಾತೊರೆಯುವವರಲ್ಲಿ ಬಹುತೇಕ ಐಟಿ ಮತ್ತು ಬಿಪಿಓ ಕಂಪನಿಗಳಲ್ಲಿ ಕೆಲಸ ಮಾಡುವವರೇ ಆಗಿರುತ್ತಾರೆ. ಬೆಂಗಳೂರು ನಗರ ಪೊಲೀಸ್ ಇಲಾಖೆಯ ಕೌಟುಂಬಿಕ ಸಲಹಾ ಕೇಂದ್ರದ ಪ್ರಕಾರ, ಇಂಥ ಲಿವ್-ಇನ್ ಸಂಬಂಧಗಳು ಮುರಿದುಬೀಳುತ್ತಿರುವುದು ಹೆಚ್ಚುತ್ತಿದೆ.
ಕಳೆದ 2011-2012ರ ಅವಧಿಯಲ್ಲಿ ಈ ರೀತಿ ಮುರಿದುಬಿದ್ದ ಸಂಬಂಧಗಳು 30. ಈ ಬಾರಿ ಅಂದರೆ ಏಪ್ರಿಲ್ 2012ರಿಂದ ಮಾರ್ಚ್ 2013ರ ಅವಧಿಯಲ್ಲಿ 42 ಲಿವ್-ಇನ್ ಜೋಡಿಗಳು ಸಂಬಂಧ ಕಡಿದುಕೊಂಡಿವೆ. ಅಂದರೆ, ಪ್ರತಿ ತಿಂಗಳು ಸರಾಸರಿ 6 ಜೋಡಿಗಳು ಲಿವ್-ಇನ್ ಸಂಬಂಧಗಳನ್ನು ಮುರಿದುಕೊಳ್ಳುತ್ತಿವೆ.
ಬಹತೇಕ ಲಿವ್-ಇನ್ ಜೋಡಿಗಳ ವಯಸ್ಸು 23ರಿಂದ 35. ಪರಸ್ಪರ ಆಧಾರಕ್ಕೋ, ಬೆಚ್ಚಗಿನ ಬಾಂಧವ್ಯಕ್ಕೋ, ಸುರಕ್ಷತೆಗೋ.. ವಿವಿಧ ಕಾರಣಗಳಿಗಾಗಿ ಹುಡುಗ, ಹುಡುಗಿ ಪರಸ್ಪರ ಒಟ್ಟಿಗೆ ಬದುಕಲು ನಿರ್ಧರಿಸುತ್ತಾರೆ. ಕೌಟುಂಬಿಕ ಸಲಹೆಗಾರರ ಪ್ರಕಾರ, ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಭದ್ರತೆಗಾಗಿ ಬಹುತೇಕರು ಇಂಥ ಸಂಬಂಧಗಳಿಗೆ ಜೋತು ಬೀಳುತ್ತಾರೆ. ಆದರೆ ಕೆಲ ವರ್ಷಗಳ ನಂತರ ಹುಡುಗ ತಾಳಿ ಕಟ್ಟಲು ನಿರಾಕರಿಸಿದಾಗ ಸಂಬಂಧ ಮುರಿದುಬೀಳುತ್ತದೆ.
ಬೆಂಗಳೂರಿನಲ್ಲಿ ಕಂಡುಬರುವ ಬಹುತೇಕ ಲಿವ್-ಇನ್ ಜೋಡಿಗಳು ಕರ್ನಾಟಕದ ಹೊರಗಿನವರು. ಹೊರಗಿನಿಂದ ಬಂದವರು 'ಒಟ್ಟಿಗೆ' ಬದುಕಲು ತಮ್ಮದೇ ಪ್ರದೇಶಗಳ ಸಂಗಾತಿಗಳನ್ನೇ ಹುಡುಕಿಕೊಳ್ಳುತ್ತಾರೆ. ಮನೆ ಬಾಡಿಗೆದಾರರಿಗೆ, ಅಕ್ಕಪಕ್ಕದವರಿಗೆ ತಾವು ವಿವಾಹಿತರೆಂದೇ ಹೇಳಿಕೊಳ್ಳುತ್ತಾರೆ. 'ಅವರು ಗಂಡ-ಹೆಂಡಿರಂತೆಯೇ ಬದುಕುತ್ತಾರೆ. ಆದರೆ ಅವರ ದಾಂಪತ್ಯಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಆ ಸಂಬಂಧ ಮುರಿದುಬಿದ್ದಾಗ ಅಂತಹ ಪ್ರಕರಣಗಳನ್ನು ನಾವು ಮೋಸ, ವಂಚನೆಯ ಪ್ರಕರಣವೆಂದು ಪೊಲೀಸರಿಗೆ ಶಿಫಾರಸು ಮಾಡುತ್ತೇವೆ' ಎಂದು ಸಹಾಯವಾಣಿಯಲ್ಲಿ ಸಲಹೆಗಾರರಾಗಿರುವ ಅಪರ್ಣ ಪೂಣೇಶ್ ಹೇಳುತ್ತಾರೆ. 'ನಮ್ಮಲ್ಲಿ ಬರುವ ಬಹುತೇಕರು ಸೋಷಿಯಲ್ ಮೀಡಿಯಗಳಲ್ಲಿ ಪರಸ್ಪರ ಪರಿಚಯವಾದವರು. ಅಲ್ಲಿ ಪರಸ್ಪರರ ಭಾಷೆ, ಆಸಕ್ತಿಗಳನ್ನು ಹಂಚಿಕೊಳ್ಳುತ್ತಾರೆ. ಇದು ಪರಸ್ಪರರನ್ನು ಹತ್ತಿರ ಸೆಳೆಯುತ್ತದೆ.' ಎಂದು ಅವರು ಲಿವ್-ಇನ್ ಸಂಬಂಧದ ಸ್ವರೂಪವನ್ನು ವಿವರಿಸುತ್ತಾರೆ.
27 ವರ್ಷದ ರೂನ (ಹೆಸರು ಬದಲಿಸಲಾಗಿದೆ) ಅಮೆರಿಕ ಎಂಎನ್‌ಸಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆನ್‌ಲೈನ್‌ನಲ್ಲಿ ಚಾಟ್ ಮಾಡುವಾಗ ಬೆಂಗಳೂರಿನಿಂದ ಬಿಸ್ವಜಿತ್(ಹೆಸರು ಬದಲಿಸಲಾಗಿದೆ) ಎಂಬುವವರ ಪರಿಚಯವಾಯಿತು. ಪರಿಚಯ ಗಾಢವಾಯಿತು. ಬಿಸ್ವಜಿತ್ ಬೆಂಗಳೂರಿನಲ್ಲೇ ಕೆಲಸ ಕೊಡಿಸುವುದಾಗಿ ಹೇಳಿ, ರೂನಳನ್ನು ಬೆಂಗಳೂರಿಗೆ ಕರೆದ. ಅಮೆರಿಕದ ತನ್ನ ಉದ್ಯೋಗಕ್ಕೆ ಗುಡ್‌ಬೈ ಹೇಳಿದ ರೂನ, ಬೆಂಗಳೂರಿಗೆ ಬಂದೇ ಬಿಟ್ಟಳು. ಇಲ್ಲಿ ಅವಳಿಗೆ ಒಂದು ಕೆಲಸವೂ ಸಿಕ್ಕಿತು. ಒಂದಷ್ಟು ದಿನ ಪೇಯಿಂಗ್ ಗೆಸ್ಟ್ ನಲ್ಲಿ ರೂನ ಉಳಿದುಕೊಂಡಿದ್ದಳು. ನಂತರ, ಇಬ್ಬರೂ ಬಾಡಿಗೆ ಮನೆ ಮಾಡಿಕೊಂಡು ಒಟ್ಟಿಗೆ ಬಾಳಲು ಆರಂಭಿಸಿದರು.
ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು. ಇದರ ನಡುವೆ ಬಿಸ್ವಜಿತ್ ಅವರ ಪೋಷಕರು ಮದುವೆಗೆ ಒತ್ತಾಯಿಸಿದರು. ಆಗ, ಇದ್ದಕ್ಕಿಂತ ಬಿಸ್ವಜಿತ್ ನಾಪತ್ತೆಯಾದ. ಅವನು ತೆರಳಿದ್ದು, ಮದುವೆಗೆ ಹುಡುಗಿ ನೋಡಲು ಎಂಬುದು ರೂನಳಿಗೆ ನಂತರ ತಿಳಿಯಿತು. ಬಿಸ್ವಜಿತ್ ವಾಪಸ್ ಬಂದ ಬಳಿಕ ಇಬ್ಬರ ನಡುವೆ ಜಗಳವಾಯ್ತು. ಕೊನೆಗೆ ರೂನ ಬಂದಿದ್ದು ಸಹಾಯವಾಣಿಗೆ. ಬಿಸ್ವಜಿತ್ ರೂನಳನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಯಿತು.
ಬಣ್ಣದ ಮಾತಿಗೆ ಮರುಳಾಗಿ ಅಮೆರಿಕದಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬಂದ ರೂನ ಲಿವ್-ಇನ್ ಸಂಬಂಧಕ್ಕೆ ಕಟ್ಟುಬಿದ್ದು ವಂಚನೆಗೊಳಗಾದಳು.

ಎಲ್ಲವೂ ಅನುಕೂಲಕ್ಕಾಗಿ...

ಒಂದು ವಿಚಿತ್ರ ಪ್ರಕರಣ

Comments
Post a Comment